ಹೊಸದಿಲ್ಲಿ : ಸೌದಿ ಸರಕಾರ ತನ್ನ ದೇಶದಲ್ಲಿನ ನಿರುದ್ಯೋಗ ಕಡಿಮೆ ಮಾಡುವ ದಿಶೆಯಲ್ಲಿ ವಿದೇಶೀ ನೌಕರರಿಗೆ ಉದ್ಯೋಗ ಕೊಡುವ ಬದಲು ದೇಶದ ನಿರುದ್ಯೋಗಿ ಪ್ರಜೆಗಳಿಗೇ ಉದ್ಯೋಗ ಕೊಡುವಂತೆ ತನ್ನಲ್ಲಿನ ಕಂಪೆನಿಗಳ ಮೇಲೆ ಒತ್ತಡ ಹೇರುತ್ತಿದೆ.
ಸೌದಿ ಅರೇಬಿಯ 12 ಆಯ್ದ ವಲಯಗಳಲ್ಲಿನ ಅನ್ಯ ದೇಶಗಳ ಕಾರ್ಮಿಕರ ಮೇಲೆ ನಿರ್ಬಂಧಗಳನ್ನು ಹೇರಿದೆ.
ಈ ಬಿಗಿ ಔದ್ಯೋಗಿಕ ನೀತಿಗೆ ಸೌದಿ ಕಾನೂನು ಸಚಿವ ಅಲಿ ಬಿನ್ ನಸರ್ ಅಲ್ ಗಫೀಸ್ ಅವರು ಅನುಮೋದನೆ ನೀಡಿರುವುದಾಗಿ ಪ್ರಭಾತ್ ಖಬರ್ ವರದಿ ಮಾಡಿದೆ.
ಸೌದಿ ಅರೇಬಿಯದಲ್ಲಿ ಪ್ರಕೃತ 1.20 ಕೋಟಿ ಅನ್ಯ ದೇಶೀಯ ಕಾರ್ಮಿಕರು ಇದ್ದು ಅವರು ಸೌದಿ ಸರಕಾರದ ಈ ಬಿಗಿ ನೀತಿಯಿಂದ ತೀವ್ರವಾಗಿ ಬಾಧಿತರಾಗಲಿದ್ದಾರೆ. ಈ ಕಾರ್ಮಿಕು ಕಡಿಮೆ ವೇತನದ ಅತ್ಯಂತ ಶ್ರಮದಾಯಕ ಮತ್ತು ಅಪಾಯಕಾರಿ ಕೆಲಸಗಳನ್ನು ಮಾಡಿಕೊಂಡಿದ್ದಾರೆ.
ಸೌದಿ ಅರೇಬಿಯದಲ್ಲಿ 30 ಲಕ್ಷ ಭಾರತೀಯ ಕಾರ್ಮಿಕರು ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು ಅವರು ಸೌದಿ ಸರಕಾರದ ಬಿಗು ನೀತಿಯಿಂದ ಬಾಧಿತರಾಗಲಿದ್ದಾರೆ.
ಸೌದಿ ಸರಕಾರದಿಂದ ನಿರ್ಬಂಧಕ್ಕೆ ಗುರಿಯಾಗಿರುವ ವಲಯಗಳು ಈ ರೀತಿ ಇವೆ :
ಕಾರು ಮತ್ತು ಮೋಟಾರ್ ಬೈಕ್ ಶೋರೂಮ್, ರೆಡಿಮೇಡ್ ಬಟ್ಟೆ ಅಂಗಡಿ; ಗೃಹ ಮತ್ತು ಆಫೀಸ್ ಪೀಠೊಪಕರಣಗಳ ಮಳಿಗೆ, ಹೋಮ್ ಅಪ್ಲಾಯನ್ಸಸ್ ಮತ್ತು ಕಿಚನ್ ಯುಟೆನ್ಸಿಲ್ ಸ್ಟೋರ್, ಇಲೆಕ್ಟ್ರಾನಿಕ್ ಸ್ಟೋರ್, ವಾಚ್ ಮತ್ತು ಕ್ಲಾಕ್ ಮಳಿಗೆ, ಒಪ್ಟಿಕ್ ಸ್ಟೋರ್, ಮೆಡಿಕಲ್ ಎಕ್ವಿಪ್‌ಮೆಂಟ್ ಮತ್ತು ಪೂರೈಕೆ ಸ್ಟೋರ್, ಕಟ್ಟಡ ನಿರ್ಮಾಣ ವಸ್ತುಗಳ ಮಳಿಗೆ, ಆಟೋ ಸ್ಪೇರ್ ಪಾರ್ಟ್ ಅಂಗಡಿ, ಕಾರ್‌ಪೆಟ್ ಸೆಲ್ಲಿಂಗ್ ಸ್ಟೋರ್, ಸ್ವೀಟ್ ಶಾಪ್ಸ್.