ಚಾಮರಾಜನಗರ: ಸುತ್ತೂರು ಜಾತ್ರಾ ಮಹೋತ್ಸವ ಜ.18 ರಿಂದ ಐದು ದಿನಗಳ ಕಾಲ ನಡೆಯಲಿದ್ದು, ಅಂಗವಾಗಿ 8 ಜಿಲ್ಲೆ ಹಾಗೂ ತಮಿಳುನಾಡಿನ ತಾಳವಾಡಿ ಭಾಗದಲ್ಲಿ ಸಂಚರಿಸುತ್ತಿರುವ ಸುತ್ತೂರು ಜಾತ್ರಾ ಪ್ರಚಾರ ರಥ ನಗರ ಪ್ರವೇಶ ಮಾಡಿದ್ದು, ಗಣ್ಯರು ಸ್ವಾಗತಿಸಿ, ಪೂಜೆ ಸಲ್ಲಿಸಿದರು.
ನಗರದ ಶ್ರೀ ಸಿದ್ದಮಲ್ಲೇಶ್ವರ ಮಠದ ಅವರಣಕ್ಕೆ ಆಗಮಿಸಿದ ಪ್ರಚಾರ ರಥಕ್ಕೆ ನಗರ ವಿರಕ್ತ ಮಠಾಧ್ಯಕ್ಷ ರಾದ ಶ್ರೀ ಚನ್ನಬಸವಸ್ವಾಮೀಜಿ, ಮರಿಯಾಲ ಮಠಾ ಧ್ಯಕ್ಷರಾದ ಶ್ರೀ ಇಮ್ಮಡಿ ಮುರುಘರಾಜೇಂದ್ರಸ್ವಾಮಿ ಅವರು ಪೂಜೆ ಸಲ್ಲಿಸಿದರು. ಬಳಿಕ ಗಣ್ಯರು ಶ್ರೀ ಶಿವರಾತ್ರಿಶ್ವರರ ಪುತ್ಥಳಿಗೆ ಪುಷ್ಪಾ ರ್ಚನೆ ಮಾಡಿದರು. ಮಂಗಳವಾಧ್ಯಗಳೊಂದಿಗೆ ಸುತ್ತೂರು ಪ್ರಚಾರ ರಥವು ಹರದನಹಳ್ಳಿ, ಅರಕಲವಾಡಿ, ತಾಳವಾಡಿ ಭಾಗಕ್ಕೆ ತೆರಳಿತು.
ಈ ಸಂದರ್ಭದಲ್ಲಿ ಮಾತನಾಡಿದ ಮರಿ ಯಾಲದ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ, ನಗರ ಮಠದ ಶ್ರೀ ಚನ್ನಬಸವಸ್ವಾಮೀಜಿ, ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಸುತ್ತೂರು ಶ್ರೀಕ್ಷೇತ್ರದಲ್ಲಿ ಜಾತ್ರೆ ಮಹೋತ್ಸವ ನಡೆದಿರಲಿಲ್ಲ. ಎರಡು ವರ್ಷಗಳ ಬಳಿಕ ಬಹಳ ಅದ್ದೂರಿಯಾಗಿ 5 ದಿನಗಳ ಕಾಲ ಸುತ್ತೂರಿನಲ್ಲಿ ಜಾತ್ರಾ ಮಹೋತ್ಸವ ನಡೆ ಯು ತ್ತಿದ್ದು, ಭಕ್ತರು ಹಾಗು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀಗಳ ಕೃಪೆಗೆ ಪಾತ್ರರಾಗಬೇಕು ಎಂದರು.
ಪ್ರಚಾರ ಸಮಿತಿಯ ಸಂಚಾಲಕ ಷಡಕ್ಷರಿ, ಕಾಡಾ ಅಧ್ಯಕ್ಷ ನಿಜಗುಣರಾಜು, ಕೆಆರ್ ಡಿಐಎಲ್ ಅಧ್ಯಕ್ಷ ರುದ್ರೇಶ್, ಜೆಎಸ್‌ಎಸ್ ಸಾರ್ವ ಜನಿಕ ಸಂಪರ್ಕಾಧಿಕಾರಿ ಆರ್.ಎಂ. ಸ್ವಾಮಿ, ಜಿ.ಪಂ. ಮಾಜಿ ಅಧ್ಯಕ್ಷೆ ನಾಗಶ್ರೀಪ್ರತಾಪ್, ಎ.ಜಿ. ಶಿವಕುಮಾರ್, ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ, ಸಾಹಿತ್ಯ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಬಿ.ಕೆ. ರವಿಕುಮಾರ್, ವೀರಶೈವ ಮಹಾಸಭಾದ ಅಧ್ಯಕ್ಷ ಮೂಡ್ಲುಪುರ ನಂದೀಶ್, ತಾಲೂಕು ಅಧ್ಯಕ್ಷ ಹೊಸೂರು ನಟೇಶ್, ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಯೋಗ ಪ್ರಕಾಶ್, ರತ್ನಮ್ಮ ಬಸವರಾಜು, ಜೆಎಸ್‌ಎಸ್ ಕಾಲೇಜಿನ ಪ್ರಾಂಶುಪಾಲರಾದ ಸಿದ್ದರಾಜು, ದೇವರಾಜ ಮೂರ್ತಿ, ಎಚ್.ಎಂ. ಉಮೇಶ್, ತಾ.ಪಂ. ಮಾಜಿ ಉಪಾಧ್ಯಕ್ಷ ದಯಾನಿಧಿ, ಬಿರ್ಲಾ ನಾಗರಾಜು, ಗೌಡಿಕೆ ನಾಗೇಶ್, ಹೊಸೂರು ಬಸವರಾಜು, ಕಿಲಗೆರೆ ಬಸವರಾಜು, ಎಚ್. ಬಿ. ಶಮಿತ್, ಪುರುಷೋತ್ತಮ್, ಮಲ್ಲಿ ಕಾ ರ್ಜು ನಪ್ಪ, ರೋಟರಿ ಅಧ್ಯಕ್ಷ ಕೆ.ಎಂ. ಮಹ ದೇವಸ್ವಾಮಿ, ಕೋಟಂಬಳ್ಳಿ ವೀರಭದ್ರಪ್ಪ ಇದ್ದರು.