Advertisement
ವಿಶ್ವದ 26ನೇ ರ್‍ಯಾಂಕಿನ ಸಾತ್ವಿಕ್-ಅಶ್ವಿನಿ ಅವರು ತೀವ್ರ ಪೈಪೋಟಿಯಿದ ಹೋರಾಟದಲ್ಲಿ ವಿಶ್ವದ 7ನೇ ರ್‍ಯಾಂಕಿನ ಇಂಡೋನೇಶ್ಯದ ಪ್ರವೀಣ್ ಜೋರ್ಡಾನ್ ಮತ್ತು ಮೆಲಟಿ ದಯೀವಾ ಒಕ್ತಾವಿಯಂತಿ ಅವರನ್ನು 22-20, 17-21, 21-17 ಗೇಮ್‌ಗಳಿಂದ ಉರುಳಿಸಲು ಯಶಸ್ವಿಯಾದರು. ಛಲದ ಮತ್ತು ಲೆಕ್ಕಾಚಾರದ ಆಟವಾಡಿದ ಸಾತ್ವಿಕ್-ಅಶ್ವಿನಿ ಅವರು 50 ನಿಮಿಷಗಳಲ್ಲಿ ಈ ಹೋರಾಟದಲ್ಲಿ ಗೆಲುವು ಸಾಧಿಸಿ ದ್ವಿತೀಯ ಸುತ್ತಿಗೇರಿದರು.2018ರ ಇಂಡಿಯ ಓಪನ್ ಸಹಿತ ಜೋರ್ಡಾನ್ ಮತ್ತು ಮೆಲಟಿ ಅವರು ಇಷ್ಟರವರೆಗೆ ಐದು ಕೂಟದ ಫೈನಲ್ ಹಂತಕ್ಕೇರಿದ ಸಾಧನೆ ಮಾಡಿದ್ದಾರೆ. ಆದರೆ ಅವರಿಂದು ಭಾರತೀಯ ಶಟ್ಲರ್‌ಗಳ ನಿರಂತರ ಒತ್ತಡದ ಆಟಕ್ಕೆ ಮಣಿದು ಶರಣಾದರು. ಮೊದಲ ಗೇಮ್‌ನ ಆರಂಭದಲ್ಲಿ ಭಾರತೀಯ ಜೋಡಿ 4-7ರಿಂದ ಹಿನ್ನಡೆಯಲ್ಲಿತ್ತು. ಆಬಳಿಕ ಸತತ ಐದಂಕ ಗಳಿಸುವ ಮೂಲಕ ತಿರುಗೇಟು ನೀಡಿತು. ಇಲ್ಲಿಂದ ಜೋರ್ಡಾನ್-ಮೆಲಟಿ ಭರ್ಜರಿ ಆಟಕ್ಕೆ ಮುಂದಾಗಿ 18-12ಕ್ಕೆ ಮುನ್ನಡೆ ವಿಸ್ತರಿಸಿದರು. ಆದರೂ ಭಾರತೀಯರೂ ಸುಮ್ಮನಿರಲಿಲ್ಲ. ತಾಳ್ಮೆಯ ಆಟವಾಡಿ ಹಿನ್ನಡೆಯನ್ನು ಸರಿಪಡಿಸಿ 20-20 ಸಮಬಲಕ್ಕೆ ತಂದರಲ್ಲದೇ 22-20ರಿಂದ ಗೇಮ್ ಗೆದ್ದು ಅಚ್ಚರಿಗೊಳಿಸಿದರು.
ಸಾತ್ವಿಕ್-ಅಶ್ವಿನಿ ಅವರು ದ್ವಿತೀಯ ಸುತ್ತಿನಲ್ಲಿ ಜಪಾನಿನ ಯುಕಿ ಕನೆಕೊ-ಮಿಸಾಕಿ ಮಾಟ್ಸುಟೊಮೊ ಮತ್ತು ಅಯರ್‌ಲ್ಯಾಂಡಿನ ಅಣ್ಣ-ತಂಗಿ ಸ್ಯಾಮ್ ಮ್ಯಾಗೀ-ಚೊÉàಯಿ ಮ್ಯಾಗೀ ನಡುವಣ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.
ಇತ್ತೀಚೆಗೆ ನಡೆದ ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಚಿನ್ನ ಜಯಿಸಿದ್ದ ಭಾರತದ ಶಟ್ಲರ್ ಪಿವಿ ಸಿಂಧು ಅವರು ಬುಧವಾರ ನಡೆಯುವ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಚೀನದ ಲೀ ಕ್ಸುಯಿ ರುಯಿ ಅವರನ್ನು ಎದುರಿಸಲಿದ್ದಾರೆ. ಇದಕ್ಕಿಂತ ಮೊದಲು ಸೈನಾ ನೆಹ್ವಾಲ್ ಅವರು ಥಾçಲಂಡಿನ ಬುಸಾನನ್ ಆಂಗ್ಬಮುರುಗನ್ ಅವರನ್ನು ಎದುರಿಸಲಿದ್ದಾರೆ. ಪುರುಷರಲ್ಲಿ ಪಾರುಪಳ್ಳಿ ಕಶ್ಯಪ್ ಅವರು ಬ್ರೈಸ್ ಲೆವರ್‌ಡೆಜ್ ಅವರನ್ನು ಎದುರಿಸಲಿದ್ದರೆ ಸಾಯಿ ಪ್ರಣೀತ್ ಅವರು ಸುಪ್ಪನ್ಯು ಅವಿಹಿಂಗಾÕನನ್ ಅವರ ಸವಾಲನ್ನು ಎದುರಿಸಲಿದ್ದಾರೆ.