Advertisement

ನಿಲ್ಲದ ರೈತರ ಧರಣಿ ಸತ್ಯಾಗ್ರಹ

12:00 PM Sep 28, 2018 | |

ಬಸವನಬಾಗೇವಾಡಿ: ಪಟ್ಟಣದಲ್ಲಿ ಕಂದಾಯ ಇಲಾಖೆಯ ಉಪವಿಭಾಗ ಕಚೇರಿ ಸ್ಥಾಪಿಸಬೇಕು ಮತ್ತು ಜಿಲ್ಲೆಯ ರೈತರ ಜಮೀನುಗಳಿಗೆ ರಸ್ತೆ ಸಂಪರ್ಕ ಕಲ್ಪಿಸಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಪಟ್ಟಣದ ಅಹೋರಾತ್ರಿ ಧರಣಿ ಸತ್ಯಾಗ್ರಹ ಗುರುವಾರ 4ನೇ ದಿನಕ್ಕೆ ಕಾಲಿಟ್ಟಿದೆ.

Advertisement

ಈ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಎಲ್ಲಾ ರೈತರು ಕಪ್ಪು ಬಟ್ಟೆ ಧರಿಸಿ ಅರಬೆತ್ತಲೆ ಧರಣಿ ಸತ್ಯಾಗ್ರಹ ನಡೆಸಿದರು. ನಂತರ ಅಹೋರಾತ್ರಿ ಧರಣಿ ಸ್ಥಳಕ್ಕೆ ಮನಗೂಳಿ ಪಟ್ಟಣದ ಹಿರೇಮಠದ ಸಂಗನಬಸವ ಶ್ರೀಗಳು ಭೇಟಿ ನೀಡಿ, ರೈತರು ನಡೆಸುತ್ತಿರುವ ಸತ್ಯಾಗ್ರಹ ನ್ಯಾಯ ಸಮ್ಮತವಾಗಿದೆ. ರೈತರ ಬೇಡಿಕೆಯನ್ನು ರಾಜ್ಯ ಸರಕಾರ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರ ಸಚಿವ ಎಂ.ಸಿ ಮನಗೂಳಿ ಅವರು ತಕ್ಷಣ ಸರಕಾರದೊಂದಿಗೆ ಚರ್ಚಿಸಿ ರೈತರ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು. 

ತಾಲೂಕು ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದರು. ಈ ವೇಳೆ ಜಿಲ್ಲಾ ಮುಖಂಡ ಆಶೋಕ ಹಾರಿವಾಳ ಮಾತನಾಡಿ, ಬಸವನಬಾಗೇವಾಡಿ ಪಟ್ಟಣದಲ್ಲಿ ಕಂದಾಯ ಇಲಾಖೆಯ ಉಪವಿಭಾಗ ಕಚೇರಿ ಸ್ಥಾಪಿಸಬೇಕು. ಜಿಲ್ಲೆಯ ರೈತರ ಜಮೀನುಗಳಿಗೆ ರಸ್ತೆ ಸಂಪರ್ಕ ಕಲ್ಪಿಸಬೇಕೆಂದು ಹೋರಾಟ ಮಾಡುತ್ತಾ ಬಂದರೂ ಕೂಡಾ ಸರಕಾರ ಮತ್ತು ಈ ಭಾಗದ ಜನಪ್ರತಿನಿಧಿಗಳು ಸ್ಪಂದನೆ ಮಾಡದಿರುವುದು ನೋವಿನ ಸಂಗತಿಯಾಗಿದೆ. 

ತಕ್ಷಣ ರಾಜ್ಯ ಸರಕಾರ ಮತ್ತು ಈ ಭಾಗದ ಇಬ್ಬರು ಸಚಿವರು ಸರಕಾರದ ಮೇಲೆ ಒತ್ತಡ ತಂದು ತಕ್ಷಣ ರೈತರ ಬೇಡಿಕೆ ಈಡೇರಿಸಬೇಕು. ಇಲ್ಲವಾದರೆ ಮುಂದೆ ಎಲ್ಲಾ ಸಂಘಟನೆಗಳು ಸೇರಿ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಮುಂದಾಗುವ
ಅನಾಹುತಗಳಿಗೆ ಸರಕಾರ ಮತ್ತು ಈ ಭಾಗದ ಜನಪ್ರತಿನಿಧಿ ಗಳೆ ಹೊಣೆಯಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಎರಡು ಸಮಸ್ಯೆಗಳು ಇತ್ಯರ್ಥವಾಗುವರೆಗೆ ನಾವು ನಮ್ಮ ಹೋರಾಟ ಕೈಬಿಡುವ ಮಾತೆಯಿಲ್ಲ. ಧರಣಿ ಸ್ಥಳಕ್ಕೆ ಶ್ರೀಗಳು ಹಾಗೂ ರಕ್ಷಣಾ ವೇದಿಕೆಯ ಸಂಘಟನೆಯವರು ಬೆಂಬಲ ಸೂಚಿಸಿದ್ದು, ನಮ್ಮ ಹೋರಾಟಕ್ಕೆ ಹೆಚ್ಚಿನ ಶಕ್ತಿ ಬಂದಂತಾಗಿದೆ ಎಂದು ಹೇಳಿದರು.

Advertisement

ಇಂದಿನ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ನಾಲ್ಕನೇ ದಿನದ ಧರಣಿಯಲ್ಲಿ ತಾಲೂಕಾಧ್ಯಕ್ಷ ಸಿದ್ದರಾಮ ಅಂಗಡಗೇರಿ, ತಾಲೂಕು ಕಾರ್ಯಧ್ಯಕ್ಷ ಸೋಮನಗೌಡ ಪಾಟೀಲ, ಶಿವಾನಂದ ಐಗಳಿ, ಸಿದ್ದಣ್ಣ ಕೊಟ್ರಶೇಟ್ಟಿ, ಶೆಟ್ಟೆಪ್ಪ ಲಮಾಣಿ, ಕೃಪ¡ಪ್ಪ ಬಮರೆಡ್ಡಿ, ಮಲ್ಲಪ್ಪ್ ಯರನಾಳ, ಮಲ್ಲಿರ್ಕಾಜುನ ಹಡಪದ, ಸುರೇಶ ಬಾಗೇವಾಡಿ, ಸೋಮಗೊಂಡಪ್ಪ ಹಡಗಲಿ, ಬಸಣ್ಣ ಹುಲಿಬೆಂಚಿ, ರಕ್ಷಣಾ ವೇದಿಕೆಯ ಅಬ್ಬು ಚೌಧರಿ, ಬೂತಾಳಿ ಪೂಜಾರಿ, ರಾಮು ಹಿರೇಕುರುಬರ, ಸಿದ್ದು ಮೇಟಿ, ಪ್ರಕಾಶ ಡೋಣುರ, ವಿಜಯಕುಮಾರ ಎಂಬತ್ತನಾಳ, ಚನ್ನಪ್ಪ ಮಾವಿನಗಿಡದ, ಸುರೇಶ ಸಜ್ಜನ, ಹೊನಕೇರೆಪ್ಪ ತೆಲಗಿ, ಕಲ್ಲಪ್ಪ ಕುಂಬಾರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next