Advertisement
ಅರ್ಹತಾ ಆಟಗಾರರಾದ ಕೊರಿಯದ ಚೊಯ್ ಸೊಗ್ಯು ಮ ತ್ತು ಸೀ ಸಿಯುಂಗ್ ಜೆ ಅವರನ್ನು 21-17, 17-21, 21-19 ಗೇಮ್‌ಗಳ ಕಠಿನ ಹೋರಾಟದಲ್ಲಿ ಸಾತ್ವಿಕ್-ಚಿರಾಗ್ ಉರುಳಿಸಿದರು. ಶ್ರೇಯಾಂ ಕರಹಿತ ಆಟಗಾರರಾದ ಸಾತ್ವಿಕ್-ಚಿರಾಗ್ ಗೆಲುವು ದಾಖಲಿಸಲು ಸರಿಯಾಗಿ ಒಂದು ತಾಸು ತೆಗೆದುಕೊಂಡರು.
ಇದೇ ವೇಳೆ ಸಾಯಿ ಪ್ರಣೀತ್ ಸೋಲುವುದರೊಂದಿಗೆ ಸಿಂಗಲ್ಸ್‌ನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಪ್ರಣೀತ್ ಅವರು ಜಪಾನಿನ ಏಳನೇ ಶ್ರೇಯಾಂಕದ ಕೆಂಟ ಟಿಸುನೆಯಾಮ ಅವರಿಗೆ 18-21, 12-21 ಗೇಮ್‌ಗಳಿಂದ ಶರಣಾದರು.
Related Articles
Advertisement