Advertisement

ದೌರ್ಜನ್ಯಕ್ಕೆ ಐದು ವರ್ಷ ಜೈಲು

06:00 AM May 31, 2018 | |

ರಿಯಾದ್‌: ಸೌದಿ ಅರೇಬಿಯಾದಲ್ಲಿ ಮಹಿಳೆಯರ ವಿರುದ್ಧದ ದೌರ್ಜನ್ಯಕ್ಕೆ 5 ವರ್ಷ ಜೈಲು ಮತ್ತು 53 ಲಕ್ಷ ರೂ. (80 ಸಾವಿರ ಡಾಲರ್‌) ದಂಡ.  ಇಂಥದ್ದೊಂದು ಮಹತ್ವದ ಕಾನೂನನ್ನು ರಾಜಕುಮಾರ ಮೊಹಮ್ಮದ್‌ ಬಿನ್‌ ಸಲ್ಮಾನ್‌ ನೇತೃತ್ವದ ಸರ್ಕಾರ ಜಾರಿ ಮಾಡಿದೆ. 

Advertisement

ಸೌದಿ ಸರ್ಕಾರದ ಸಲಹಾ ಮಂಡಳಿ ”ಶೌರಾ ಕೌನ್ಸಿಲ್‌’, ಈ ಕಾನೂನು ಜಾರಿಗೆ ತರುವಂತೆ ಸೌದಿ ಸಂಪುಟಕ್ಕೆ ಶಿಫಾರಸು ಮಾಡಿತ್ತು. ಇದಕ್ಕೆ, ಸೋಮವಾರದ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.  ಇತ್ತೀಚಿನ ದಿನಗಳಲ್ಲಿ ಹಲವಾರು ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿರುವ ಸರ್ಕಾರ ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧವೂ ಕಠಿಣವಾಗಿ ವರ್ತಿಸಲು ಮುಂದಾಗಿದೆ. ಇತ್ತೀಚೆಗೆ,  ಚಿತ್ರ ಮಂದಿರಗಳಿಗೆ ದಶಕಗಳಿಂದ ಮಹಿಳೆಯರ ಮೇಲಿದ್ದ ನಿಷೇಧ ತೆರವುಗೊಳಿಸಲಾಗಿದೆ.  ಕಾರ್ಯಕ್ರಮಗಳಿಗೆ ಪುರುಷರ ಜತೆ ಮಹಿಳೆಯರಿಗೂ ಮುಕ್ತ ಪ್ರವೇಶ,  ಡ್ರೈವಿಂಗ್‌ ಲೈಸನ್ಸ್‌ ನೀಡುವಿಕೆಯಂಥ ಸೌಲಭ್ಯಗಳನ್ನು ನೀಡಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next