Advertisement

ಸವಣೂರು ಶಾಲೆ ಶತಮಾನೋತ್ಸವಕ್ಕೆ ಅದ್ದೂರಿ ಚಾಲನೆ 

03:36 PM Dec 31, 2017 | |

ಸವಣೂರು: ಸ.ಉ. ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವಕ್ಕೆ ಎನ್‌. ಸುಂದರ ರೈ ನಡುಮನೆ ಧ್ವಜಾರೋಹಣ ನಡೆಸುವ ಮೂಲಕ ಚಾಲನೆ ನೀಡಿದರು. ಬಳಿಕ ನಡೆದ ಶಾಲಾ ಗ್ರಂಥಾಲಯಕ್ಕೆ ಪುಸ್ತಕ ಅರ್ಪಿಸುವ ಕಾರ್ಯಕ್ರಮ ‘ಪುಸ್ತಕ ಪ್ರೀತಿ’ಗೆ ಸವಣೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಬಿ.ಕೆ. ಚಾಲನೆ ನೀಡಿದರು.

Advertisement

ಕಾರ್ಯಕ್ರಮದಲ್ಲಿ ನಿವೃತ ಶಿಕ್ಷಣಾಧಿಕಾರಿ ಎಸ್‌.ಜಿ. ಕೃಷ್ಣ ಅವರು ಮಾತನಾಡಿ, ಶಿಕ್ಷಣ ಸಂಸ್ಥೆಯ ಶತಮಾನ ಸಂಭ್ರಮವನ್ನು ಊರಿನ ಹಬ್ಬವಾಗಿ ಆಚರಿಸುತ್ತಿರುವುದು ಶ್ಲಾಘನೀಯ. ಇದು ಇಲ್ಲಿನ ನಾಗರಿಕರ ಶಿಕ್ಷಣ ಪ್ರೀತಿ ಯನ್ನು ಎತ್ತಿ ತೋರಿಸುತ್ತದೆ. ಇಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ಎಲ್ಲರಿಗೂ ಮಾದರಿಯಾಗಿದೆ ಎಂದರು.

ತಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ ಮಾತನಾಡಿ, ಶಾಲಾ ಶತಮಾನೋತ್ಸವವನ್ನು ಅದ್ದೂರಿಯಾಗಿ ಆಚರಿಸುವ ಮೂಲಕ ವಿಭಿನ್ನ ಮನಸುಗಳನ್ನು ಒಂದು ಮಾಡಲಾದೆ. ಸವಣೂರಿನ ಬೆಳವಣಿಗೆಯಲ್ಲಿ ಶಿಕ್ಷಣ ಸಂಸ್ಥೆಯೂ ಪ್ರಮುಖ ಕಾರಣವಾಗಿದೆ. ಇದು ಎಲ್ಲರ ಬದುಕಿನ ದಾರಿದೀಪ ಎಂದರು.

ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ದೇವಕಿ ಮಾತನಾಡಿ, ಸಾಧನೆ, ಕಾರ್ಯಗಳಿಂದ ಗುರುತಿಸಿಕೊಂಡಿರುವ ಸವಣೂರು ಉ.ಹಿ.ಪ್ರಾ. ಶಾಲೆ ಇತರ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಿದೆ. ಈ ಕಾರ್ಯವನ್ನು ಗುರುತಿಸಿ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆಯ ರಾಷ್ಟ್ರೀಯ ಆವಿಷ್ಕಾರ ಯೋಜನೆಗೆ ಸವಣೂರು ಶಾಲೆಯನ್ನು ಆಯ್ಕೆ ಮಾಡಲಾಗಿದೆ. ಇದು ಶಾಲೆಯ ಬೆಳವಣಿಗೆಗೆ ಇನ್ನಷ್ಟು ಅವಕಾಶ ದೊರಕಲಿದೆ ಎಂದರು.

ಪುತ್ತೂರು ರೋಟರಿ ಕ್ಲಬ್‌ ಅಧ್ಯಕ್ಷ ಜಯಂತ್‌ ನಡುಬೈಲು ಮಾತನಾಡಿ, ರೋಟರಿ ಸಂಸ್ಥೆಯ ಮೂಲಕ ಹಲವು ಶಿಕ್ಷಣ ಸಂಸ್ಥೆ ಗಳಲ್ಲಿ ಅಭಿವೃದ್ಧಿ ಕೆಲಸ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸವಣೂರು ಶಾಲಾ ಅಭಿವೃದ್ಧಿ ಕಾರ್ಯ ಸಂಸ್ಥೆಯ ಮೂಲಕ ನಡೆಸಲು ಪ್ರಯತ್ನಿಸಲಾಗುವುದು ಎಂದರು.

Advertisement

ಸವಣೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಬಿ.ಕೆ ಅಧ್ಯಕ್ಷತೆ ವಹಿಸಿದ್ದರು. ಬೆಳಂದೂರು ಕ್ಷೇತ್ರದ ಜಿಲ್ಲಾ ಪಂಚಾಯತ್‌ ಸದಸ್ಯೆ ಪ್ರಮೀಳಾ ಜನಾರ್ದನ, ಸವಣೂರು ಗ್ರಾ.ಪಂ. ಉಪಾಧ್ಯಕ್ಷ ಬಿ.ಕೆ. ರವಿಕುಮಾರ್‌, ಸವಣೂರು ಸಿಆರ್‌ಪಿ ವೆಂಕಟೇಶ್‌ ಅನಂತಾಡಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಕೆ. ಸೀತಾರಾಮ ರೈ ಸವಣೂರು, ಅಧ್ಯಕ್ಷ ದಿನೇಶ್‌ ಮೆದು, ಉಪಾಧ್ಯಕ್ಷ ಶಿವರಾಮ ಗೌಡ ಮೆದು, ಪ್ರಧಾನ ಕಾರ್ಯದರ್ಶಿ ತಾರಾನಾಥ ಸವಣೂರು, ಸಂಯೋಜಕ ಗಿರಿಶಂಕರ ಸುಲಾಯ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಚಂದ್ರಶೇಖರ್‌ ಮೆದು, ಶಾಲಾ ನಾಯಕ ಆಸ್ಮಿತ್‌ ಉಪಸ್ಥಿತರಿದ್ದರು. 

ಶಿಕ್ಷಕರಾದ ಆಶಾಲತಾ ಕೆ., ತುಳಸಿ ಎಚ್‌., ಸರೋಜಾ ಕೆ., ಮೇಬಲ್‌ ರೋಡ್ರಿ ಗಸ್‌, ದೇವಮ್ಮ ಪಿ. ಸಹಕರಿಸಿದರು.
ಶಾಲಾ ಮುಖ್ಯಗುರು ಹರಿಶಂಕರ್‌ ಭಟ್‌ ವರದಿ ವಾಚಿಸಿದರು. ಶತ ಮಾನೋತ್ಸವ ಸಮಿತಿಯ ಕ್ರೀಡಾ ಸಂಯೋಜಕ ಬಾಲಕೃಷ್ಣ ಕೆ. ಸ್ವಾಗತಿಸಿದರು. ಶಿಕ್ಷಕ ಕುಶಾಲಪ್ಪ ಬರೆಮೇಲು ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next