Advertisement

China Masters Super 750 : ಸಾತ್ವಿಕ್-ಚಿರಾಗ್ ಜೋಡಿ ಫೈನಲ್ ಪ್ರವೇಶ

08:15 PM Nov 25, 2023 | Team Udayavani |

ಶೆಂಜೆನ್: ಮತ್ತೊಂದು ಆಕ್ರಮಣಕಾರಿ ಮಾಸ್ಟರ್‌ಕ್ಲಾಸ್ ಆಟ ತೋರಿದ ಭಾರತದ ಸ್ಟಾರ್ ಜೋಡಿ ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಶನಿವಾರ ಇಲ್ಲಿ ನಡೆದ ಚೀನಾ ಮಾಸ್ಟರ್ಸ್‌ ಬಿಡಬ್ಲ್ಯೂಎಫ್ ಸೂಪರ್ 750ನ ಪುರುಷರ ಡಬಲ್ಸ್ ಫೈನಲ್‌ ಪ್ರವೇಶಿಸಿದ್ದಾರೆ.

Advertisement

ಕಳೆದ ವರ್ಷ ಫ್ರೆಂಚ್ ಓಪನ್‌ನಲ್ಲಿ ತಮ್ಮ ಮೊದಲ BWF ವರ್ಲ್ಡ್ ಸೂಪರ್ 750 ಪ್ರಶಸ್ತಿಯನ್ನು ಗೆದ್ದಿದ್ದ ಮಾಜಿ ವಿಶ್ವದ ನಂ. 1 ಭಾರತೀಯ ಜೋಡಿ, ಹೊಸ ಚೀನಾದ ಜೋಡಿ ಹೀ ಜಿ ಟಿಂಗ್ ಮತ್ತು ರೆನ್ ಕ್ಸಿಯಾಂಗ್ ವಿರುದ್ಧ 50 ನಿಮಿಷಗಳ ಕಾಲ ನಡೆದ ಸ್ಫೋಟಕ ಸೆಮಿಫೈನಲ್‌ನಲ್ಲಿ 21-15 22-20 ಗೆಲುವು ಸಾಧಿಸಿದರು.

ಇನ್ನೊಂದು ಸೆಮಿ ಫೈನಲ್ ನಲ್ಲಿ ಚೀನಾದ ಮತ್ತೊಂದು ಜೋಡಿ ಚೆನ್ ಬೊ ಯಾಂಗ್ ಮತ್ತು ಲಿಯು ಯಿ ಮತ್ತು ಎರಡನೇ ಶ್ರೇಯಾಂಕದ ಲಿಯಾಂಗ್ ವೀ ಕೆಂಗ್ ಮತ್ತು ವಾಂಗ್ ಚಾಂಗ್ ಸೆಣಸಲಿದ್ದು ವಿಜೇತರೊಂದಿಗೆ ಸಾತ್ವಿಕ್-ಚಿರಾಗ್ ಪ್ರಶಸ್ತಿಗಾಗಿ ಹೋರಾಟ ನಡೆಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next