Advertisement

ಮೈರ ಸತ್ಯಧರ್ಮ ಜೋಡುಕೆರೆ ಕಂಬಳಕ್ಕೆ ಚಾಲನೆ

09:01 AM Dec 01, 2019 | sudhir |

ಪುಂಜಾಲಕಟ್ಟೆ: ಬಂಟ್ವಾಳ ತಾ| ಉಳಿ ಗ್ರಾಮದ ಕಕ್ಯಪದವಿನ ಮೈರ ಬರ್ಕೆಜಾಲುನಲ್ಲಿ ಮೈರ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ನಡೆಯುವ ಏಳನೇ ವರ್ಷದ ಪ್ರಯುಕ್ತ ನಡೆದ ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳಕ್ಕೆ ಶನಿವಾರ ಚಾಲನೆ ನೀಡಲಾಯಿತು.

Advertisement

ಪ್ರಗತಿಪರ ಕೃಷಿಕ ರವೀಂದ್ರ ಅಡಪ ದಿಡಿಂಬಿಲ ಅವರು ಕಂಬಳದ ಕರೆಯನ್ನು ಉದ್ಘಾಟಿಸಿ ಕಂಬಳಕ್ಕೆ ಚಾಲನೆ ನೀಡಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ಹಾಗೂ ಕಂಬಳ ಕೋಣಗಳ ಯಜಮಾನ ಸುರೇಶ್‌ ಶೆಟ್ಟಿ ಮಿಯ್ನಾರು ಅವರು ಉದ್ಘಾಟಿಸಿದರು. ಉಪ್ಪಿನಂಗಡಿ ದಂತ ವೈದ್ಯ ಡಾ.ರಾಜಾರಾಂ ಕೋಂಗುಜೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದೆ ಕೃಷಿ ಕಾರ್ಯಗಳು ಮುಗಿದು ಮನೋರಂಜನೆಗಾಗಿ ತೊಡಗಿಸಿಕೊಂಡ ಕೋಣಗಳ ಓಟ ಇಂದು ವೈಭವದ ಆಧುನಿಕ ಹೈಟೆಕ್‌ ಕಂಬಳವಾಗಿ ರೂಪಾಂತರಗೊಂಡಿರುವುದು ಸಂತಸವಾಗಿದೆ.

ಕಂಬಳ ಕ್ರೀಡೆ ಜಾತಿ ಧರ್ಮ ಮರೆತು ಜನರನ್ನು ಭಾವನಾತ್ಮವಾಗಿ ಬೆಸೆಯುವ ಕ್ರೀಡೆಯಾಗಿದೆ. ಬೇರೆ ಬೇರೆ ಊರಿನ ಜನರು ಒಂದೆಡೆ ಸೇರಿ ತಮ್ಮ ಕೃಷಿ ಕಾರ್ಯಗಳ ಬಗ್ಗೆ ಮಾತುಕತೆ ನಡೆಸಲು ಕಂಬಳ ಪೂರಕವಾಗಿದೆ ಎಂದರು.

ತೀರಾ ಗ್ರಾಮೀಣ ಪ್ರದೇಶದಲ್ಲಿ ಪ್ರಸಕ್ತ ಕಂಬಳ ಋತುವಿನ ಪ್ರಥಮ ಕಂಬಳ ಸಂಘಟಿಸಲು ಶ್ರಮ ವಹಿಸಿದ ಮೈರ ಶ್ರೀ ರಾಮಾಂಜನೇಯ ಗೆಳೆಯರ ಬಳಗ ಅಭಿನಂದಾರ್ಹರು. ಕಂಬಳ ಯಶಸ್ವಿಯಾಗಲಿ ಎಂದು ಹೇಳಿದರು.

Advertisement

ವೇ| ಮೂ| ವಾಸುದೇವ ಭಟ್‌ ಅವರು ಪೂಜಾ ವಿಧಿಗಳನ್ನು ನಿರ್ವಹಿಸಿದರು . ಸತ್ಯ ಧರ್ಮ ಕಂಬಳ ಸಮಿತಿ ಅಧ್ಯಕ್ಷ ರವಿ ಕಕ್ಯಪದವು, ಕಂಬಳ ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ಆರ್‌.ಶೆಟ್ಟಿ, ಸತ್ಯ ಧರ್ಮ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಲತೀಶ್‌ ಕುಕ್ಕಾಜೆ, ಶ್ರೀ ರಾಮಾಂಜನೇಯ ಗೆಳೆಯರ ಬಳಗದ ಅಧ್ಯಕ್ಷ ಮಹೇಂದ್ರ ಕಾಯರ್‌ಗುರಿ, ಕೋಶಾಧಿಕಾರಿ ಉಮೇಶ್‌ ಪೂಜಾರಿ, ಗೆಳೆಯರ ಬಳಗದ ಪದಾಧಿಕಾರಿಗಳಾದ ನ್ಯಾಯವಾದಿ ರಂಜಿತ್‌ ಮೈರ, ಪುರುಷೋತ್ತಮ ಪಲ್ಕೆ, ಕುಸುಮಾಧರ ಉರ್ಕಿ, ಪ್ರಮುಖರಾದ ಚಿದಾನಂದ ರೈ, ಗಂಗಾಧರ ಪೂಜಾರಿ ಕಜೆಕಾರು, ಪ್ರವೀಣ್‌ ಶೆಟ್ಟಿ ಕಿಂಜಾಲು, ಸುಧಾಕರ ಶೆಟ್ಟಿ ಶಂಕರಬೆಟ್ಟು, ಪ್ರದೀಪ್‌, ದಿನೇಶ್‌ ಪೂಜಾರಿ ಕುಕ್ಕಾಜೆ, ಶಿವಪ್ಪ ಪೂಜಾರಿ ಜೇಡರಬೆಟ್ಟು, ಸುಂದರ ಪೂಜಾರಿ ಕೊಲೆಂಜಿರಕೊಡಿ, ಜಯ ಪೂಜಾರಿ ಕುಕ್ಕಾಜೆ, ಮಹಮ್ಮದ್‌, ಯೋಗೀಶ್‌ ಪೂಜಾರಿ, ರಫೀಕ್‌ ಬನತ್ತಪಲ್ಕೆ, ಶಾಂತಪ್ಪ ಪೂಜಾರಿ ಹಟದಡ್ಕ, ದಯಾನಂದ ಮುಂಡ್ರೇಲು, ಲಿಂಗಪ್ಪ ಗೌಡ ಮಹಮ್ಮಾಯಿ, ಪ್ರಶಾಂತ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಗೆಳೆಯರ ಬಳಗದ ಸ್ಥಾಪಕಾಧ್ಯಕ್ಷ ಶಿವಾನಂದ ಮೈರ ಸ್ವಾಗತಿಸಿದರು. ಪ್ರಶಾಂತ ಮೈರ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next