Advertisement

ಅಮೆರಿಕದ ಉದ್ಯಮಿ ಎಲಾನ್‌ ಮಸ್ಕ್ ಆಫ‌ರ್‌ ತಿರಸ್ಕರಿಸಿದ ಸೌದಿ ರಾಜಕುಮಾರ

08:53 PM Apr 15, 2022 | Team Udayavani |

ವಾಷಿಂಗ್ಟನ್‌: ಸಾಮಾಜಿಕ ಜಾಲತಾಣ ಟ್ವಿಟರನ್ನು ಕೊಳ್ಳುವ ನಿಟ್ಟಿನಲ್ಲಿ ಅಮೆರಿಕದ ಉದ್ಯಮಿ ಎಲಾನ್‌ ಮಸ್ಕ್ ನೀಡಿರುವ 3.2 ಲಕ್ಷ ಕೋಟಿ ರೂ. ಆಫ‌ರ್‌ ಅನ್ನು ಟ್ವಿಟರ್‌ನ ಪ್ರಮುಖ ಪಾಲುದಾರರಾದ ಸೌದಿ ರಾಜಕುಮಾರ ಅಲ್ವಲೀದ್‌ ತಲಾಲ್‌ ಅವರು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

Advertisement

ತಮ್ಮ ನಿರ್ಧಾರವನ್ನು ಟ್ವಿಟರ್‌ನಲ್ಲೇ ಪ್ರಕಟಿಸಿರುವ ಅವರು, ಮಸ್ಕ್ ರವರು ನೀಡಿರುವ ಆಫ‌ರ್‌ ಅಗಾಧವಾಗಿ ಬೆಳವಣಿಗೆ ಕಾಣುತ್ತಿರುವ ಟ್ವಿಟರ್‌ನ ಆಂತರಿಕ ಮೌಲ್ಯದ ಸಮೀಪಕ್ಕೂ ಬರುವುದಿಲ್ಲ. ಹಾಗಾಗಿ, ಮಸ್ಕ್ ರವರ ಆಫ‌ರ್‌ ಒಪ್ಪಿಕೊಳ್ಳಲಾಗುತ್ತಿಲ್ಲ ಎಂದು ಹೇಳಿದ್ದಾರೆ.

ಇದಕ್ಕೆ ಟಾಂಗ್‌ ಕೊಟ್ಟಿರುವ ಮಸ್ಕ್, “ನಾನಿಲ್ಲಿ ಎರಡು ಪ್ರಶ್ನೆ ಕೇಳಲು ಇಚ್ಛಿಸುತ್ತೇನೆ. ಟ್ವಿಟರ್‌ನಲ್ಲಿ ಸೌದಿಯ ನೇರ ಹಾಗೂ ಪರೋಕ್ಷ ಬಂಡವಾಳ ಎಷ್ಟಿದೆ ಹಾಗೂ ಪತ್ರಿಕೋದ್ಯಮದ ವಾಕ್‌ ಸ್ವಾತಂತ್ರ್ಯದ ಬಗ್ಗೆ ಸೌದಿಯ ಅಭಿಪ್ರಾಯವೇನು” ಎಂದು ಪ್ರತಿ ಟ್ವೀಟ್‌ ಮಾಡಿದ್ದಾರೆ.

ಪ್ಲ್ಯಾನ್ ಬಿ ಸಿದ್ಧವಿದೆ: ಮಸ್ಕ್
ಟ್ವಿಟರ್‌ ಸಂಸ್ಥೆಗೆ ತಾವು ಕೊಟ್ಟಿರುವ ಆಫ‌ರ್‌, ಅತ್ಯುತ್ತಮ ಆಫ‌ರ್‌ ಆಗಿದ್ದು ಅದನ್ನು ಟ್ವಿಟರ್‌ನ ಆಡಳಿತ ಸಂಸ್ಥೆ ಒಪ್ಪಿಕೊಂಡರೆ ಸರಿ, ಇಲ್ಲವಾದರೆ ತಾವು ಕಂಪನಿಯ ಹೂಡಿಕೆದಾರನಾಗಿಯೇ ಮುಂದುವರಿಯುತ್ತೇನೆ. ಇದು ನನ್ನ ಪ್ಲಾನ್‌ ಬಿ ಆಗಿರುತ್ತದೆ” ಎಂದು ಮಸ್ಕ್ ಹೇಳಿದ್ದಾರೆ. ಇದೇ ವೇಳೆ, ಟ್ವಿಟರ್‌ ಸಂಪೂರ್ಣ ಖಾಸಗಿ ಕಂಪನಿಯಾಗಿ ಬದಲಾಗಬೇಕು ಎಂದಿದ್ದಾರೆ.

ಉದ್ಯೋಗಿಗಳನ್ನು ಹುರಿದುಂಬಿಸಿದ ಪರಾಗ್‌ ಕಂಪನಿಯು ಎಲಾನ್‌ ಮಸ್ಕ್ ರವರ ಪಾಲಾಗಲಿಗೆಯೇ ಎಂಬ ದುಗುಡದಲ್ಲಿದ್ದ ಟ್ವಿಟರ್‌ ಸಂಸ್ಥೆಯ ಉದ್ಯೋಗಿಗಳನ್ನು ಹುರಿದುಂಬಿಸುವ ಕೆಲಸವನ್ನು ಕಂಪನಿಯ ಸಿಇಒ ಪರಾಗ್‌ ಅಗರ್ವಾಲ್‌ ಮಾಡಿದ್ದಾರೆ.

Advertisement

” ಮಸ್ಕ್ ರವರ ಆಫ‌ರ್‌ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳಿಂದ ಕಂಪನಿಯ ಯಾವುದೇ ಉದ್ಯೋಗಿಗಳು ಆತಂಕಗೊಳ್ಳಬೇಕಿಲ್ಲ. ಎಲ್ಲರೂ ತಮ್ಮ ಕೆಲಸಗಳ ಮೇಲೆ ಗಮನ ಹರಿಸಬೇಕು’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next