Advertisement
ಪ್ರಾಸ್ತಾವಿಕವಾಗಿ ಮಾತನಾಡಿದ ಪುರಂದರ ಗೌಡ ಕಡಿರ, ಎಂಡೋ ಸಂತ್ರಸ್ತರ ಬಾಳಿನಲ್ಲಿ ಸರಕಾರ ಚೆಲ್ಲಾಟ ವಾಡುತ್ತಿದ್ದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಎಂಡೋ ಸಂತ್ರಸ್ತರು ಹೋಗಿ ಪ್ರತಿಭಟಿಸಿಯೂ ಸರಕಾರದ ನಿರ್ಲಕ್ಷ್ಯ ಧೋರಣೆ ಮುಂದುವರಿಸಿದೆ. ಇದೀಗ ನಿರ್ಣಾಯಕ ಹೋರಾಟ ನಡೆಸಿ ಈ ಸಮಸ್ಯೆಗೆ ತಾರ್ಕಿಕ ಅಂತ್ಯ ತರಲು ಉದ್ದೇಶಿಸಿ ಈ ಸಮಾಲೋಚನ ಸಭೆ ಕರೆಯಲಾಗಿದೆ ಎಂದು ನುಡಿದರು.
Related Articles
Advertisement
ಕೊಕ್ಕಡದಲ್ಲಿ ಕೆಲವು ದಿನಗಳ ಹಿಂದೆ ಎಂಡೋಸಂತ್ರಸ್ತ ಕುಟುಂಬದ ಸಾಮೂಹಿಕ ಆತ್ಮಹತ್ಯೆ ಯಂತಹ ಘಟನೆ ನಡೆದರೂ ಸರಕಾರದ ಯಾವುದೇ ಪ್ರತಿನಿಧಿಗಳೂ ಕನಿಷ್ಠ ಇಲ್ಲಿಗೆ ಭೇಟಿ ನೀಡಿ ಸಾಂತ್ವನ ಕೂಡ ಹೇಳಿಲ್ಲ.
ಸರಕಾರಿ ಕೃಪಾಪೋಷಿತ ಎಂಡೋ ಸಿಂಪಡಣೆಯಿಂದಾಗಿ ಉಂಟಾದ ಈ ದುರವಸ್ಥೆಗೂ ಸರಕಾರದ ಬಳಿ ಪರಿಹಾರಕ್ಕಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣ ಮಾಡುತ್ತಿರುವ ಸರಕಾರದ ಹಾಗೂ ಇಲಾಖಾಧಿಕಾರಿಗಳ ವಿರುದ್ಧ ಈ ಬಾರಿ ಮಾಡು ಇಲ್ಲವೇ ಮಡಿ ಅನ್ನುವ ಹೋರಾಟ ಮಾಡುವ ಉದ್ದೇಶದಿಂದ ಈ ಸಭೆ ನಡೆದಿದೆ. ಕಳೆದ ಬಾರಿ ಬೆಂಗಳೂರಿಗೆ ಹೋಗಿ ಎಂಡೋ ಸಂತ್ರಸ್ತರು ಪ್ರತಿಭಟಿಸಿದರೂ ನಿರೀಕ್ಷಿತ ಪರಿಹಾರಗಳು ಲಭ್ಯವಾಗದ ಕಾರಣ ಈ ಬಾರಿ ಹೋರಾಟವು ತಾರ್ಕಿಕ ಅಂತ್ಯ ಕಾಣುವುದಕ್ಕೋಸ್ಕರ ಕೊಕ್ಕಡ ದಲ್ಲಿಯೇ ಆಮರಣಾಂತ ಉಪ ವಾಸ ನಡೆಸಲಾಗುವುದು. ಮುಖ್ಯಮಂತ್ರಿಗಳು ಇಲ್ಲಿಗೆ ಬಂದು ಎಂಡೋಸಂತ್ರಸ್ತರ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.
750ಕ್ಕಿಂತಲೂ ಹೆಚ್ಚು ಸಂತ್ರಸ್ತರು ಇದರಲ್ಲಿ ಪಾಲ್ಗೊಂಡಿದ್ದರು.ವೇದಿಕೆಯಲ್ಲಿ ಹಿರಿಯ ಬಿಜೆಪಿ ಮುಖಂಡ ಪೂವಾಜೆ ಕುಶಾಲಪ್ಪಗೌಡ, ನ್ಯಾಯವಾದಿ ಹರೀಶ್ ಪೂಂಜ, ಸೇವಾ ಭಾರತಿ ಕನ್ಯಾಡಿ ಇದರ ಸಂಯೋಜಕ ವಿನಾಯಕ ರಾವ್, ದ.ಕ. ಜಿಲ್ಲಾ ಅಂಗವಿಕಲರ ಸಂಘದ ಕಾರ್ಯದರ್ಶಿ ಕೊರಗಪ್ಪಗೌಡ, ಕೊಕ್ಕಡ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ನಾರಾಯಣ ಗೌಡ, ರೇವತೀ ತಾಮಣ್‌ಕರ್, ಅಲ್ಬರ್ಟ್ ಮಿನೇಜಸ್ ಮೊದಲಾದವರು ಉಪಸ್ಥಿತರಿದ್ದರು.