Advertisement

ಪುರುಷನ ನೆರಳಿಲ್ಲದೆ ವಿದೇಶಕ್ಕೆ!

02:09 AM Aug 03, 2019 | mahesh |

ರಿಯಾದ್‌: ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೀಡಾಗಿದ್ದ ಮತ್ತು ಟೀಕೆಗೆ ಒಳಗಾಗಿದ್ದ ನಿಯಮವೊಂದನ್ನು ಸೌದಿ ಅರೇಬಿಯಾ ಬದಲಿಸಿದ್ದು, ಇದು ಗಲ್ಫ್ ದೇಶಗಳ ಸಾಮಾಜಿಕ ಸ್ಥಿತಿಗತಿಯಲ್ಲಿ ಮಹತ್ವದ ರೂಪಾಂತರಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಮಹಿಳೆ ವಿದೇಶಕ್ಕೆ ಪ್ರಯಾಣಿಸುವುದಿದ್ದರೆ ಪುರುಷರ ಅನುಮತಿ ಇರಲೇಬೇಕು ಎಂಬ ನಿಯಮವನ್ನು ಸೌದಿ ಅರೇಬಿಯಾ ತೆಗೆದುಹಾಕಿದೆ.

Advertisement

ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ದೇಶದ ಯಾವುದೇ ವ್ಯಕ್ತಿಗೂ ಇನ್ನು ಪಾಸ್‌ಪೋರ್ಟ್‌ ನೀಡಲಾಗುತ್ತದೆ ಎಂದು ಸೌದಿ ಅರೇಬಿಯಾ ಸರಕಾರದ ಮುಖವಾಣಿ ಉಮ್‌ ಅಲ್ ಖುರಾದಲ್ಲಿ ಪ್ರಕಟಿಸಲಾಗಿದೆ. ಇದರಿಂದಾಗಿ 21 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ಮಹಿಳೆಯೂ ಪಾಸ್‌ಪೋರ್ಟ್‌ ಪಡೆದು ವಿದೇಶಕ್ಕೆ ಪ್ರಯಾಣಿಸಬಹುದು.

ಈ ಹಿಂದೆ ವಿದೇಶಕ್ಕೆ ತೆರಳಲು ಪುರುಷರ ಅನುಮತಿ, ಅಂದರೆ ತಂದೆ, ಪತಿ ಅಥವಾ ಇತರ ಪುರುಷ ಸಂಬಂಧಿಗಳ ಅನುಮತಿ ಇರಬೇಕು ಎಂಬ ನಿಯಮವನ್ನು ಉಲ್ಲಂಘಿಸಿ ಹಲವರು ಪ್ರತಿಭಟನೆ ನಡೆಸಿದ್ದಾರೆ. ಈ ಬಗ್ಗೆ ಹಲವು ಸಂಘಟನೆಗಳೂ ಹೋರಾಟ ನಡೆಸಿವೆ. ಇದೇ ಹೋರಾಟದಲ್ಲಿ ಇನ್ನೂ ಲೌಜೈನ್‌ ಅಲ್ ಹತ್ಲೌಲ್ ಎಂಬ ಮಹಿಳೆ ಈಗಲೂ ಜೈಲುವಾಸ ಅನುಭವಿಸುತ್ತಿದ್ದಾರೆ.

ಕೆಲವು ವರ್ಷಗಳ ಹಿಂದಷ್ಟೇ ಮಹಿಳೆಯರಿಗೆ ವಾಹನ ಚಾಲನೆಗೆ ಅನುಮತಿ ನೀಡುವ ಮೂಲಕ ಸೌದಿ ಮಹತ್ವದ ಹೆಜ್ಜೆ ಇಟ್ಟಿತ್ತು. ಸೌದಿ ಅರೇಬಿಯಾವನ್ನು ಆಧುನಿಕತೆ ಕಡೆಗೆ ಕೊಂಡೊಯ್ಯುತ್ತಿರುವ ಭಾವಿ ದೊರೆ ಮೊಹಮ್ಮದ್‌ ಬಿನ್‌ ಸಲ್ಮಾನ್‌ರ ಈ ನಿರ್ಧಾರಗಳು ವಿಶ್ವ ಮಟ್ಟದಲ್ಲಿ ಮಹತ್ವದ್ದಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next