Advertisement

ಸವಣೂರು: ವಿದ್ಯುತ್‌ ಲೈನ್‌ಗೆ ಅಪಾಯಕಾರಿಯಾಗಿದ್ದ ಕೊಂಬೆಗಳ ತೆರವು

02:55 PM May 06, 2018 | |

ಸವಣೂರು: ಮೆಸ್ಕಾಂ ಸವಣೂರು ಶಾಖೆ ವ್ಯಾಪ್ತಿಯಲ್ಲಿ ವಿದ್ಯುತ್‌ ತಂತಿಗಳಿಗೆ ಸಮಸ್ಯೆಯಾಗಿ ಕಂಡುಬರುತ್ತಿದ್ದ ಮರದ ಕೊಂಬೆಗಳನ್ನು ತೆರವುಗೊಳಿಸುವ ಕಾರ್ಯ 15 ದಿನಗಳಿಂದ ನಿರಂತರವಾಗಿ ನಡೆಯುತ್ತಿದೆ.

Advertisement

ಉತ್ತಮ ಗುಣಮಟ್ಟದ ವಿದ್ಯುತ್ತನ್ನು ಗ್ರಾಹಕರಿಗೆ ಪೂರೈಸುವ ನಿಟ್ಟಿನಲ್ಲಿ ಮತ್ತು ವಿದ್ಯುತ್‌ ವ್ಯತ್ಯಯಕ್ಕೆ ಕಾರಣವಾಗುತ್ತಿದ್ದ ಹಿನ್ನೆಲೆಯಲ್ಲಿ ಸವಣೂರು ಮೆಸ್ಕಾಂ ಶಾಖೆಯ ನೂತನ ಜೆಇ ನಾಗರಾಜ್‌ ಕೊಂಬೆಗಳನ್ನು ತೆರವರುಗೊಳಿಸುವ ನಿಟ್ಟಿನಲ್ಲಿ ತಮ್ಮ ಸಿಬಂದಿ ವರ್ಗದೊಂದಿಗೆ ಕಾರ್ಯಪ್ರವೃತ್ತರಾಗಿದ್ದಾರೆ. ಕಾಣಿಯೂರು, ಬೆಳಂದೂರು, ಸವಣೂರು ಗ್ರಾ.ಪಂ.ಗಳ ವ್ಯಾಪ್ತಿಯ ಬಹುತೇಕ ಎಲ್ಲ ಗ್ರಾಮಗಳಿಗೂ ಸವಣೂರು ಸಬ್‌ ಸ್ಟೇಷನ್‌ನಿಂದ ವಿದ್ಯುತ್‌ ಸರಬರಾಜಾಗುತ್ತಿದ್ದು, ಈ ವ್ಯಾಪ್ತಿಯಲ್ಲಿ ತಂತಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿದ್ದ ಮರದ ಕೊಂಬೆ, ಪೊದೆಗಳನ್ನು ತೆರವುಗೊಳಿಸಲಾಗುತ್ತಿದೆ.

ನೂತನ ಜೆಇ ನಾಗರಾಜ್‌ ಅವರು ಸವಣೂರು ಸಬ್‌ ಸ್ಟೇಷನ್‌ ಗೆ ವರ್ಗಾವಣೆಯಾಗಿ ಬಂದ ಬಳಿಕ ವಿದ್ಯುತ್‌ ಗುಣಮಟ್ಟ ಸುಧಾರಿಸಿದೆ ಮತ್ತು ಗ್ರಾಹಕರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದನೆ ದೊರೆಯುತ್ತಿದೆ ಎಂದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಂತಿಗಳಿಗೆ ಮರದ ಗೆಲ್ಲುಗಳು ತಾಗಿಕೊಂಡಿದ್ದಲ್ಲಿ ಲೈನ್‌ಮನ್‌ಗಳ ಗಮನಕ್ಕೆ ತರುವಂತೆ ಜೆಇ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next