Advertisement
ಭಕ್ತ ಸಾಗರದೊಂದಿಗೆ ರವಿವಾರ ಸಂಜೆ ಭವ್ಯವಾಗಿ ನಡೆದ ಶೋಭಾಯಾತ್ರೆಯೊಂದಿಗೆ ಸೋಮವಾರ ಚಾತುರ್ಮಾಸ್ಯವು ಶಾಸ್ತ್ರೋಕ್ತ ಸಂಕಲ್ಪದೊಂದಿಗೆ ವಿದ್ಯುಕ್ತವಾಗಿ ಆರಂಭಗೊಂಡಿತು. ಶ್ರೀಮದುತ್ತರಾದಿ ಮಠ ಸಂಸ್ಥಾನದ ರತ್ನಖಚಿತ-ವಜ್ರಮಂಟಪದಲ್ಲಿ ಮೂಲರಾಮದೇವರ ಪೂಜೆ ನೆರವೇರಿಸಿದ ಬಳಿಕ ಶ್ರೀಗಳು ಚಾತುರ್ಮಾಸ್ಯ ವ್ರತದ ಸಂಕಲ್ಪ ಕೈಗೊಂಡರು. ಶ್ರೀಗಳ ಪೂರ್ವಾಶ್ರಮದ ಪಿತೃಗಳಾದ ಬೆಂಗಳೂರಿನ ಶ್ರೀ ಜಯತೀರ್ಥ ವಿದ್ಯಾಪೀಠದಕುಲಪತಿ ಪಂ| ಗುತ್ತಲ ರಂಗಾಚಾರ್ಯರು, ಉತ್ತರಾದಿ ಮಠದ ದಿವಾನರಾದ ಪಂ| ಪ್ರಹ್ಲಾದಾಚಾರ್ಯ ಉಪಾಧ್ಯಾಯ, ಮುಂಬೈ ಶ್ರೀ ಸತ್ಯಧ್ಯಾನ ವಿದ್ಯಾಪೀಠದ ಕುಲಪತಿ ಪಂ. ಮಾಹುಲಿ ವಿದ್ಯಾಸಿಂಹಾಚಾರ್ಯರು, ಪಂ. ಕೃಷ್ಣಾಚಾರ್ಯ ಖೇಡ ಕಡಪಾ, ಪಂ. ವಿದ್ಯಾಧೀಶಾಚಾರ್ಯ ಗುತ್ತಲ, ಪಂ. ವಿಶ್ವಪ್ರಜ್ಞಾಚಾರ್ಯ ಮಾಹುಲಿ, ದಿವಾನರಾದ
ಪಂ. ಶಶಿ ಆಚಾರ್ಯ, ಮಳಖೇಡ ಉತ್ತರಾದಿ ಮಠದ ವ್ಯವಸ್ಥಾಪಕರಾದ ಪಂ. ವೆಂಕಣ್ಣಾಚಾರ್ಯ ಕೃ. ಪೂಜಾರ, ಪಂ. ರಾಮಾಚಾರ್ಯ ಅವಧಾನಿ, ಮಠಾಧಿಕಾರಿಗಳಾದ ಘಂಟಿ ರಾಮಾಚಾರ್ಯರು, ಪಂ. ಗೋಪಾಲಾಚಾರ್ಯ
ಅಕಮಂಚಿ, ಪಂ. ಗಿರೀಶಾಚಾರ್ಯ ಅವಧಾನಿ, ಪಂ. ಡಾ| ಹನುಮಂತಾಚಾರ್ಯ ಸರಡಗಿ, ಪಂ. ಶ್ರೀನಾಥಾಚಾರ್ಯ ಕೊಪ್ಪರ ಮತ್ತಿತರರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು.