Advertisement

ಅಸೀರ ಮತ್ತು ಜಿಜಾನ ಮರುಭೂಮಿಯ ಹಸುರಿನ ಆಗರ

01:58 PM Apr 14, 2021 | Team Udayavani |

ಸೌದಿ ಅರೇಬಿಯಾ ದೇಶವನ್ನು ಕೇವಲ ಮರಳುಗಾಡು ಎಂದು ತಿಳಿಯುವುದು ತಪ್ಪು ಕಲ್ಪನೆ. ಯಾಕೆಂದರೆ ಈ ದೇಶದಲ್ಲೂ ಮಳೆ, ಬೆಳೆಯಾಗುತ್ತದೆ. ಹರಿಯುವ ತೊರೆಗಳು, ಗಿಡ- ಮರಗಳು, ಹಸುರಾದ ಬೆಟ್ಟ- ಗುಡ್ಡಗಳು, ವರ್ಷವಿಡಿ ತಂಪಾದ ವಾತಾವರಣ ಹೊಂದಿರುವ ಸ್ಥಳಗಳು ಇಲ್ಲಿವೆ. ಇಷ್ಟು ಮಾತ್ರವಲ್ಲ ಇಲ್ಲಿ ಮಂಜಿನ ವಾತಾವರಣವೂ ಕಾಣಸಿಗುತ್ತದೆ.

Advertisement

ಸೌದಿ ಅರೇಬಿಯಾದ ದಕ್ಷಿಣ ಭಾಗ ಹಸುರು ಸಿರಿಯನ್ನು ಹೊಂದಿದೆ. ಪ್ರಕೃತಿ ಸೌಂರ್ಯದಲ್ಲಿ ಸೌದಿಯ ಅಸೀರ ಪೊ›ವಿನ್ಸನ ರಾಜಧಾನಿ ಆಭಾ ಪ್ರಸಿದ್ಧ ಸ್ಥಳ.  ಜಿಜಾನ -ಜಿಜಾನ್‌ ಪ್ರೊವಿನ್ಸ, ಅಲ್- ಬಹಾ, ಬಿಶಾ ನಿಸರ್ಗ ಪ್ರಿಯರ ಮನಸೂರೆಗೊಳಿಸುತ್ತದೆ. ಇನ್ನು ಮಲೆನಾಡಿನಲ್ಲಿ ಹುಟ್ಟಿ ಬೆಳೆದ ನನ್ನಂಥವಳಿಗೆ ಈ ಊರಿನ ನೆನಪು ಮರುಕಳಿಸದಿರಲೂ ಅಸಾಧ್ಯ.

ಅಸೀರ ಪ್ರೊವಿನ್ಸ ರಾಜಧಾನಿ ಆಭಾ. ಸಮುದ್ರ ಮಟ್ಟಕ್ಕಿಂತ 2,200 ಮೀಟರ್‌ ಎತ್ತರದಲ್ಲಿದೆ. ವರ್ಷಪೂರ್ತಿ ಇಲ್ಲಿ 21ಡಿಗ್ರಿ ಸೆಲ್ಸಿಯಸ್‌ನಿಂದ 15 ಡಿಗ್ರಿ ಸೆಲ್ಸಿಯಸ್‌ವರೆಗೆ ಸಾಮಾನ್ಯ ಉಷ್ಣತೆ ವಾತಾವರಣವಿರುವುದು. ಇಷ್ಟು ಮಾತ್ರವಲ್ಲ ಇಲ್ಲಿನ ಪ್ರಮುಖ ಉದ್ಯೋಗ ವ್ಯವಸಾಯ.

ದೇಶ ದೊ ಳಗೆ ವಿಮಾನ ಸಂಚಾರ ಸುಲಭವಾಗಿರುವುದರಿಂದ ನಾವು ವಿಮಾನದ ಮೂಲ ಕ ಆಭಾ ತಲುಪಿ, ಅಲ್ಲಿಯ ಪ್ರದೇಶವನ್ನು ನೋಡಲು ನಮ್ಮ ಅನುಕೂಲಕ್ಕೆ ತಕ್ಕಂತೆ ತಿರುಗಾಡಬಹುದು ಎಂದುಕೊಂಡು ಬಾಡಿಗೆ ಕಾರನ್ನು ಪಡೆದೆವು. ಈ ದೇಶದ ಎಲ್ಲೆಡೆ ಬಾಡಿಗೆ ಕಾರುಗಳು ಲಭ್ಯವಿವೆ. ರೆಸಾರ್ಟ್‌, ಹೊಟೇಲ್‌ ಗಳು ಲಭ್ಯವಿದ್ದರೂ ನಾವು ಸರ್ವಿಸ್‌ ಅಪಾರ್ಟ್‌ಮೆಂಟ್‌ ನಲ್ಲಿ ಉಳಿದುಕೊಂಡೆವು. ಯಾಕೆಂದರೆ ಇಲ್ಲಿ ನಮ್ಮ ಅನುಕೂಲಕ್ಕೆ ತಕ್ಕಂತೆ ಅಡುಗೆಯನ್ನೂ ಮಾಡಬಹುದು.

Advertisement

ಜಿಜಾನ್‌- ಜಿಜಾನ್‌ ಪ್ರೊವಿನ್ಸ  :

ಈ ಪ್ರದೇಶವು ರೆಡ್‌ ಸೀ, ದ್ವೀಪಗಳು ಮತ್ತು ಪಿಫಾ ಮೌಂಟೇನ್‌ಗೆ  ಪ್ರಸಿದ್ಧವಾಗಿದೆ. ಆಭಾದಿಂದ 147 ಕಿ.ಮೀ. ದೂರವನ್ನು ಎರಡೂವರೆ ಗಂಟೆಯೊಳಗೆ ರಸ್ತೆಯ ಮೂಲಕ ಜಿಜಾನ ತಲುಪಬಹುದು.

ಫಿಫಾ ಮೌಂಟೇನ್‌ ಸಮುದ್ರ  ಮಟ್ಟದಿಂದ 2,600 ಮೀಟರ್‌ ಎತ್ತರದಲ್ಲಿದೆ. ಇವು ಗಗನಚುಂಬಿ ಪರ್ವತಗಳು. ಟೆರೇಸ್‌ ಅಗ್ರಿಕಲ್ಚರ ಇಲ್ಲಿ ಕುತೂಹಲ ಹುಟ್ಟಿಸುವ ಪ್ರದೇಶ. ಇಕ್ಕಟ್ಟಾದ ರಸ್ತೆ ಪರ್ವತದ ಮೇಲೆ ಸಾಗಲು ಸಹಕರಿಸುತ್ತದೆ. ಹಿತವಾದ ವಾತಾವರಣ ಪ್ರಕೃತಿ ಸೌಂದರ್ಯದ ಆಗರ. ಈ ಪರ್ವತವನ್ನು  Neighbour of the Moon ಚಂದಿರನ ನೆರೆಹೊರೆ ಎಂದೇ ಬಣ್ಣಿಸುತ್ತಾರೆ.

ಫ‌ರಸನ ದ್ವೀಪಗಳು :

ಇದು 84 ದ್ವೀಪಗಳ ಸಮೂಹ. ಜೈರತ್‌ ದ್ವೀಪ ಈ ದ್ವೀಪ ಸಮೂಹದ ದೊಡ್ಡ ದ್ವೀಪ. ಇಲ್ಲಿಗೆ ತಲುಪಲು  ನಾವು ಫೇರೀಸ್‌ ಇಲ್ಲವೇ ಪ್ಲುಕಾಸ ಸ್ಥಳೀಯ ಸಣ್ಣ ಬೋಟುಗಳ ಸಹಾಯ ಪಡೆಯಬಹುದು.

ದ್ವೀಪದ ಆಕರ್ಷಣೆ :

  • 20ನೇ ಶತಮಾನದಲ್ಲಿ ಎರಡನೇ ಮಹಾಯುದ್ಧದ ಅವಧಿಯಲ್ಲಿ ಜರ್ಮನರು ಈ ದ್ವೀಪದಲ್ಲಿ ಕೋಟೆಯನ್ನು ಕಟ್ಟಿದ್ದರು. ಇಂದಿಗೂ ಪ್ರವಾಸಿಗರನ್ನು ಆಕರ್ಷಿಸುವ ಸ್ಥಳ.
  • ಒಟ್ಟಮ್ಯಾನ್‌ ಫೋರ್ಟ್‌- ಟುರ್ಕಿ ಶಾಸಕರು ಇಲ್ಲಿ ನೆಲೆಯಾಗಿದ್ದು, ಇವರ ಫೋರ್ಟ್‌ ಪ್ರಸಿದ್ಧಿ ಪಡೆ ದಿದೆ.
  • ಮ್ಯಾನಗ್ರೋವ್‌(ಞಚnಜrಟvಛಿ) ಅರಣ್ಯ- ಫ‌ರಸನ ದ್ವೀಪ ದ ಲ್ಲಿ ಮ್ಯಾನಗ್ರೋವ್‌ ಅರಣ್ಯ ಪ್ರಮುಖ ಆಕರ್ಷಣೆಯಾಗಿ ದ್ದು, ದಟ್ಟವಾಗಿ ಹರಡಿಕೊಂಡಿದೆ.  ಉಪ್ಪು ನೀರಿನಲ್ಲಿ ಸಸ್ಯ- ಗಿಡಮರಗಳು ಬೆಳೆಯುವುದಿಲ್ಲ . ಇವು ಉಷ್ಣವಲಯ, ಉಪೋಷ್ಣ ವಲಯದಲ್ಲಿ ಕಾಣಸಿಗುತ್ತವೆ.

ಬೀಚ್‌ :

ದ್ವೀಪದ ಎಲ್ಲೆಡೆ ಸಮುದ್ರ ತಟ, ಎಲ್ಲೆಂದರಲ್ಲಿ ಈಜಬಹುದು, ಸಮುದ್ರ ಚರಗಳು ಕಾಣಸಿಗುತ್ತವೆ . ಪ್ರಶಾಂತ ವಾತಾವರಣ ಇಲ್ಲಿದೆ.

ಆಭಾದಲ್ಲಿ ನೋಡಬೇಕಾದ ಸ್ಥಳಗಳು ಹಲವು. ಅವುಗಳಲ್ಲಿ ಕೆಲವು ಇಂತಿವೆ.  :

ಆಭಾ ಲೇಕ ಡ್ಯಾಮ್‌ :

ಇದು ಸರೋವರ. ಇದರ ಪಕ್ಕದಲ್ಲೇ ಗಾರ್ಡನ್‌. ಇಲ್ಲಿಯೇ ಆಭಾ ರೆಸಾರ್ಟ್‌ ಗುಡ್ಡದ ಮೇಲಿದೆ. ಇಲ್ಲಿಂದ ಸರೋವರದ ದೃಶ್ಯ ಬಹಳ ಸುಂದರವಾಗಿ ಕಾಣುವುದು. ಈ ರೆಸಾರ್ಟ್‌ನಿಂದ ಗ್ರೀನ್‌ ಮೌಂಟೇನ್‌ಗೆ ಹೋಗಲು ಕೇಬಲ ಕಾರ್‌ ಬಳಸಿದರೆ ಸರೋವರದ ಇಕ್ಕೆಲಗಳ ಸುಂದರ ದೃಶ್ಯ ಕಾಣುವುದು.

ಗ್ರೀನ್‌ ಮೌಂಟೇನ್‌ :

ಇಲ್ಲಿಂದ ನಗರದ ನೋಟ ರಮಣೀಯ. ರಾತ್ರಿ ವೇಳೆ ಗ್ರೀನ್‌ ಮೌಂಟೇನ್‌ ಹಸುರು ಬಣ್ಣದ ಬೆಳಕಿನಿಂದ ಅಲಂಕೃತವಾಗುವುದು. ಈ ಬೆಟ್ಟ ನಗರದ ಮಧ್ಯದಲ್ಲಿದ್ದು, ಹಲವು ರೆಸ್ಟೋರೆಂಟ್‌ ಗಳೂ ಇವೆ. ಸಂಜೆ ವೇಳೆ ತಂಪಾದ ಗಾಳಿ, ಪ್ರಕೃತಿ ಸೂರ್ಯಾಸ್ತ ಸೌಂದರ್ಯ ಸವಿಯುತ್ತ ಮಿಂಟ್‌ ಚಹಾ ಸೇವನೆ ಇಲ್ಲಿ ಪ್ರಸಿದ್ಧಿ.

ಹಬಲಾ  :

ಇದು ಹ್ಯಾಂಗಿಂಗ್‌ ವಿಲೇಜ್‌ ಎಂದೇ ಪ್ರಸಿದ್ಧ. ಸೌದಿ ಇತಿಹಾಸದ ವಿಶಿಷ್ಟ  ಸ್ಥಳ. ಪರ್ವತದ ತುತ್ತ ತುದಿಗೆ ಕಾರು ನಿಲ್ಲಿಸಿ, ಕೇಬಲ್‌ ಕಾರ್‌ನಿಂದ ಕೆಳಗಿಳಿಯಬೇಕು. ಪರ್ವತದ ಮಧ್ಯೆ ಪುರಾತನ ಜನ ವಸತಿಯ ಮನೆಗಳನ್ನು ನೋಡಬಹುದು. ಇತ್ತೀಚೆಗೆ ಇದು ವಾಣಿಜ್ಯೀಕರಣವಾಗಿದೆ.

ರಿಜ್ಜಾಲ್- ಅಲ್ಮಾ, ಹೆರಿಟೇಜ್‌ ವಿಲೇಜ್‌:

ಇದು ಬಣ್ಣಿಸಲಸದಳ. ಕಣಿವೆಯ ಮಧ್ಯೆ, ಪ್ರಕೃತಿ  ಸೌಂದರ್ಯದ ನಡುವೆ ಮ್ಯೂಸಿಯಂ ಮತ್ತು  ಸೌದಿಯ ಪಾರಂಪರಿಕ ಆಹಾರ ಪದ್ಧತಿಯ ರೆಸ್ಟೋ ರೆಂಟ್‌ಗಳು ಇವೆ. ಕೇಬಲ ಕಾರ್‌ ಬಳಸಿದರೆ ಸಂಪೂರ್ಣ ಕಣಿವೆಯ ಸೌಂದರ್ಯ ಸವಿ ಉಣ್ಣಲು ಆಗುವುದು. ಕಣಿವೆಯ ನೋಟವನ್ನು ಕೇಬಲ್‌ ಕಾರ್‌ ಮುಖಾಂತ ರವೇ ಸವಿ ಯ ಬೇಕು.

ಆಭಾದ  : ಸಾಹಸ ಕ್ರೀಡೆ ಯನ್ನು ಇಷ್ಟಪಡುವ ಪ್ರವಾಸಿಗರ ಪ್ರಮುಖ ಆಕರ್ಷಣೆಯಲ್ಲಿ ಒಂದು.  ಪಾರಾಗ್ಲೆ„ಡಿಂಗ್‌ ಟ್ರೆಕಿಂಗ್‌ ಮತ್ತು ಹೈಕಿಂಗ್‌.  ಪ್ರಕೃತಿ ಸೌಂದರ್ಯ ಸವಿಯಲು, ಕೃಷಿ ಭೂಮಿ ನೋಡಲು ಇಲ್ಲಿ ಪ್ರವಾಸಿಗರು ಸೈಕಲ್‌ ಸಹ ಬಳಸುತ್ತಾರೆ.

11 ಟನೆಲ್‌ಗ‌ಳು  :ಪರ್ವತದ ಮಧ್ಯೆ  ಅಂಕುಡೊಂಕು ರಸ್ತೆಯ  ನಡುವೆ 11 ಟನೆಲ್‌ಗ‌ಳು ಇವೆ. ಇಲ್ಲಿಯ roadtrip ಅತ್ಯಂತ ಸಂತಸ ಕೊಡುವ ಕ್ಷಣ. ಇದನ್ನು ನೋಡುವುದನ್ನು ಮರೆಯಲಾಗದು.

ಮಣ್ಣಿನ ಕಟ್ಟಡದ ಸುಖ :

ಇಲ್ಲಿ ಸುಖ ಅಂದರೆ ಮಾರುಕಟ್ಟೆ.  ಇಲ್ಲಿ ಗುರುವಾರದ ಸಂತೆ ಬಹಳ ಪ್ರಸಿದ್ಧ. ಜತೆಗೆ ಮಹಿಳೆಯರಿಗೆಂದೇ ಪ್ರತ್ಯೇಕ ಮಾರುಕಟ್ಟೆ ಇದೆ. ಅಲ್ಲಿ ಅಂಗಡಿಯೂ ಮಹಿಳೆಯರದ್ದೇ. ಗ್ರಾಹಕರೂ ಮಹಿಳೆಯರೇ.  ಇಲ್ಲಿಯ ಪ್ರಮುಖ ಉದ್ಯೋಗ ವ್ಯವಸಾಯ. ಹಣ್ಣು, ತರಕಾರಿ, ಹೂವುಗಳು, ಗೋಧಿ, ಬಾರ್ಲಿ ಸೇರಿದಂತೆ ಬಹುತೇಕ ಎಲ್ಲ ಬೆಳೆಗಳನ್ನು ಬೆಳೆಯುತ್ತಾರೆ. ಮಳೆಯಾಗುತ್ತದೆ, ಮಂಜಿನಿಂದ ತುಂಬಿರುತ್ತದೆ. 365 ದಿನವೂ ತಂಪಾಗಿರುವ ಪ್ರದೇಶ.

ಅಲ್ ಸೌದ :

ಸೌದಿ ಅರೇಬಿಯಾದ ಎತ್ತರದ ಪರ್ವತ. ಮಂಜಿನಿಂದ ಆವೃತ್ತವಾದ, ಚಳಿಯ ನಡುವೆ ಮೋಡಗಳು ಪರ್ವತವನ್ನು ಆವರಿಸಿದ ನೋಟ ರುದ್ರ- ರಮಣೀಯ.

 

  ಡಾ| ವಾಣಿ ಸಂದೀಪ,   ಸೌದಿ ಅರೇಬಿಯಾ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next