Advertisement

ಪಾಕಿಸ್ಥಾನದ ಕೈಬಿಟ್ಟವೇಕೆ ಸೌದಿ, ಯುಎಇ?

10:56 AM Oct 20, 2019 | mahesh |

ಸೌದಿ ಮತ್ತು ಯುಎಇ ಭಾರತದ ಪರ ವಾಲಿರುವುದು ಏಕೆ? ಇದನ್ನು ಹೇಗೆ ವಿವರಿಸುವುದು? ಟಿವಿ ಚರ್ಚೆಗಳಲ್ಲಿ ಮಾತನಾಡುವವರು ಮತ್ತು ಲೇಖನಗಳನ್ನು ಬರೆಯುವವರ ಪ್ರಕಾರ, “ಇದು ಲೆಕ್ಕಾಚಾರದ ಜಗತ್ತಾಗಿದ್ದು, ಇಂದು ದೇಶಗಳೆಲ್ಲ ಮಾರುಕಟ್ಟೆ ಮತ್ತು ವ್ಯಾಪಾರದ ಬಗ್ಗೆ ಕೇರ್‌ ಮಾಡುತ್ತವಷ್ಟೇ ಹೊರತು,
ನೈತಿಕತೆ-ಬಡವರ ಬಗ್ಗೆಯಲ್ಲ’. ಈ ವಿವರಣೆ ಭಾಗಶಃ ಸತ್ಯವಷ್ಟೇ, ಇದು ಪೂರ್ಣ ಸತ್ಯವಂತೂ ಅಲ್ಲ.

Advertisement

“ಕಾಶ್ಮೀರದ ವಿಷಯದಲ್ಲಿ ಭಾರತದ ನಡೆಯನ್ನು ಜಗತ್ತು ಖಂಡಿಸುತ್ತಿಲ್ಲ’ ಎಂದು ಪಾಕಿಸ್ಥಾನಿಯರು ದೂರುತ್ತಲೇ ಇದ್ದಾರೆ. ಇನ್ನು ಈ ವಿಷಯದಲ್ಲಿ ಯುಎಇ ಮತ್ತು ಸೌದಿ ಕೂಡ ಭಾರತದ ಪರ ನಿಲ್ಲುತ್ತಿರುವುದನ್ನು, ಇಲ್ಲವೇ ಮೌನ ತಾಳಿರುವುದನ್ನು ನೋಡಿ ಆಘಾತಗೊಂಡಿದ್ದಾರೆ. ಪ್ರಧಾನಿ ಇಮ್ರಾನ್‌ ಖಾನ್‌ ಅವರು “ಕಾಶ್ಮೀರದ ವಿಷಯದಲ್ಲಿ ನಿಮ್ಮ ನಿಲುವು ಏನು?’ ಎಂದು ಸೌದಿ ಮತ್ತು ಯುಎಇಯ ವಿದೇಶಾಂಗ ಸಚಿವರನ್ನು ವಿವರಣೆಗಾಗಿ ಅಹ್ವಾನಿಸಿದಾಗ, ಈ ದೇಶಗಳು ತಮ್ಮ ನಿಲುವು ಬದಲಿಸಬಹುದುಎಂದು ಪಾಕಿಸ್ಥಾನಿಯರು ಭಾವಿಸಿದರು. ಆದರೆ ಆದದ್ದೇನು?

ಮೇಲ್ನೋಟಕ್ಕೆ ಅಂಥದ್ದೇನೂ ಬದಲಾವಣೆ ಕಾಣಿಸಿಲ್ಲ. ಸೌದಿ ಮತ್ತು ಯುಎಇಯ ವಿದೇಶಾಂಗ ಸಚಿವರು ಇಸ್ಲಾಮಾಬಾದ್‌ಗೆ ಬಂದು ಪ್ರಧಾನಿ ಇಮ್ರಾನ್‌ ಖಾನ್‌ ಮತ್ತು ಸೇನಾ ಮುಖ್ಯಸ್ಥ ಬಾಜ್ವಾ ರನ್ನು ಭೇಟಿಯಾದರಷ್ಟೆ. ಈ ಭೇಟಿಯ ನಂತರ ನಮ್ಮ ವಿದೇಶಾಂಗ ಸಚಿವ ಖುರೇಷಿ ಅವರು ಒಂದು ಹೇಳಿಕೆ ನೀಡಿದರು. “ಸೌದಿ ಮತ್ತು ಯುಎಇ ನಮಗೆ ನಿರಾಶೆ ಮೂಡಿಸುವುದಿಲ್ಲ ಎಂದು ನಾವು ಆಶಿಸುತ್ತೇವೆ. ಎರಡೂ ರಾಷ್ಟ್ರಗಳ ಸಚಿವರೂ ನಮ್ಮ ನಿಲುವನ್ನು ಕೇಳಿಸಿಕೊಂಡರು’ ಎಂದರು.

ಒಟ್ಟಾರೆ ಮೂರೂ ರಾಷ್ಟ್ರಗಳಿಗೂ ಈ ಭೇಟಿ ಕೇವಲ
“ತೋರಿಕೆಯ’ ಅವಕಾಶ ನೀಡಿತಷ್ಟೇ. ತಾನು ಭರವಸೆ ನೀಡಿದಂತೆ, ಯುಎಇ ಮತ್ತು ಸೌದಿಯನ್ನು ಕಾಶ್ಮೀರದ ವಿಷಯದಲ್ಲಿ ಸಕ್ರಿಯಗೊಳಿಸಲು ಯಶಸ್ವಿಯಾದೆ ಎಂದು ವಾದಿಸಲು ಈ ಭೇಟಿ
ಪಾಕಿಸ್ಥಾನಕ್ಕೆ ಅವಕಾಶ ಒದಗಿಸಿತು. ಯುಎಇ ಮತ್ತು ಸೌದಿ, ಈ ಮಾತುಕತೆಯಿಂದ ಭಾರತಕ್ಕೆ ನೋವಾಗದಂತೆ ಜಾಗೃತೆ ವಹಿಸಿದವು. ಜತಗೆ, ಪಾಕಿಸ್ಥಾನದಲ್ಲಿನ ತಮ್ಮ ಪ್ರಸ್ತುತತೆಯನ್ನೂ ಉಳಿಸಿಕೊಳ್ಳಲು ಪ್ರಯತ್ನಿಸಿದವು.

ಸೌದಿ ಮತ್ತು ಯುಎಇ ಭಾರತದ ಪರ ವಾಲಿರುವುದು ಏಕೆ? ಇದನ್ನು ಹೇಗೆ ವಿವರಿಸುವುದು? ಟಿವಿ ಚರ್ಚೆಗಳಲ್ಲಿ ಮಾತನಾಡುವವರು ಮತ್ತು ಲೇಖನಗಳನ್ನು ಬರೆಯುವವರ ಪ್ರಕಾರ, “ಇದು ಲೆಕ್ಕಾಚಾರದ ಜಗತ್ತಾಗಿದ್ದು, ಇಂದು ದೇಶಗಳೆಲ್ಲ ಮಾರುಕಟ್ಟೆ ಮತ್ತು ವ್ಯಾಪಾರದ ಬಗ್ಗೆ ಕೇರ್‌ ಮಾಡುತ್ತವಷ್ಟೇ ಹೊರತು,
ನೈತಿಕತೆ-ಬಡವರ ಬಗ್ಗೆಯಲ್ಲ’. ಈ ವಿವರಣೆ ಭಾಗಶಃ ಸತ್ಯವಷ್ಟೇ, ಇದು ಪೂರ್ಣ ಸತ್ಯವಂತೂ ಅಲ್ಲ.

Advertisement

ಸೌದಿ ಮತ್ತು ಯುಎಇ ದೃಷ್ಟಿಯಿಂದ ಹೇಳುವುದಾದರೆ, ಅವುಗಳಿಗೆ ಪಾಕಿಸ್ಥಾನವೆಂಬುದು, ಕಾಲಕಾಲಕ್ಕೆ ತಮ್ಮಬಳಿ ತಗ್ಗಿಬಗ್ಗಿ ಆರ್ಥಿಕ ಸಹಾಯ ಯಾಚಿಸುವ ರಾಷ್ಟ್ರವಷ್ಟೆ. ಕಳೆದ ವರ್ಷ ಪಾಕಿಸ್ಥಾನಕ್ಕೆ ಇವರೆಡೂ ರಾಷ್ಟ್ರಗಳಿಂದ ತಲಾ 6 ಶತಕೋಟಿ ಡಾಲರ್‌ ಸಹಾಯ ಸಿಕ್ಕಿದೆ. ಸೌದಿಯರು ಪಾಕಿಸ್ಥಾನಿಯರನ್ನು ಬಾಂಗ್ಲಾದೇಶ, ಶ್ರೀಲಂಕಾ, ಫಿಲಿಪ್ಪೀನ್ಸ್‌ನ ಜನರಂತೆಯೇ ದಿವಾಳಿಯೆದ್ದ (ಕಷ್ಟದಲ್ಲಿರುವ) ಜನರು ಎಂದೇ ಪರಿಗಣಿಸುತ್ತಾರೆ. ಸೌದಿಗಳು “ರಫೀಕ್‌’ ಎನ್ನುವ ಒಂದು ಪದ ಬಳಸುತ್ತಾರೆ. ಈ ಪದದ ಅರ್ಥ- “ಆಪ್ತಮಿತ್ರ’ ಎಂಬುದು. ಈ ಪದವನ್ನು ಸೌದಿಗಳು ಐರೋಪ್ಯ ರಾಷ್ಟ್ರಗಳ ಮತ್ತು ಅಮೆರಿಕದ ಬಿಳಿ ಜನರಿಗೆ ಬಳಸುತ್ತಾರೆ. ಭಾರತೀಯರನ್ನು ಸದ್ಯಕ್ಕೆ ಅವರು ರಫೀಕ್‌ ಎಂದು ಕರೆಯುವುದಿಲ್ಲವಾದರೂ, ಮುಂದಿನ ದಿನಗಳಲ್ಲಿ ಕರೆದರೂ ಕರೆಯಬಹುದು.

ಇನ್ನು ಸೌದಿ ಮತ್ತು ಯುಎಇ ಕಾಶ್ಮೀರದ ವಿಚಾರದಲ್ಲೇನಾದರೂ ಮಾತನಾಡಿದರೆ, ಅವು ತಮ್ಮ ನೆಲದಲ್ಲೇ ಪ್ರತಿಕೂಲ ಪರಿಣಾಮ ಎದುರಿಸಬೇಕಾಗುತ್ತದೆ. ಭಾರತದ ಬೆಳೆಯುತ್ತಿರುವ ಆರ್ಥಿಕ ಪ್ರಭಾವ, ಅದರ ಕೆಲಸಗಾರರ ಆಧುನಿಕತೆ, ಉಗ್ರವಿರೋಧಿ ನೀತಿ ಹಾಗೂ ಮಿಲಿಟರಿ ವಿಷಯದಲಿನ ಸಹಯೋಗದಿಂದಾಗಿ ಈ ರಾಷ್ಟ್ರಗಳು ಪಾಕಿಸ್ಥಾನವನ್ನು ದಶಕದ ಹಿಂದೆಯೇ ದೂರಕ್ಕೆ ತಳ್ಳಿವೆ. 2016ರಲ್ಲಿ, ಸೌದಿ ದೊರೆಯು ತಮ್ಮ ರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನರೇಂದ್ರ ಮೋದಿಗೆ ನೀಡಿದರು. ಈ ಹಿಂದೆ ಈ ಪ್ರಶಸ್ತಿ ಪಡೆದವರೆಂದರೆ-ಶಿಂಜೋ ಅಬೆ, ಡೇವಿಡ್‌ ಕೆಮರಾನ್‌, ಬರಾಕ್‌ ಒಬಾಮಾ, ವ್ಲಾಡಿಮಿರ್‌ ಪುಟಿನ್‌, ಅಬ್ದಲ್‌ ಫ‌ತಾಹ್‌ ಅಲ್‌ ಸಿಸಿ. ಈ ಪಟ್ಟಿಯಲ್ಲಿ ಒಬ್ಬೇನೆ ಒಬ್ಬ ಪಾಕಿಸ್ಥಾನಿ

ನಾಯಕನಿಲ್ಲ!
ಭಾರತವು ಕಾಶ್ಮೀರ ಭಾಗವನ್ನು ಲಾಕ್‌ಡೌನ್‌ ಮಾಡಿದ ಕೆಲವೇ ದಿನಗಳ ನಂತರ ಸೌದಿ ದೊರೆ ಮೊಹಮ್ಮದ್‌ ಬಿನ್‌ ಸಲ್ಮಾನ್‌, ಭಾರತದಲ್ಲಿ 2021ರೊಳಗೆ 100 ಶತಕೋಟಿ ಡಾಲರ್‌ ಹೂಡುವುದಾಗಿ ಭರವಸೆ ನೀಡಿದರು. ಇದೇ ವರ್ಷ ಅವರು, ತಾವು ಪಾಕಿಸ್ಥಾನದಲ್ಲಿ 20 ಶತಕೋಟಿ ಡಾಲರ್‌ ಹೂಡಿಕೆ ಮಾಡುವುದಾಗಿ ಭರವಸೆ ನೀಡಿದ್ದರು. ಎರಡೂ ರಾಷ್ಟ್ರಗಳಲ್ಲಿ ಸೌದಿ ಮಾಡಲು ಇಚ್ಛಿಸಿರುವ ಹೂಡಿಕೆ

ಪ್ರಮಾಣದಲ್ಲಿನ ಅಂತರ ನೋಡಿ!
2017-2018ರಲ್ಲಿ ಪಾಕಿಸ್ಥಾನ-ಸೌದಿ ನಡುವಿನ ವ್ಯಾಪಾರದ ಪ್ರಮಾಣ 7.5 ಶತಕೋಟಿ ಡಾಲರ್‌ನಷ್ಟಿದ್ದರೆ, ಅದೇ ವರ್ಷದಲ್ಲಿ ಭಾರತ-ಸೌದಿ ನಡುವೆ 27.5 ಶತಕೋಟಿ ಡಾಲರ್‌ನಷ್ಟು ವ್ಯಾಪಾರ ನಡೆದಿತ್ತು. ಸೌದಿಯಲ್ಲಿನ ಪಾಕಿಸ್ಥಾನಿ ಕೆಲಸಗಾರರು ಆ ವರ್ಷ ದೇಶಕ್ಕೆ 4.9 ಶತಕೋಟಿ ಡಾಲರ್‌ ಹಣ ಕಳುಹಿಸಿದರೆ, ಭಾರತೀಯ ಕೆಲಸಗಾರರು ತಮ್ಮ ದೇಶಕ್ಕೆ 12.2 ಶತಕೋಟಿ ಡಾಲರ್‌ ಕಳುಹಿಸಿದ್ದರು.

ಯುಎಇಯಂತೂ ಪಾಕಿಸ್ಥಾನದ ಗಾಯಕ್ಕೆ ಉಪ್ಪುಸವರುವಂತೆ ವರ್ತಿಸುತ್ತಿದೆ. ಯುಎಇ ರಾಯಭಾರಿ ಅಹ್ಮದ್‌ ಅಲ್‌ ಬನ್ನಾ ಅವರು, “ಕಾಶ್ಮೀರವು ಭಾರತದ ಆಂತರಿಕ ವಿಚಾರವಾಗಿದ್ದು, ಭಾರತ ಶಾಂತಿ ಮತ್ತು ಸ್ಥಿರತೆಯತ್ತ ಹೆಜ್ಜೆಯಿಡುತ್ತಿದೆ’ ಎಂದು
ಸಮರ್ಥಿಸಿಕೊಂಡರು. ಇದಾದ ನಂತರ, ಅಂದರೆ, ಆಗಸ್ಟ್‌ 24ರಂದು ಯುಎಇ ನರೇಂದ್ರ ಮೋದಿಯವರಿಗೆ ತನ್ನ ದೇಶದ ಅತ್ಯುನ್ನತ ನಾಗರಿಕ ಗೌರವವಾದ “ಆರ್ಡರ್‌ ಆಫ್ ಜಾಯೆದ್‌’ನಿಂದ ಸಮ್ಮಾನಿಸಿತು.

ಕಾಶ್ಮೀರದ ವಿಚಾರದಲ್ಲಿ ಅದೇಕೆ ಸೌದಿ ಮತ್ತು ಯುಎಇ ಪಾಕಿಸ್ಥಾನಕ್ಕೆ ಬೆಂಬಲ ನೀಡುವುದಿಲ್ಲ ಎನ್ನುವುದಕ್ಕೆ ಭಾರತದೊಂದಿಗಿನ ಅವುಗಳ ದೋಸ್ತಿಯೊಂದೇ ಕಾರಣವಲ್ಲ. ಇವೆರಡೂ ರಾಷ್ಟ್ರಗಳಲ್ಲಿ ಆಡಳಿತದ ಚುಕ್ಕಾಣಿ ಹಿಡಿಯುವವರು ತಮ್ಮ ಹುಟ್ಟಿನಿಂದಾಗಿ ಅಧಿಕಾರಕ್ಕೆ ಬಂದಿರುತ್ತಾರೆಯೇ ಹೊರತು, ಚುನಾವಣೆಯ ಮೂಲಕವಲ್ಲ. ಒಂದು ವೇಳೆ ಇವೆರಡೂ ರಾಷ್ಟ್ರಗಳು ಕಾಶ್ಮೀರಿಗಳ ಪ್ರಜಾಪ್ರಭುತ್ವಿàಯ ಹಕ್ಕುಗಳ ಬಗ್ಗೆ ಮಾತನಾಡಲು ಆರಂಭಿಸಿದರೆ ಪರಿಸ್ಥಿತಿ ಏನಾಗಬಹುದೋ ಊಹಿಸಿ! ಆಗ ಮೊದಲು ಉದ್ಭವವಾಗುವ ಪ್ರಶ್ನೆಯೇ ಈ ರಾಷ್ಟ್ರಗಳಲ್ಲೇಕೆ ಪ್ರಜಾಪ್ರಭುತ್ವವಿಲ್ಲ? ಏಕೆ ಚುನಾವಣೆ ನಡೆಯುತ್ತಿಲ್ಲ ಎನ್ನುವುದು.

ಆದಾಗ್ಯೂ ಅರಬ್‌ ಕ್ರಾಂತಿಯು ಸ್ಥಾನೀಯ ರಾಜಪ್ರಭುತ್ವಗಳು ಮತ್ತು ಸರ್ವಾಧಿಕಾರಿಗಳಿಗೆ ಕೆಲ ಕಾಲ ಸವಾಲೆಸೆದವಾದರೂ, ಅವುಗಳನ್ನು ಈ ರಾಷ್ಟ್ರಗಳು ಮೆಟ್ಟಿನಿಂತವು. ಈಜಿಪ್ತ್ನಲ್ಲಿ ಅರಬ್‌ ಸ್ಪ್ರಿಂಗ್‌ ಅನ್ನು ತುಳಿದುಹಾಕಲು ಸಹಾಯ ಮಾಡಿದ ಜನರಲ್‌ ಅಬ್ಲೆದ್‌ ಫ‌ತಾಹ್‌ ಅಲ್‌ ಸಿಸಿಗೂ ಕೂಡ ಸೌದಿ ತನ್ನ ಅತ್ಯುನ್ನತ‌
ನಾಗರಿಕ ಪ್ರಶಸ್ತಿಯನ್ನು ಕೊಟ್ಟಿದೆ ಎನ್ನುವುದು ನೆನಪಿರಲಿ.

ಹಾಗೆಂದು ಸೌದಿಗೆ ಕಾಶ್ಮೀರದ ಮೇಲೆ ಆಸಕ್ತಿಯೇ ಇಲ್ಲ ಎಂದು ನಾವು ತೀರ್ಪು ನೀಡುವಂತಿಲ್ಲ. ಈಗ ಸೌದಿ ಮತ್ತು ಇರಾನ್‌ನ ನಡುವೆ ಪರೋಕ್ಷ ಯುದ್ಧ ನಡೆದಿದೆ. ಇವೆರಡೂ ರಾಷ್ಟ್ರಗಳು ಕಾಶ್ಮೀರದಲ್ಲಿ ತಮ್ಮ ಶೈಲಿಯ ಇಸ್ಲಾಂ ಅನ್ನು ಸೇರಿಸಲು ಪ್ರಯತ್ನಿಸುತ್ತಿವೆ. ಈ ಕಾರಣಕ್ಕಾಗಿಯೇ ಕಾಶ್ಮೀರದಲ್ಲಿನ ಮಸೀದಿ, ಮದ್ರಾಸಾ, ಮತ್ತು ಮತಬೋಧಕರಿಗೆ ಈ ದೇಶಗಳಿಂದ ದೇಣಿಗೆ ಸಂದಾಯವಾಗುತ್ತಿದೆ.

ಗಮನಿಸಬೇಕಾದ ಅಂಶವೆಂದರೆ, ಕಾಶ್ಮೀರಿಗಳನ್ನು ಬೆಂಬಲಿಸುವ ವಿಚಾರದಲ್ಲಿ ಈ ರಾಷ್ಟ್ರಗಳಿಗೆ ಮುಖ್ಯವಾಗಿರುವುದು ತಮ್ಮ ತಮ್ಮ ದೇಶದ ಹಿತಾಸಕ್ತಿಯೇ. ಇತ್ತೀಚೆಗೆ ಇರಾನ್‌ ಭಾರತದ ವಿರುದ್ಧ ಮುನಿಸು ತೋರಿದ್ದರ ಹಿಂದೆ, ಕಾಶ್ಮೀರಿ ಶಿಯಾಗಳೊಂದಿಗೆ(15 ಪ್ರತಿಶತದಷ್ಟಿದ್ದಾರೆ) ತಾನಿದ್ದೇನೆ ಎಂದು ತೋರಿಸುವುದೇ ಆಗಿತ್ತು. ಅದಕ್ಕಿಂತ ಮುಖ್ಯವಾಗಿ, ತನ್ನ ಮೇಲಿನ ಅಮೆರಿಕದ ನಿರ್ಬಂಧಗಳಿಗೆ ಭಾರತ ತಲೆದೂಗುತ್ತಿರುವುದರಿಂದ ಬೇಸರಗೊಂಡಿರುವ ಇರಾನ್‌, ಈ ರೀತಿ ಅಸಮ್ಮತಿ ಸೂಚಿಸಿರಲೂಬಹುದು.

ಇದೇನೇ ಇದ್ದರೂ, ಅನ್ಯ ರಾಷ್ಟ್ರಗಳ ಬಗ್ಗೆ ಕಠೊರವಾಗಿ ಮತನಾಡುವ ಮುನ್ನ, ಒಮ್ಮೆ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವ ಅಗತ್ಯವೂ ಇದೆ. ಮೊದಲನೆಯದಾಗಿ, ಪಾಕಿಸ್ಥಾನ ಕೂಡ ಸಿಪಿಇಸಿ ವಿಚಾರದಲ್ಲಿ(ಚೀನಾ-ಪಾಕಿಸ್ಥಾನ ಎಕನಾಮಿಕ್‌ ಕಾರಿಡಾರ್‌) ಕೆಲವು ಸಂಗತಿಗಳಿಗೆ ಜಾಣ ಕುರುಡುತನ ತೋರಿಸುತ್ತಿದೆ ಎನ್ನುವುದನ್ನು ನಾವು ಒಪ್ಪಿಕೊಳ್ಳಬೇಕಿದೆ. ಅತ್ತ ಚೀನಾ ಸಿಪಿಇಸಿಗಾಗಿ ಉಯರ್‌ ಮುಸಲ್ಮಾನರನ್ನು ಬಲವಂತವಾಗಿ ಅವರ ನೆಲದಿಂದ ಒಕ್ಕಲೆಬ್ಬಿಸುತ್ತಿದೆ, ಆ ಜನರನ್ನು ಇಸ್ಲಾಂನಿಂದ ಹೊರತರಲು “ರೀ-ಎಜುಕೇಷನ್‌ ಕ್ಯಾಂಪ್‌ಗಳಿಗೆ’ ಕಳುಹಿಸುತ್ತಿದೆ. ಈ ವಿಚಾರದಲ್ಲಿ ಪಾಕಿಸ್ಥಾನ ಮಾತನಾಡುತ್ತಲೇ ಇಲ್ಲ. ಇನ್ನು ಎಲ್ಲಿ ಸೌದಿ ಮತ್ತು ಎಮಿರೇಟ್‌ಗಳು ಮುನಿಸಿಕೊಳ್ಳುತ್ತವೋ ಎನ್ನುವ ಕಾರಣಕ್ಕೆ ಯೆಮೆನ್‌ನಲ್ಲಿ ಅವುಗಳು ನಡೆಸಿರುವ ವಿದ್ವಂಸದ ಬಗ್ಗೆ ಪಾಕಿಸ್ಥಾನ ತುಟಿ ಬಿಚ್ಚುವುದಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ನಾವು ನಮ್ಮ ಮಿಲಿಟರಿ ಸ್ವಾರ್ಥಕ್ಕಾಗಿ, ಹಣಕಾಸಿನ ನೆರವಿಗಾಗಿ ದಶಕಗಳಿಂದಲೂ ಅಮೆರಿಕದ ಹಿತಾಸಕ್ತಿಗೆ ತಕ್ಕಂತೆ ಕುಣಿಯುತ್ತಾ ಬಂದಿದ್ದೇವೆ ಎನ್ನುವುದನ್ನೂ ಒಪ್ಪಿ ಕೊಳ್ಳುವುದಿಲ್ಲ…

(ಲೇಖಕರು ಲಾಹೋರ್‌ ಮತ್ತು ಇಸ್ಲಾಮಾಬಾದ್‌ನಲ್ಲಿ ಭೌತಶಾಸ್ತ್ರ ಪ್ರಧ್ಯಾಪಕರಾಗಿದ್ದಾರೆ.)

ಪರ್ವೇಜ್‌ ಹುಡ್‌ಭೋಯ್‌
ಪಾಕಿಸ್ತಾನದ ಪರಮಾಣು ವಿಜ್ಞಾನಿ

Advertisement

Udayavani is now on Telegram. Click here to join our channel and stay updated with the latest news.

Next