Advertisement

ಸೌರಭದಾಸ ಸಾಹಿತ್ಯವಿದ್ಯಾಲಯ: ಪರೀಕ್ಷೆ

04:33 PM Aug 09, 2018 | |

ಪುಣೆ: ಶ್ರೀ  ಉತ್ತರಾಧಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರಿಂದ ಸ್ಥಾಪಿಸಲ್ಪಟ್ಟ ಸೌರಭ ದಾಸ ಸಾಹಿತ್ಯ ವಿದ್ಯಾಲಯ ಪುಣೆ ಕೇಂದ್ರ ಇದರ ವಾರ್ಷಿಕ ಪರೀಕ್ಷೆಯು ಪುಣೆಯ ರಾಘವೇಂದ್ರ ಸ್ವಾಮಿಗಳ ಶ್ರೀ ವರದೇಂದ್ರ ಮಠದಲ್ಲಿ ನಡೆಯಿತು.

Advertisement

ಪರೀಕ್ಷೆಯ ಮೇಲ್ವಿಚಾರಕರಾಗಿ ವಿದ್ಯಾಲಯದ ಅಧ್ಯಕ್ಷರಾದ ಪಂಡಿತ್‌ ಪ್ರಮೋದ ಆಚಾರ್‌  ಪೂಜಾರ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಶ್ರೀ ವರದೇಂದ್ರ ಮಠ ವ್ಯವಸ್ಥಾಪಕರಾದ ಶ್ರೀ ವೇಣುಗೋಪಾಲ ಆಚಾರ್ಯರು ಪ್ರಶ್ನೆ ಪತ್ರಿಕೆಯನ್ನು ಹಸ್ತಾಂತರಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ಹರಿಕಥಾಮೃತ ಸಾರ ಪ್ರಮೇಯ ಭಾಗಗಳು,  ದೀರ್ಘ‌ ಕೃತಿ,  ದೇವರನಾಮಗಳು ಇವುಗಳನ್ನು ಒಳಗೊಂಡ ಪಠ್ಯದ ಮೇಲೆ ಪರೀಕ್ಷೆ ನಡೆಸಲಾಯಿತು. ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶ ರಾಜ್ಯಗಳ ಸುಮಾರು 32 ಕೇಂದ್ರಗಳಲ್ಲಿ ಏಕಕಾಲಕ್ಕೆ ಪರೀಕ್ಷೆ ನಡೆಸಲಾಯಿತು.

ಪುಣೆ ಕೆಂದ್ರದ ವ್ಯವಸ್ಥಾಪಕರಾದ ಗೋಪಾಲ ಕಟಗೇರಿ  ಪರೀಕ್ಷೆಯ ಮೇಲ್ವಿಚಾರಣೆ ಮಾಡಿದರು. ಉತ್ತರಾಧಿ ಮಠದ ಮಠಾಧೀಶ ಸತ್ಯಾತ್ಮ ತೀರ್ಥರು ಸ್ಥಾಪಿಸಿದ ಸೌರಭದಾಸ ಸಾಹಿತ್ಯ ಮಹಾವಿದ್ಯಾಲಯವು ಸಾಮಾನ್ಯ ಜನರಿಗೆ ಹರಿದಾಸ ಸಾಹಿತ್ಯವನ್ನು ಸರಳ ರೀತಿಯಲ್ಲಿ ತಲುಪಿಸುವ ಕಾರ್ಯವನ್ನು ಮಾಡುತ್ತಾ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next