ನವದೆಹಲಿ : ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜೈಲು ಪಾಲಾಗಿರುವ ದೆಹಲಿ ಸಚಿವ ಸತ್ಯೇಂದರ್ ಜೈನ್ ಅವರ ಐಷಾರಾಮಿ ಜೀವನದ ವಿಡಿಯೋಗಳು ಜಾಲತಾಣದಲ್ಲಿ ಹರಿದಾಡುತ್ತಿವೆ.
ಕೆಲ ದಿನಗಳ ಹಿಂದೆ ಜೈಲಿನಲ್ಲಿ ಮಸಾಜ್ ಮಾಡುತ್ತಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಇದೀಗ ಅದ್ದೂರಿ ಊಟದ ವಿಡಿಯೋ ವೈರಲ್ ಆಗುತ್ತಿರುವುದು ಬೆಳಕಿಗೆ ಬಂದಿದೆ.
ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಪ್ ನಾಯಕ ಸತ್ಯೇಂದರ್ ಜೈನ್ ಅವರರು ದೆಹಲಿಯ ತಿಹಾರ್ ಜೈಲಿಗೆ ಹೋಗಿದ್ದರು ಈ ವೇಳೆ ಅಲ್ಲಿ ಅವರಿಗೆ ವಿಐಪಿ ಆತಿಥ್ಯ ನೀಡಲಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು ಅದಕ್ಕೆ ಪುಷ್ಟಿ ನೀಡುವಂತೆ ಜೈಲಿನಲ್ಲಿ ಆಪ್ ನಾಯಕ ಸತ್ಯೇಂದರ್ ಜೈನ್ ಅವರ ಕಾಲಿಗೆ ಮಸಾಜ್ ಮಾಡುವ ವಿಡಿಯೋ ವೈರಲ್ ಆಗಿತ್ತು ಈ ವಿಚಾರ ದೊಡ್ಡ ಮಟ್ಟದಲ್ಲಿ ಪ್ರಚವಾಗಿತ್ತು ಅಲ್ಲದೆ ಸಚಿವರಿಗೆ ವಿಐಪಿ ಚಿಕಿತ್ಸೆ ನೀಡಿದ ಆರೋಪದಲ್ಲಿ ತಿಹಾರ್ ಜೈಲಿನ ಸೂಪರಿಂಟೆಂಡೆಂಟ್ ಅಜಿತ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿತ್ತು.
ಆದರೆ ಇದೀಗ ಜೈಲಿನಲ್ಲಿರುವ ನಾಯಕನಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಇನ್ನೊಂದು ವಿಡಿಯೋ ವೈರಲ್ ಆಗುತ್ತಿದೆ.
ಅದರಲ್ಲಿ ಸತ್ಯೇಂದರ್ ಜೈನ್ ಅವರಿಗೆ ಹೊರಗಿನ ಹೋಟೆಲ್ ನಿಂದ ಅದ್ದೂರಿ ಊಟ ತರಿಸಿ ಸತ್ಕಾರ ಮಾಡಲಾಗುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
Related Articles
ಇದನ್ನೂ ಓದಿ: ಹೆಗ್ಗಡೆ ಜೀವನವೇ ಧರ್ಮದ ವ್ಯಾಖ್ಯಾನ: ಕೇಂದ್ರ ಸಚಿವೆ ಸ್ಮತಿ ಇರಾನಿ