Advertisement

ಸೌದಿ ಅರೇಬಿಯಾದಲ್ಲಿ ಒಂದೇ ದಿನ 81 ಅಪರಾಧಿಗಳಿಗೆ ಗಲ್ಲು ಶಿಕ್ಷೆ

10:20 AM Mar 13, 2022 | Team Udayavani |

ರಿಯಾದ್: ಸೌದಿ ಅರೇಬಿಯಾದಲ್ಲಿ ಶನಿವಾರ ಒಂದೇ ದಿನದಲ್ಲಿ ಒಟ್ಟು 81 ಅಪರಾಧಿಗಳನ್ನು ಗಲ್ಲಿಗೆ ಹಾಕಲಾಗಿದೆ. ಅವರೆಲ್ಲರೂ ವಿವಿಧ ರೀತಿಯ ಅಪರಾಧಗಳನ್ನು ಮಾಡಿದವರೆಂದು ತಿಳಿಸಲಾಗಿದೆ.

Advertisement

1980ರಲ್ಲಿ 63 ಅಪರಾಧಿಗಳನ್ನು ಸಾಮೂಹಿಕವಾಗಿ ಗಲ್ಲಿಗೇರಿಸಿದ ನಂತರ ಇದೇ ಮೊದಲ ಬಾರಿಗೆ ಈ ಸಂಖ್ಯೆಯಲ್ಲಿ ಸಾಮೂಹಿಕವಾಗಿ ಗಲ್ಲು ಶಿಕ್ಷೆಯಾಗಿದೆ.

ಗಲ್ಲಿಗೇರಿದವರಲ್ಲಿ ಕೆಲವರು ಕೊಲೆ ಮಾಡಿದವರಾಗಿದ್ದರೆ, ಇನ್ನು ಕೆಲವರು ಆಲ್‌-ಖೈದಾ, ಇಸ್ಲಾಮಿಕ್‌ ಸ್ಟೇಟ್‌ ಗ್ರೂಪ್‌ನಂತಹ ಉಗ್ರ ಸಂಘಟನೆಗೆ ಸೇರಿದವರಾಗಿ ದ್ದಾರೆ. ಈ ಹಿಂದೆ 2019ರಲ್ಲಿ ಸೌದಿ ಸರ್ಕಾರವು 37 ಅಪರಾಧಿಗಳನ್ನು ಸಾಮೂಹಿಕವಾಗಿ ಗಲ್ಲಿಗೇರಿಸಿತು

ಗಲ್ಫ್ ದೇಶ ಸೌದಿ ಅರೇಬಿಯಾ ವಿಶ್ವದ ಅತ್ಯಧಿಕ ಮರಣದಂಡನೆ ಶಿಕ್ಷೆ ನೀಡಿರುವ ದೇಶಗಳಲ್ಲಿ ಒಂದಾಗಿದೆ.ಈ ಹಿಂದಿನ ಮರಣದಂಡನೆಯನ್ನು ಶಿರಚ್ಛೇದನದ ಮೂಲಕ ನಡೆಸಲಾಗುತ್ತಿತ್ತು.

ಇದನ್ನೂ ಓದಿ:ಚೀನಾದ ಹೆಚ್ಚುತ್ತಿದೆ ಕೋವಿಡ್; ಎರಡು ವರ್ಷದಲ್ಲೇ ಹೆಚ್ಚಿನ ಸೋಂಕು ಪ್ರಕರಣಗಳು ಪತ್ತೆ

Advertisement

“ಸರ್ಕಾರಿ ಸಿಬ್ಬಂದಿಗಳನ್ನು ಗುರಿಯಾಗಿಸುವುದು, ಕಾನೂನು ಜಾರಿ ಅಧಿಕಾರಿಗಳನ್ನು ಕೊಲ್ಲುವುದು ಮತ್ತು ಪೊಲೀಸ್ ವಾಹನಗಳನ್ನು ಗುರಿಯಾಗಿಸಲು ಲ್ಯಾಂಡ್ ಮೈನ್‌ಗಳನ್ನು ನೆಡುವುದು ಮುಂತಾದ ಅಪರಾಧ ಕೃತ್ಯಗಳಲ್ಲಿ ಇವರು ಸೇರಿದ್ದಾರೆ” ಎಂದು ವರದಿ ಹೇಳಿದೆ.

ಶಿಕ್ಷೆಗೆ ಒಳಗಾದ 81 ಜನರಲ್ಲಿ 73 ಸೌದಿ ಪ್ರಜೆಗಳು, ಏಳು ಮಂದಿ ಯೆಮೆನ್ ಮತ್ತು ಒಬ್ಬರು ಸಿರಿಯನ್ ಪ್ರಜೆ ಸೇರಿದ್ದಾರೆ.

“ಭಯೋತ್ಪಾದನೆ ನಡೆಸುವ ಮತ್ತು ಶಾಂತಿಗೆ ಬೆದರಿಕೆ ಹಾಕುವ ಉಗ್ರಗಾಮಿ ಸಿದ್ಧಾಂತಗಳ ವಿರುದ್ಧ ದೇಶವು ಕಟ್ಟುನಿಟ್ಟಾದ ಮತ್ತು ಅಚಲವಾದ ನಿಲುವನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುತ್ತದೆ” ಎಂದು ಸೌದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next