Advertisement

ಆರ್ಥಿಕ ಸ್ಥಿತಿ ಸುಧಾರಣೆಗೆ ಯತ್ನ ಕರ್ಫ್ಯೂ ತೆರವುಗೊಳಿಸಿದ ಸೌದಿ

11:49 AM Jun 23, 2020 | mahesh |

ರಿಯಾದ್‌: ಈಗಾಗಲೇ ಮಸೀದಿಗಳಿಗೆ ಸಾಮಾಜಿಕ ಅಂತರ ಪಾಲನೆ ಮಾಡುವ ಮೂಲಕ ಪ್ರವೇಶ ನೀಡಿದ್ದ ಸೌದಿಯಲ್ಲಿ ಈಗ ಸೋಂಕು ತಡೆಗೆ ಹೇರಿದ್ದ ಕರ್ಫ್ಯೂವನ್ನು ಸಂಪೂರ್ಣವಾಗಿ ತೆಗೆಯಲಾಗಿದೆ ಎಂಬ ಅಧಿಕೃತ ಮಾಹಿತಿಯೊಂದು ಹೊರಬಿದ್ದಿದೆ. ಆದರೆ ಸಾಮಾಜಿಕ ಪಾಲನೆ, ಮಾಸ್ಕ್ ಕಡ್ಡಾಯದಂತಹ ನಿಯಮಗಳು ಹಾಗೆಯೇ ಮುಂದುವರಿಯಲಿದೆ ಎಂದು ತಿಳಿಸಿದೆ.

Advertisement

ಆರ್ಥಿಕ ಮತ್ತು ವಾಣಿಜ್ಯ ವ್ಯವಹಾರಗಳು ಆರಂಭವಾಗಿದ್ದು ದೇಶದ ಆರ್ಥಿಕತೆಯನ್ನು ಮತ್ತೆ ಸ್ಥಿರಗೊಳಿಸುವಲ್ಲಿ ಅಧಿಕೃತರು ಪ್ರಯತ್ನಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಪ್ರಯಾಣಗಳಿಗೆ ಹಾಗೂ ದಾರ್ಮಿಕ ಪ್ರವಾಸಗಳಿಗೆ ಇನ್ನೂ ಅವಕಾಶವನ್ನು ನೀಡಲಾಗಿಲ್ಲ. ಹಜ್‌ ಪ್ರವಾಸದ ಬಗ್ಗೆ ಈ ವರೆಗೂ ರಾಜಮನೆತನದಿಂದ ಯಾವುದೇ ಮಾಹಿತಿ ಅಥವಾ ನಿಯಮಗಳು ಹೊರಬಂದಿಲ್ಲ. ಮಲೇಶ್ಯಾ, ಇಂಡೋನೇಷ್ಯಾ ಸಹಿತ ಇತರ ಹಲವು ದೇಶಗಳು ಈ ಬಾರಿ ತಮ್ಮ ದೇಶಗಳಿದ ಹಜ್‌ ಪ್ರವಾಸಕ್ಕೆ ಜನರನ್ನು ಕಳುಹಿಸುವುದಿಲ್ಲವೆಂಬ ನಿಯಮವನ್ನು ಈಗಾಗಲೇ ಪ್ರಕಟಿಸಿದ್ದು, ಆದರೆ ಸೌದಿ ಆಡಳಿತ ಮಂಡಳಿ ಮಾತ್ರ ಈ ಬಗ್ಗೆ ಮೌನವಹಿಸಿದೆ.

ಪ್ರತಿ ವರ್ಷ ಸುಮಾರು 25 ಮಿಲಿಯನ್‌ ಮುಸ್ಲಿಂ ಸಮುದಾಯದ ಜನರು ಪವಿತ್ರ ಹಜ್‌ ಯಾತ್ರೆಗೆ ತೆರಳುತ್ತಾರೆ. ಸೌದಿಯಲ್ಲಿ ಈಗಾಗಲೇ 1,55,000 ಕೋವಿಡ್‌ ಸೋಂಕಿತರಿದ್ದು, 1,230 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಸೋಂಕು ಹಾಗೂ ಸಾವಿನ ಸಂಖ್ಯೆ ಇನ್ನೂ ಹೆಚ್ಚಳವಾಗುವ ಭೀತಿಯಿದೆ. ಮಾರ್ಚ್‌ ತಿಂಗಳಿನಲ್ಲಿ ಇಲ್ಲಿ ಕಠಿನ ನಿಯಮಗಳೊಂದಿಗೆ ಕರ್ಫ್ಯೂ ಜಾರಿಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next