Advertisement
ಸಮಯ ಬದಲಾವಣೆ ಅನುಕೂಲಕರಈಗ ಬೆಳ್ಳಾರೆಯಿಂದ ಬೆಳಗ್ಗೆ 8 ಗಂಟೆಗೆ ಹೊರಡುವ ಸವಣೂರು-ಪುತ್ತೂರು ಬಸ್ 7.30ಕ್ಕೆ ಹೊರಡುವಂತೆ ಸಮಯ ಬದಲಾವಣೆ ಮಾಡಿದರೆ ಅನುಕೂಲವಾಗಬಹುದು. ಜತೆಗೆ 8.30ಕ್ಕೆ ಬೆಳ್ಳಾರೆಯಿಂದ ಹೊರಡುವ ಸವಣೂರು – ಶಾಂತಿಮೊಗರು – ಕಡಬ ಬಸ್ 8.15ಕ್ಕೆ ಹೊರಡುವಂತೆ ಮಾಡಿದರೆ ಸೂಕ್ತ. ಹೆಚ್ಚುವರು ಬಸ್ ಬೇಡಿಕೆಯನ್ನು ಸರಿದೂಗಿಸಬಹುದು.
ಸವಣೂರಿನಿಂದ ಬೆಳ್ಳಾರೆಗೆ ಹೋಗುವ ಸವಣೂರು, ಬೆಳಂದೂರು ಕಾಲೇಜಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಂಜೆ 4.30ರಿಂದ 5 ಗಂಟೆಯ ಅವಧಿಯಲ್ಲಿ ಹೆಚ್ಚುವರಿ ಬಸ್‌ನ ಬೇಡಿಕೆ ವ್ಯಕ್ತವಾಗಿದೆ. ಈಗ ಪುತ್ತೂರಿನಿಂದ 3.45ಕ್ಕೆ ಹೊರಟು ಸವಣೂರಿಗೆ 4.25ಕ್ಕೆ ತಲುಪುತ್ತಿದ್ದು, ಇದರಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿರುತ್ತಾರೆ. ಸವಣೂರಿನಿಂದ ಏರುವ ಮಕ್ಕಳು ಬಸ್‌ನ ಬಾಗಿಲಲ್ಲೇ ನೇತಾಡಿಕೊಂಡು ಪ್ರಯಾಣಿಸುವುದು ಅನಿವಾರ್ಯವಾಗಿದೆ. ಪುತ್ತೂರಿನಿಂದ ಸಂಜೆ 5 ಗಂಟೆಯಿಂದ ಹೊರಡುವ ಬಸ್ 5.30ಕ್ಕೆ ತಲುಪುತ್ತಿದೆ. ಈ ಎರಡೂ ಬಸ್ಸುಗಳ ಮಧ್ಯೆ ಇನ್ನೊಂದು ಹೆಚ್ಚುವರಿ ಬಸ್ ಸವಣೂರು – ಬೆಳ್ಳಾರೆ ನಡುವೆ ಸಂಚರಿಸುವಂತಾದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
Related Articles
ಈ ಹಿಂದೆ ಈ ಮಾರ್ಗವಾಗಿ ಸವಣೂರಿಗೆ ಅಪರಾಹ್ನ 3.45ಕ್ಕೆ ತಲುಪುವಂತೆ ಬಸ್ ಸಂಚಾರವಿತ್ತು. ಈಗ ಆ ಬಸ್ ಸಂಚಾರ ನಿಲ್ಲಿಸಲಾಗಿದೆ. ಪುನಃ ಸಂಚಾರ ಆರಂಭಿಸಿದರೆ ಈ ಸಮಸ್ಯೆಯನ್ನು ಪರಿಹರಿಸಬಹುದು. ಇಲ್ಲದಿದ್ದಲ್ಲಿ ಬೇರೆ ಬಸ್ ನೀಡಬೇಕು. ಈ ಕುರಿತು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಗಮನಹರಿಸಬೇಕಿದೆ.
- ಸತೀಶ್ ಬಲ್ಯಾಯ, ಸದಸ್ಯರು, ಗ್ರಾ.ಪಂ. ಸವಣೂರು
Advertisement
ಬೆಳಗ್ಗೆ ಹೆಚ್ಚುವರಿ ಬಸ್ ಬೇಕುಬೆಳಗ್ಗೆ ಬೆಳ್ಳಾರೆಯಿಂದ 7.30ಕ್ಕೆ ಹೊರಡುವಂತೆ ಬಸ್ ಸಂಚಾರ ಆರಂಭಿಸಿದರೆ ಮುಕ್ಕೂರು, ಬಂಬಿಲ ಭಾಗದಿಂದ ಪುತ್ತೂರಿಗೆ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಈಗ ಹೆತ್ತವರು ನಮ್ಮನ್ನು ಸವಣೂರಿಗೆ ಬಿಟ್ಟು ಬೇರೆ ಬಸ್‌ಗೆ ಹೋಗುವಂತಾಗಿದೆ. ಹೆಚ್ಚುವರಿ ಬಸ್‌ಗಳು ಸಂಚರಿಸುವಂತಾಗಲು ಜನಪ್ರತಿನಿಧಿಗಳು, ಕೆಎಸ್‌ಆರ್ ಟಿಸಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.
– ಬೃಂದಾ ಪಿ.,
ಪ್ರಿಯಾ ಎಸ್.ಎಂ.,
ವಿದ್ಯಾರ್ಥಿಗಳು, ಪುತ್ತೂರು ಪ್ರವೀಣ್ ಚೆನ್ನಾವರ