Advertisement

ಸವದತ್ತಿ ರೇಣುಕಾ ಯಲ್ಲಮ್ಮಳ ಸನ್ನಿಧಾನದಲ್ಲಿ ಭರತ ಹುಣ್ಣಿಮೆ ಸಂಪನ್ನ

10:09 PM Feb 05, 2023 | Team Udayavani |

ಸವದತ್ತಿ: ಸಪ್ತ ಕೊಳ್ಳದ ಅದಿದೇವತೆ ರೇಣುಕಾ ಯಲ್ಲಮ್ಮಳ ಸನ್ನಿಧಾನದಲ್ಲಿ ರವಿವಾರ ಜರುಗಿದ ಭರತ ಹುಣ್ಣಿಮೆ ಜಾತ್ರೆಗೆ ಜನ ಸಾಗರವೇ ಹರಿದು ಬಂದಿತ್ತು. ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ, ತೆಲಂಗಾಣ, ಆಂದ್ರಪ್ರದೇಶ, ಗೋವಾ ಸೇರಿ ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಕಾಲ್ನಡಿಗೆ, ಚಕ್ಕಡಿ, ಟ್ರ್ಯಾಕ್ಟರ್ ಹಾಗೂ ಇತರ ವಾಹನಗಳ ಮೂಲಕ ಗುಡ್ಡಕ್ಕೆ ಆಗಮಿಸಿ ಜಾತ್ರೆಯನ್ನು ವಿಜ್ರಂಬಣೆಯಿಂದ ಆಚರಿಸಿ ದೇವಿ ಕೃಫೆಗೆ ಪಾತ್ರರಾದರು.

Advertisement

ಕಣ್ಣು ಹಾಯಿಸಿ ಕಡೆಯಲ್ಲ ಜನ ಸಮೂಹ. ಉಧೋ ಉಧೋ ಯಲ್ಲಮ್ಮ ನಿನ್ನಾಲ್ಕುಧೋ ಎಂಬ ದೇವಿಯ ನಾಮಸ್ಮರಣೆ ದಶ ದಿಕ್ಕುಗಳಲ್ಲಿ ಪ್ರತಿಧ್ವನಿಸಿತು. ಪೌರಾಣಿಕ, ಧಾರ್ಮಿಕ ಹಾಗೂ ಪಾರಂಪರಿಕ ಹಿನ್ನಲೆ ಹೊಂದಿರುವ ತ್ರೀವೇಣಿ ಸಂಗಮದಂತಿರುವ ಅಮ್ಮನ ಸನ್ನಿಧಿಯಲ್ಲಿ ಭಕ್ತ ಸಮೂಹ ಕುಟುಂಬ ಸಮೇತರಾಗಿ ದೇವಿಗೆ ವಿವಿಧ ಖಾಧ್ಯ ತಯಾರಿಸಿ ನೈವೇದ್ಯ ಮತ್ತು ಪರಡಿ ತುಂಬಿಸಿದರು. ಸಾಂಪ್ರದಾಯದಂತೆ ಪೂಜಾದಿ ಕೈಂಕೈರ್ಯ ನಡೆಸಿ ʼಜಗವನ್ನು ರಕ್ಷಿಸು ಜಗದಮ್ಮಾʼ ಎಂದು ಪ್ರಾರ್ಥಿಸುವ ದೃಶ್ಯಗಳ ಕಂಡು ಬಂದವು.

ಮುಂಜಾನೆ ಜೋಗುಳಬಾವಿ, ಎಣ್ಣೆ ಹೊಂಡದ ಪವಿತ್ರ ಜಲದಲ್ಲಿ ಸ್ನಾನಗೈದ ಭಕ್ತರು ಬಳಿಕ ದೇವಿಯ ದರ್ಶನ ಪಡೆದು ಪುನೀತರಾದರು. ಜೋಗುತಿಯರು ದೇವಿಯ ಮೂರ್ತಿ ಹೊತ್ತು, ವಿವಿಧ ವಾದ್ಯಮೇಳಗಳೊಂದಿಗೆ ಸಾಂಸ್ಕøತಿಕ ಕುಣಿತ ಹಾಕುತ್ತಾ ದೇವಸ್ಥಾನದತ್ತ ಹೆಜ್ಜೆ ಹಾಕಿದ್ದರು. ಭಂಡಾರ ಹಚ್ಚಿಕೊಂಡು, ಹರಕೆ ತೀರಿಸುವ ಕಾರ್ಯಗಳೂ ಭರದಿಂದ ಸಾಗಿದ್ದವು. ಒಟ್ಟಾರೆಯಾಗಿ ಭರತ ಹುಣ್ಣಿಮೆ ಜಾತ್ರೆ ವಿಜೃಂಭನೆಯಿಂದ ಜರುಗಿತು.

ಕುಂಕುಮ-ಭಂಡಾರ ವ್ಯಾಪಾರ ಬಲು ಜೋರು
ಅಮ್ಮನಿಗೆ ಪ್ರೀಯವೆನಿಸಿದ ಕುಂಕುಮ-ಭಂಡಾರ ವ್ಯಾಪಾರ ಬಲು ಜೋರಗಿತ್ತು. ದೇವಸ್ಥಾನ ಸುತ್ತಲಿರುವ ಕುಂಕುಮ-ಭಂಡಾರದ ಅಂಗಡಿಗಳಿಗೆ ಮುಗಿಬಿದ್ದು ಖರೀದಿ ನಡೆಸಿದರು. ಯಲ್ಲಮ್ಮ ದೇವಿ ಮುತ್ತೈದೆಯಾದ ಪೌರಾಣಿಕ ಹಿನ್ನಲೆ ಭಕ್ತರು ಹಳೆ ಪರಡಿ ಬದಲಾಯಿಸಿ ಹೊಸ ಪರಡಿ, ಹಣ್ಣು, ಕಾಯಿ, ಬಳೆ ಹಾಗೂ ಕುಂಕುಮ-ಭಂಡಾರ ಖರೀದಿಸಿ ಪರಡಿ ತುಂಬಿಸುವ ಕಾರ್ಯ ನಡೆಸಿದರು.

ಸದ್ದು ಮಾಡಿದ ಹಸಿರು ಬಳೆಗಳು
ಮುತ್ತೈದೆ ಹುಣ್ಣಿಮೆಯೆಂದು ಕರೆಯುವ ಭರತ ಹುಣ್ಣಿಮೆಯಂದು ಯಲ್ಲಮ್ಮ ದೇವಿ ಪತಿ ಋಷಿ ಜಮದಗ್ನಿ ಮರುಜನ್ಮ ಪಡೆಯುತ್ತಾರೆ. ಇದರ ಪ್ರತೀಕವಾಗಿ ಪ್ರತಿ ವರ್ಷ ಭರತ ಹುಣ್ಣಿಮೆ ದಿನ ಎಲ್ಲ ಮುತ್ತೈದೆಯರು ದೇವಸ್ಥಾನಕ್ಕೆ ಬಂದು ಮೊದಲಿದ್ದ ಬಳೆಗಳನ್ನು ತೆಗೆಸಿ ಹೊಸ ಹಸಿರು ಬಳೆಗಳನ್ನು ಧರಿಸುವ ವಾಡಿಕೆ ಇದೆ. ಇದರಿಂದ ಗುಡ್ಡದಲ್ಲಿ ಹಸಿರು ಬಳೆಗಳ ವ್ಯಾಪಾರ ಭಾರೀ ಸದ್ದು ಮಾಡಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next