Advertisement
ಹೌತಿ ಬಂಡುಕೋರರು ಸೌದಿ ನಗರದ ಜೆಡ್ಡಾದಲ್ಲಿನ ತೈಲ ಡಿಪೋ ಮೇಲೆ ದಾಳಿ ಮಾಡಿದ ಒಂದು ದಿನದ ನಂತರ ಸನಾ ಮತ್ತು ಹೊಡೆಯ್ಡಾ ಮೇಲೆ ರಾತ್ರಿ ವೈಮಾನಿಕ ದಾಳಿಗಳನ್ನು ನಡೆಸಲಾಗಿದೆ.
Related Articles
Advertisement
ಆನ್‌ಲೈನ್‌ನಲ್ಲಿ ಪ್ರಸಾರವಾದ ದೃಶ್ಯಾವಳಿಗಳಲ್ಲಿ ಸನಾ ಮತ್ತು ಹೊಡೆಡಾದಲ್ಲಿ ಭಾರಿ ಬೆಂಕಿ ಮತ್ತು ಹೊಗೆ ಕಂಡು ಬಂದಿದ್ದು, ಯೆಮೆನ್ ರಾಜಧಾನಿಯಲ್ಲಿ ಅಸೋಸಿಯೇಟೆಡ್ ಪ್ರೆಸ್ ಪತ್ರಕರ್ತರು ದೊಡ್ಡ ಸ್ಫೋಟಗಳನ್ನು ಕೇಳಿಸಿದ್ದು, ಅಲ್ಲಿನ ವಸತಿ ಕಟ್ಟಡಗಳು ಜರ್ಜರಿತಗೊಂಡಿವೆ ಎಂದು ವರದಿ ಮಾಡಿದ್ದಾರೆ.
ಒಕ್ಕೂಟದ ವೈಮಾನಿಕ ದಾಳಿಯು ವಿದ್ಯುತ್ ಸ್ಥಾವರ, ಇಂಧನ ಪೂರೈಕೆ ಕೇಂದ್ರ ಮತ್ತು ರಾಜಧಾನಿಯಲ್ಲಿನ ಸರ್ಕಾರಿ ಸಾಮಾಜಿಕ ವಿಮಾ ಕಚೇರಿಯನ್ನು ಹಾನಿ ಮಾಡಿದೆ. ಮಕ್ಕಳು ಮತ್ತು ಮಹಿಳೆಯರು ಸೇರಿ ಎಂಟು ಮಂದಿ ಅಮಾಯಕರು ಸಾವನ್ನಪ್ಪಿದ್ದಾರೆ ಎಂದು ಹೌತಿಗಳು ಹೇಳಿದ್ದಾರೆ.
2014 ರಲ್ಲಿ ಹೌತಿಗಳು ಸನಾವನ್ನು ವಶಪಡಿಸಿಕೊಂಡ ನಂತರ ಯೆಮೆನ್‌ನಲ್ಲಿ ಯುದ್ಧವು ಸ್ಫೋಟಗೊಂಡಿತ್ತು. ತಿಂಗಳುಗಳ ನಂತರ, ಸೌದಿ ಅರೇಬಿಯಾ ಮತ್ತು ಅದರ ಮಿತ್ರರಾಷ್ಟ್ರಗಳು ಹೌತಿಗಳನ್ನು ಹೊರಹಾಕಲು ಮತ್ತು ಅಂತರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಸರ್ಕಾರವನ್ನು ಪುನಃಸ್ಥಾಪಿಸಲು ವಾಯು ದಾಳಿಯನ್ನು ಪ್ರಾರಂಭಿಸಿದ್ದವು. ಇತ್ತೀಚಿನ ವರ್ಷಗಳಲ್ಲಿ ಈ ಸಂಘರ್ಷವು ಪ್ರಾದೇಶಿಕ ಯುದ್ಧವಾಗಿ ಮಾರ್ಪಟ್ಟಿದೆ.
ವಿಶ್ವದ ಅತ್ಯಂತ ಕೆಟ್ಟ ಮಾನವೀಯ ಬಿಕ್ಕಟ್ಟುಗಳಲ್ಲಿ ಒಂದಾದ ಈ ಯುದ್ಧ 14,500 ನಾಗರಿಕರು ಸೇರಿ 150,000 ಕ್ಕಿಂತ ಹೆಚ್ಚು ಜನರ ಸಾವಿಗೆ ಕಾರಣವಾಗಿತ್ತು.