Advertisement
ತೆರವು ಕಾರ್ಯಾಚರಣೆಯಿಂದ ವ್ಯಾಪಾರಿಗಳು ಮುಂದುವರೆಸದಂತೆ ಬುಧವಾರ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿ ಪ್ರಯೋಜನವಾಗದಿದ್ದಾಗ ಕೆಲ ಮುಖಂಡರುಗಳ ಮೊರೆ ಹೋದರೂ ಫಲಕಾರಿಯಾಗಲಿಲ್ಲ. ಗುರುವಾರ ಮುಂಜಾನೆಯಿಂದಲೇ ಕಾರ್ಯಚರಣೆ ಮುಂದುವರೆಸಲೆತ್ನಿಸಿದರು. ಅಧಿಕಾರಿಗಳ ಜೊತೆ ವ್ಯಾಪಾಸ್ಥರು ಕೆಲ ಸುತ್ತಿನ ಮಾತುಕತೆ ನಡೆದರೂ ಪ್ರಯೋಜನವಾಗಲಿಲ್ಲ.
Related Articles
Advertisement
ಜನವರಿ, ಫೆಬ್ರುವರಿ ತಿಂಗಳಲ್ಲಿ ಬನದ ಮತ್ತು ಭರತ ಹುಣ್ಣಿಮೆಗಳಿವೆ. ವರ್ಷಪೂರ್ತಿಯ ವ್ಯಾಪಾರ ಇವುಗಳಲ್ಲಿ ಮಾತ್ರ ನಡೆಯುತ್ತದೆ. ತುತ್ತಿನ ಚೀಲ ತುಂಬಿಸಿಕೊಳ್ಳಲುವ ಅನುವು ಮಾಡಿಕೊಡಿ. ಜಾತ್ರೆ ಮುಗಿದ ನಂತರ ಅಂಗಡಿಗಳನ್ನು ಸ್ವಯಂ ಪ್ರೇರಿತರಾಗಿ ತೆರವು ಮಾಡಿಕೊಳ್ಳುತ್ತೇವೆಂದು ಅಧಿಕಾರಿಗಳಿಗೆ ಪರಿಪರಿಯಾಗಿ ಕೇಳಿಕೊಂಡರು. ಎರಡು ದಿನಗಳ ಮಟ್ಟಿಗಾದರೂ ತೆರವು ಸ್ಥಗಿತಗೊಳಿಸಿರಿ. ಜಿಲ್ಲಾಧಿಕಾರಿಗೆ ಮನವೊಲಿಸಲು ಪ್ರಯತ್ನಿಸುತ್ತೇವೆ ಎಂದರು.
ಕೊನೆಯಲ್ಲಿ ಒಲ್ಲದ ಮನಸ್ಸಿನಿಂದ ಅಂಗಡಿ ತೆರವಿಗೆ ಮುಂದಾದರು. ಅಲ್ಲಿನ ವಸ್ತಗಳನ್ನು ಟ್ರ್ಯಾಕ್ಟರ್ ಮೂಲಕ ಪಾರ್ಕಿಂಗ್ ಸ್ಥಳಕ್ಕೆ ಸಾಗಿಸಲಾಯಿತು. ಡಿವೈಎಸ್ಪಿ ರಾಮನಗೌಡ ಹಟ್ಟಿ, ಪಿಐ ಕರುಣೇಶಗೌಡ ಜೆ. ಪಿಎಸೈ ಪ್ರವೀಣ ಗಂಗೊಳ್ಳಿ ಭದ್ರತೆಯಿರಿಸಿದ್ದರು.
ಯಲ್ಲಮ್ಮ ಒಳ್ಳೆಯದು ಮಾಡುವದಿಲ್ಲರೀ ಸರ್‘ಅಂಗಡಿಗಳನ್ನು ಕಿತ್ತು ಹೊಟ್ಟೆ ಮೇಲೆ ಹೊಡಿಬ್ಯಾಡ್ರಿ ಸರ್. ಇದರಲ್ಲೇ ಬದುಕು ನಡೆದಿದೆ. ಹುಣ್ಣಿಮೆ ಜಾತ್ರೆ ನಂತರ ನಾವೇ ಹೊರಹೋಗುತ್ತೇವೆ. ಅವಕಾಶ ನೀಡಿ. ಹೊಟ್ಟೆ ಮೇಲೆ ಹೊಡೆದರೆ ತಾಯಿ ಯಲ್ಲಮ್ಮ ಒಳ್ಳೆಯದು ಮಾಡುವದಿಲ್ಲರೀ ಸರ್ ಎಂದು ತೆರವಿನ ವೇಳೆ ವ್ಯಾಪಾರಿಯೋರ್ವಳು ಗೋಗರೆದಳು. ವ್ಯಾಪಾಸ್ಥರನ್ನು ಬೀದಿಗೆ ತಳ್ಳುವ ಪ್ರಮೇಯವೆ ನಮಗಿಲ್ಲ. ಅನಧಿಕೃತವಾದವುಗಳ ತೆರವು ಅನಿವಾರ್ಯ. ಪರ್ಯಾಯವಾಗಿ ವಾಹನ ನಿಲುಗಡೆಯಲ್ಲಿ ವ್ಯವಸ್ಥೆ ಕಲ್ಪಿಸಿಕೊಡಲಾಗುವದು. ಅಭಿವೃದ್ಧಿಗೆ ಕೈಜೋಡಿಸಿ ಸಹಕರಿಸಿರೆಂದು ಯಲ್ಲಮ್ಮ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಬಸವರಾಜ ಜೀರಗಾಳ ಹೇಳಿದರು.