Advertisement
ನಗರದ ಕೊಡಿಯಾಲಬೈಲ್ ಶಾರದಾ ವಿದ್ಯಾಲಯದ ರಜತ ಮಹೋತ್ಸವ ಸಮಾರಂಭವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ಶಿಕ್ಷಣವೆಂಬುದು ಉದಾತ್ತ ಮೌಲ್ಯಗಳ ನೆಲೆಗಟ್ಟಿನ ಮೇಲೆ ಬೆಳೆದು ಬಂದಿದೆ. ಶಾಂತಿ, ಅಹಿಂಸೆ, ಸಹನೆ, ಚಿಂತನಶೀಲತೆ, ವೈಚಾರಿಕತೆ, ವಿನಯಶೀಲತೆ, ಸತ್‌ವಿಚಾರ, ಸನ್ನಡತೆ ಮುಂತಾದ ಮೌಲ್ಯಗಳ ಆಧಾರಿತ ಶಿಕ್ಷಣ ಸಫಲತೆಯನ್ನು ತಂದುಕೊಡುತ್ತದೆ. ಆರ್‌ಎಸ್‌ಎಸ್ ಸರಸಂಘಚಾಲಕ ಗುರೂಜಿಯವರು ಶಿಕ್ಷಣದ ಸ್ವರೂಪದ ವಿಶ್ಲೇಷಣೆ ಮಾಡುತ್ತಾ ಈ ವಿಚಾರಗಳನ್ನು ಉಲ್ಲೇಖೀಸಿದ್ದಾರೆ. ಈ ಮೌಲ್ಯಗಳು ವಿದೇಶಿ ಶಿಕ್ಷಣ ವ್ಯವಸ್ಥೆಯಲ್ಲಿ ದುರ್ಲಭ. ಭಾರತೀಯ ಸಂಸ್ಕೃತಿ ಆಧಾರಿತ ಶಿಕ್ಷಣ ವ್ಯವಸ್ಥೆಯಲ್ಲಿ ಇಂತಹ ಮೌಲ್ಯಗಳು ಅಂತರ್ಗತವಾಗಿರುತ್ತವೆ ಎಂದರು.
Related Articles
Advertisement
ನಿಟ್ಟೆ ವಿವಿ ಕುಲಾಧಿಪತಿ ಎನ್. ವಿನಯ ಹೆಗ್ಡೆ ಮಾತನಾಡಿ, ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕ ವರ್ಗ ನಿರ್ವಹಿಸುವ ಪಾತ್ರ ಮಹತ್ತರವಾದುದು. ಈ ಬಗ್ಗೆಯೂ ವಿಶೇಷ ಗಮನ ನೀಡುವುದು ಅವಶ್ಯವಾದುದು ಎಂದರು.
ಸಚ್ಚಾರಿತ್ರ ನಿರ್ಮಾಣ: ಶ್ರೀ ವಿಶ್ವಪ್ರಸನ್ನತೀರ್ಥ ಅಶೀರ್ವಚನ ನೀಡಿದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಕ್ಷುಲ್ಲಕ ಕಾರಣಗಳಿಗೂ ಮಕ್ಕಳು ವಿದ್ಯಾರ್ಥಿದೆಸೆಯಲ್ಲಿ ಅತಿರೇಕದ ಕ್ರಮಗಳನ್ನು ಅನುಸರಿಸುತ್ತಿರುವುದು ಕಂಡುಬರುತ್ತಿದೆ. ಎಳೆಯ ಪ್ರಾಯದಲ್ಲೇ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಬದುಕು, ಭವಿಷ್ಯವನ್ನು ಹಾಳುಮಾಡುವುದರ ಜತೆಗೆ ಕುಟುಂಬ, ಸಮಾಜದ ನೆಮ್ಮದಿಯನ್ನು ಕೆಡಿಸುವ ಬಹಳಷ್ಟು ಘಟನೆಗಳನ್ನು ಕಾಣುತ್ತೇವೆ. ಇದಕ್ಕೆ ಮುಖ್ಯ ಕಾರಣ ಶಿಕ್ಷಣದ ಜತೆಗೆ ಸಂಸ್ಕೃತಿ, ಸಂಸ್ಕಾರದ ಜ್ಞಾನ ನೀಡದಿರುವುದು ಎಂದರು.
ನಳಿನ್ ಕುಮಾರ್ ಕಟೀಲು ಅತಿಥಿಯಾಗಿದ್ದರು. ಸಮ್ಮಾನ ಶಾರದಾ ವಿದ್ಯಾಸಂಸ್ಥೆಯ ಅಭಿವೃದ್ಧಿ ಮತ್ತು ಸಾಧನೆಗೆ ವಿಶೇಷವಾಗಿ ಶ್ರಮಿಸಿದ ಸಂಸ್ಥೆಯ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ಅವರನ್ನು ಪತ್ನಿ ಸುನಂದಾ ಪುರಾಣಿಕ್ ಸಹಿತ ಎಸ್‌ಕೆಡಿಬಿ ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು.
ಪ್ರಸ್ತಾವನೆಗೈದ ಪ್ರೊ| ಎಂ.ಬಿ. ಪುರಾಣಿಕ್ ಅವರು 1992ರಲ್ಲಿ ಕೊಡಿಯಾಲ್‌ಬೈಲ್ ಎಸ್‌ಕೆಡಿಬಿ ಆವರಣದೊಳಗೆ ದಿ|ಹರಿದಾಸ ಆಚಾರ್ಯ ಅವರ ಸ್ಥಾಪಕಾಧ್ಯಕ್ಷತೆಯಲ್ಲಿ ಶೈಕ್ಷಣಿಕ ಸೇವಾ ಕಾರ್ಯದ ಉದ್ದೇಶದೊಂದಿಗೆ ತುಳುನಾಡು ಎಜು ಕೇಶನಲ್ ಟ್ರಸ್ಟ್‌ನ ಆಶ್ರಯದಲ್ಲಿ ವಿದ್ಯಾಲಯವು ಸ್ಥಾಪನೆಯಾಯಿತು. ಇದೀಗ ಸಾರ್ಥಕ 25 ವರ್ಷಗಳ ಸಂಭ್ರಮದಲ್ಲಿದೆ. ಇದರ ಜತೆಗೆ ಶಾರದಾ ಪದವಿಪೂರ್ವ ಕಾಲೇಜು. ಶಾರದಾ ಪ್ರಥಮ ದರ್ಜೆ ಕಾಲೇಜು ಮುಂತಾದ ವಿದ್ಯಾಸಂಸ್ಥೆಗಳನ್ನು ಹೊಂದಿದೆ ಎಂದು ವಿವರಿಸಿದರು.
ಟ್ರಸ್ಟಿ ಎಸ್. ಪ್ರದೀಪಕುಮಾರ ಕಲ್ಕೂರ ಸ್ವಾಗತಿಸಿ ದರು. ಪ್ರೊ| ಲೀಲಾ ಉಪಾಧ್ಯಾಯ ಅಭಿನಂದನ ಭಾಷಣ ಮಾಡಿದರು. ಸಂಸ್ಥೆಯ ಉಪಾಧ್ಯಕ್ಷ ಕೆ. ಎಸ್. ಕಲ್ಲೂರಾಯ, ಕಾರ್ಯದರ್ಶಿ ಎಂ.ಎಸ್. ಶಾಸ್ತ್ರಿ, ಎಚ್. ಸೀತಾರಾಮ ಆಚಾರ್ಯ ಉಪಸ್ಥಿತರಿದ್ದರು. ಪ್ರಾಂಶುಪಾಲೆ ಸುನೀತಾ ವಿ.ಮಡಿ ವಂದಿಸಿದರು. ಶಾರದಾ ವಿದ್ಯಾಲಯದ ಉಪಪ್ರಾಂಶುಪಾಲ ದಯಾನಂದ ಕಟೀಲು ನಿರೂಪಿಸಿದರು.
ಅಚ್ಛಾ ದೇಖಾ ನಹೀ..ಅಚ್ಛಾ ಹೋನಾ ಹೈವ್ಯಸನ ಮತ್ತು ಫ್ಯಾಶನ್‌ನಿಂದ ಯುವಜನತೆ ಮುಕ್ತರಾಗಬೇಕು. ನಾವು ಬಾಹ್ಯ ಸೌಂದರ್ಯಕ್ಕೆ ಹೆಚ್ಚು ಒತ್ತು ನೀಡುವ ಬದಲು ವ್ಯಕ್ತಿತ್ವವನ್ನು ಸುಂದರಗೊಳಿಸಬೇಕು. ಅಚ್ಛಾ ದೇಖಾನಹೀ.. ಅಚ್ಛಾ ಹೋನಾ ಹೈ (ಸುಂದರವಾಗಿ ಕಾಣುವುದಲ್ಲ. ಒಳ್ಳೆಯ ವ್ಯಕ್ತಿಯಾಗಿ ಮೂಡಿ ಬರಬೇಕು) ಎಂದು ರಾಜ್ಯಪಾಲ ವಜೂಭಾವಾಲಾ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ವ್ಯಸನ ಹೇಗೆ ದುರಂತಗಳಿಗೆ ಕಾರಣವಾಗ ಬಹುದು ಎಂಬುದಕ್ಕೆ ಇತ್ತೀಚೆಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪೈಲಟ್ ಓರ್ವರು ಮದ್ಯಪಾನ ಸೇವನೆ ಮಾಡಿ ವಿಮಾನ ಓಡಿಸಲು ಮುಂದಾಗಿದ್ದ ಘಟನೆಯನ್ನು ವಿವರಿಸಿ ಆತನ ಕೃತ್ಯದಿಂದ ವಿಮಾನದಲ್ಲಿದ್ದ ನೂರಾರು ಪ್ರಯಾಣಿ ಕರು ಆಪಾಯದಲ್ಲಿ ಸಿಲುಕುವ ಪರಿಸ್ಥಿತಿ ಎದುರಾ ಗಿತ್ತು ಎಂದು ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.