Advertisement

ಸವದತ್ತಿ:ರೈಲು ಮಾರ್ಗ- ಸವದತ್ತಿಗೇ ಜಾಸ್ತಿ ಲಾಭ! ಆರ್ಥಿಕ ಅಭಿವೃದ್ಧಿಗೆ ನೆರವು…

05:14 PM Nov 18, 2024 | Team Udayavani |

ಉದಯವಾಣಿ ಸಮಾಚಾರ
ಸವದತ್ತಿ: ಲೋಕಾಪುರ-ರಾಮದುರ್ಗ-ಸವದತ್ತಿಗೆ ರೈಲು ಮಾರ್ಗವಾದಲ್ಲಿ ಯಲ್ಲಮ್ಮ ದೇವಿ ಭಕ್ತರಿಗೆ ಹೆಚ್ಚು ಲಾಭವಾಗಲಿದೆ. ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಲಿದೆ. ಜಾತ್ರಾ ಸಮಯದಲ್ಲಿ ತಲೆದೋರುವ ಸಂಚಾರ ದಟ್ಟಣೆ ಸಮಸ್ಯೆ ತಕ್ಕಮಟ್ಟಿಗೆ ನಿಯಂತ್ರಣಕ್ಕೆ ಬರಲಿದೆ. ನಿತ್ಯ ಬಸ್‌ ಮೂಲಕ ಧಾರವಾಡಕ್ಕೆ ತೆರಳುವ ಇಲ್ಲಿನ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ, ನೌಕರರಿಗೆ ಅನುಕೂಲವಾಗಲಿದೆ. ಸರಕು ಸಾಗಾಟ ಸರಳೀಕರಣವಾಗಲಿದೆ. ಉದ್ಯೋಗ ಹೆಚ್ಚಲಿದೆ. ಕ್ಷೇತ್ರ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರ ನೀಡುತ್ತದೆ. ಲಕ್ಷಾಂತರ ಜನರು ರೈಲಿನಲ್ಲಿಯೇ ಬಂದು ದರ್ಶನ ಪಡೆದು ಹೋಗುತ್ತಾರೆ.

Advertisement

ಪ್ರತಿಭಟನೆ ಹಾದಿ: ರೈಲು ಮಾರ್ಗಕ್ಕಾಗಿ ಕೆಲವೆಡೆ ಜನರು ಸ್ವಯಂ ಪ್ರೇರಿತರಾಗಿ ಬೀದಿಗಿಳಿದು ಪ್ರತಿಭಟನೆ ಹಾದಿ ಹಿಡಿದಿದ್ದಾರೆ. ಈ ಹಿಂದೆ ಮಾಜಿ ಸಂಸದ ದಿ. ಸುರೇಶ ಅಂಗಡಿ ಅವರಿಗೆ ಇಲ್ಲಿನ ತಾಪಂನಲ್ಲಿ ಜರುಗಿದ ಸಭೆಯಲ್ಲಿ ಕೆಲ ಜನರು ರೈಲುಮಾರ್ಗಕ್ಕಾಗಿ ಮನವಿ ಸಲ್ಲಿಸಿದ್ದರು.

ದಶಕಗಳ ನಂತರ ಸಂಸದ ಜಗದೀಶ ಶೆಟ್ಟರ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿ‌ನ್‌ ವೈಷ್ಣವ್‌ರನ್ನು ಭೇಟಿ ಮಾಡಿ ಈ ಕುರಿತು ಚರ್ಚಿಸಿದ ಬಳಿಕ ಬೇಡಿಕೆಗೆ ಬಲ ಬಂದಂತಾಗಿದೆ. ಆದರೆ ಬೆಳಗಾವಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಚಿವ ಸೋಮಣ್ಣ ಅವರು ಜನರಿಗೆ ರೈಲು ಮಾರ್ಗದ ಭರವಸೆ ನೀಡಿದರೂ ಅಧಿಕಾರಿಗಳ ಸಭೆಯಲ್ಲಿ ಕೇವಲ ಧಾರವಾಡ-ಕಿತ್ತೂರು-ಬೆಳಗಾವಿ ರೈಲ್ವೆ ಮಾರ್ಗ ಕುರಿತು ಮಾತ್ರ ಚರ್ಚಿಸಿರುವುದು ನಿರಾಸೆ ಮೂಡಿಸಿದೆ.

ಇಲ್ಲಿನ ಜನರ ಬಹುದಿನದ ಬೇಡಿಕೆಯಾಗಿರುವ ರೈಲು ಮಾರ್ಗ ನಿರ್ಮಿಸಲು ಸಾರ್ವಜನಿಕರ ಹಿತಾಸಕ್ತಿ ಜತೆ ಜನಪ್ರತಿನಿ ಧಿಗಳ ಇಚ್ಛಾಶಕ್ತಿ ಅವಶ್ಯವಾಗಿದೆ. ರೈಲು ಮಾರ್ಗ ನಿರ್ಮಿಸಿದಲ್ಲಿ ವಿನೂತನ ಉದ್ದಿಮೆಗಳು ಜನರ ಕೈಗೆ ತಾಕಲಿವೆ. ರೈಲ್ವೆಗಾಗಿ ಕ್ಷೇತ್ರದಲ್ಲಿ ಪಕ್ಷಾತೀತವಾಗಿ, ಜಾತ್ಯತೀತವಾಗಿ ಒಗ್ಗೂಡಲು ಹಿತಾಸಕ್ತಿ ಮುಖ್ಯ. ಅಗತ್ಯವಿದ್ದಲ್ಲಿ ಮುಂದಿನ ಹೋರಾಟದ
ರೂಪರೇಷೆ ಕುರಿತು ರೂಪಿಸಲಾಗುವುದು.
●ಫಕ್ರುಸಾಬ ನದಾಫ್‌, ಸಾಮಾಜಿಕ
ಹೋರಾಟಗಾರರು, ಸವದತ್ತಿ.

ಯಲ್ಲಮ್ಮ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಹಾಗೂ ಇಲ್ಲಿನ ಸಾರ್ವಜನಿಕರಿಗೆ ರೈಲಿನ ಅವಶ್ಯಕತೆ ಹೆಚ್ಚಿದೆ. ಇದರಿಂದ ಕ್ಷೇತ್ರ ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕವಾಗಿ ಅಭಿವೃದ್ಧಿ ಪಥದತ್ತ ಸಾಗಲು ಸಹಕಾರಿಯಾಗಲಿದೆ.
●ಸುನೀಲ ನಾರಾಯಣ ತಾರಿಹಾಳ, ಅಧ್ಯಕ್ಷರು,
ಗುರ್ಲಹೊಸೂರು ಗೆಳೆಯರ ಬಳಗ, ಸವದತ್ತಿ.

Advertisement

■ ಮಂಜುನಾಥ ಜಗದಾರ

Advertisement

Udayavani is now on Telegram. Click here to join our channel and stay updated with the latest news.

Next