Advertisement

ಶನಿವಾರ ಲಸಿಕೆ : ಮಾಹಿತಿ ನೀಡಿದ ಪ್ರಧಾನಿ ನರೇಂದ್ರ ಮೋದಿ 

11:39 PM Jan 09, 2021 | Team Udayavani |

ಹೊಸದಿಲ್ಲಿ/ಬೆಂಗಳೂರು: ಕೋವಿಡ್ ಗೆ  ಲಸಿಕೆ ನೀಡಲು ದಿನಾಂಕ ನಿಗದಿಯಾಗಿದೆ. ಮುಂಬರುವ ಶನಿವಾರ, ಜ. 16ರಿಂದ ದೇಶಾದ್ಯಂತ ಲಸಿಕೆ ವಿತರಣೆ ಆರಂಭವಾಗಲಿದೆ ಎಂದು ಪ್ರಧಾನಿ ಘೋಷಿಸಿದ್ದಾರೆ.

Advertisement

ಮೊದಲಿಗೆ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, ವೈದ್ಯರು, ಸಫಾಯಿ ಕರ್ಮಚಾರಿ ಗಳು ಲಸಿಕೆ ಪಡೆಯಲಿದ್ದಾರೆ ಎಂದು ಪ್ರಧಾನಿ ಟ್ವೀಟ್‌ ಮಾಡಿದ್ದಾರೆ.ಜ. 16 ದೇಶದ ಪಾಲಿಗೆ ಐತಿಹಾಸಿಕ ದಿನ, ಕೊರೊನಾ ಹೊಡೆದೋಡಿಸುವ ದಿನ ಎಂದಿದ್ದಾರೆ.

ಮೋದಿ ಸಭೆ :

ಲಸಿಕೆ ವಿತರಣೆಗಾಗಿ ಸಿದ್ಧತಾ ಕಾರ್ಯಗಳ ಬಗ್ಗೆ ಮೋದಿ ಸ್ವತಃ ಪರಿಶೀಲನೆ ನಡೆಸಿದ್ದಾರೆ. ಶನಿವಾರ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಸಂಪುಟ ಕಾರ್ಯದರ್ಶಿ, ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಕಾರ್ಯದರ್ಶಿ ಭಾಗಿಯಾಗಿದ್ದರು.

ನಾಳೆ ಸಿಎಂಗಳ ಜತೆ ಸಭೆ :

Advertisement

ಸೋಮವಾರ ಪ್ರಧಾನಿ ಮೋದಿ ಎಲ್ಲ ರಾಜ್ಯಗಳ ಸಿಎಂ ಗಳ ಜತೆ ಸಭೆ ನಡೆಸಿ ಯಾವುದೇ ಅಡೆತಡೆ ಇಲ್ಲದೆ ಲಸಿಕೆ ವಿತರಣೆ ನಡೆಸುವ ಕುರಿತಂತೆ ಚರ್ಚೆ ನಡೆಸಲಿದ್ದಾರೆ.

ರಾಜ್ಯದಲ್ಲಿ ಎರಡು ಕೇಂದ್ರ :

ರಾಜ್ಯದಲ್ಲಿ ಹುಬ್ಬಳ್ಳಿ ಮತ್ತು ಬೆಂಗಳೂರಿನ ತಲಾ ಒಂದು ಆಸ್ಪತ್ರೆಯನ್ನು ಕೋವಿಡ್  ಲಸಿಕೆ ವಿತರಣೆ ಉದ್ಘಾಟನೆಗಾಗಿ ಗುರುತಿಸಲಾಗಿದೆ ಎಂದು ಮೂಲಗಳು ಹೇಳಿವೆ. ಈ ಕೇಂದ್ರಗಳಲ್ಲಿ ಪ್ರಧಾನಿ ಆನ್‌ಲೈನ್‌ ಮೂಲಕ ಲಸಿಕೆ ವಿತರಣೆಗೆ ಚಾಲನೆ ನೀಡಲಿದ್ದಾರೆ.

ಜಗತ್ತಿನ  ಅತೀ ದೊಡ್ಡ  ಲಸಿಕೆ ವಿತರಣೆ :

ಎರಡು ಲಸಿಕೆಗಳ ಮೂಲಕ ಭಾರತ ಮಾನವೀಯತೆಯನ್ನು ಸಂರಕ್ಷಿಸಲು ಸಿದ್ಧವಾಗಿದೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ. 16ನೇ “ಪ್ರವಾಸಿ ಭಾರತೀಯ ದಿವಸ್‌’ ಸಮ್ಮೇಳನ ಉದ್ಘಾಟಿಸಿ, “ಇಂದು ಜಗತ್ತು ಭಾರತದ ಲಸಿಕೆಯನ್ನು ಮಾತ್ರವೇ ಬೆರಗಿನಿಂದ ನೋಡುತ್ತಿಲ್ಲ, ನಾವು ಹೇಗೆ ವಿಶ್ವದ ಅತೀ ದೊಡ್ಡ ಲಸಿಕೆ ಕಾರ್ಯಕ್ರಮ ನಡೆಸುತ್ತೇವೆ ಎಂಬುದನ್ನು ವೀಕ್ಷಿಸಲು ಕಾತರದಲ್ಲಿದೆ’ ಎಂದರು.

235 ಕೇಂದ್ರಗಳಲ್ಲಿ ಲಸಿಕೆ ವಿತರಣೆ :

ಸಭೆ ಬಳಿಕ ಮಾರ್ಗಸೂಚಿ :  ಪ್ರಧಾನಿ ಜತೆಗೆ ಸಿಎಂಗಳ ಸಭೆಯ ಬಳಿಕ ಲಸಿಕೆ ವಿತರಣೆಗೆ ಮಾರ್ಗಸೂಚಿ ಲಭ್ಯವಾಗಲಿದೆ.

ಸುರಕ್ಷಿತ : ಲಸಿಕೆ ಶೇಖರಣೆ, ಸರಬರಾಜಿಗೆ ಯಾವುದೇ ತೊಂದರೆ ಇಲ್ಲ. ಲಸಿಕೆ ಶತ ಪ್ರತಿಶತ  ಸುರಕ್ಷಿತವಾಗಿದ್ದು, ಆತಂಕವಿಲ್ಲದೆ ಪಡೆಯಬಹುದು. ವದಂತಿಗೆ ಕಿವಿಗೊಡು ವುದು ಬೇಡ ಎಂದು ಸುಧಾಕರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next