Advertisement

ಭಾರತಕ್ಕೆ ಬರುವ ಸೌದಿ ಪ್ರಜೆಗಳಿಗೆ 3 ವರ್ಷ ನಿಷೇಧ?

10:05 PM Jul 28, 2021 | Team Udayavani |

ರಿಯಾದ್‌: ಇತ್ತೀಚೆಗಿನ ಕೊರೊನಾ ಎರಡನೇ ಅಲೆಯ ವೇಳೆ ಹೆಚ್ಚು ಬಾಧಿತವಾದ ದೇಶಗಳನ್ನು ಕೆಂಪು ಪಟ್ಟಿಗೆ ಹಾಕಿರುವ ಸೌದಿ ಅರೇಬಿಯಾ, ಈ ದೇಶಗಳಿಗೆ ಹೋಗಿ ಬರುವ ತನ್ನ ಪ್ರಜೆಗಳಿಗೆ 3 ವರ್ಷಗಳವರೆಗೆ ಸೌದಿ ಪ್ರವೇಶಿಸದಂತೆ ನಿಷೇಧ ಹೇರುವುದಾಗಿ ಬೆದರಿಕೆ ಹಾಕಿದೆ. ಸೌದಿ ಅರೇಬಿಯಾದ ಕೆಂಪು ಪಟ್ಟಿಯಲ್ಲಿ ಭಾರತವೂ ಇದೆ.

Advertisement

ಇತರ ದೇಶಗಳಿಂದ ಕೊರೊನಾ ತನ್ನ ದೇಶದೊಳಕ್ಕೆ ಪ್ರವೇಶಿಸುವುದನ್ನು ತಡೆಯುವ ಉದ್ದೇಶಕ್ಕಾಗಿ, ಕೊರೊನಾಕ್ಕೆ ಹೆಚ್ಚು ತುತ್ತಾದ ದೇಶಗಳ ಪಟ್ಟಿಯನ್ನು ಸೌದಿ ಅರೇಬಿಯಾ ತಯಾರಿಸಿದೆ. ಪಟ್ಟಿಯಲ್ಲಿರುವ ಇತರ ರಾಷ್ಟ್ರಗಳೆಂದರೆ, ಅಫ್ಘಾನಿಸ್ತಾನ, ಅರ್ಜೆಂಟೈನಾ, ಬ್ರೆಜಿಲ್‌, ಈಜಿಪ್ಟ್, ಇಂಡೋನೇಷ್ಯಾ, ಲೆಬನಾನ್‌, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಟರ್ಕಿ, ವಿಯೆಟ್ನಾಂ ಹಾಗೂ ಯುಎಇ.  ಈ ದೇಶಗಳಿಗೆ ಹೋಗಬಾರದೆಂಬ ಸೂಚನೆಯಿದ್ದರೂ ಕೆಲವು ಪ್ರಯಾಣಿಕರು ಅದನ್ನು ಉಲ್ಲಂ ಸಿರುವುದರಿಂದ ಕಠಿಣ ಕ್ರಮ ತೆಗೆದುಕೊಳ್ಳಲು ಅಲ್ಲಿನ ಸರ್ಕಾರ ತೀರ್ಮಾನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next