Advertisement

ಬಾಸ್ಕೆಟ್‌ಬಾಲ್‌ ಪಟು ಸತ್ನಾಮ್‌ ವೃತ್ತಿಪರ ಕುಸ್ತಿಗೆ ಹಾಜರ್‌!

08:51 PM Sep 24, 2021 | Team Udayavani |

ನವದೆಹಲಿ: ಅಮೆರಿಕದ ವಿಶ್ವವಿಖ್ಯಾತ ಎನ್‌ಬಿಎ ಬಾಸ್ಕೆಟ್‌ಬಾಲ್‌ ಲೀಗ್‌ಗೆ ಆಯ್ಕೆಯಾಗಿ ಇತಿಹಾಸ ಸೃಷ್ಟಿಸಿದ್ದ ಭಾರತದ ಸತ್ನಾಮ್‌ ಸಿಂಗ್‌, ಈಗ ತಮ್ಮ ಕ್ರೀಡೆಯನ್ನೇ ಬದಲಿಸಿದ್ದಾರೆ!

Advertisement

ಸದ್ಯ ಅವರು ಉದ್ದೀಪನ ಸೇವನೆ ಹಿನ್ನೆಲೆಯಲ್ಲಿ ನಿಷೇಧದಲ್ಲಿದ್ದಾರೆ. ಈ ನಡುವೆ ವೃತ್ತಿಪರ ಕುಸ್ತಿಪಟುವಾಗಲು ಸಿದ್ಧಗೊಂಡಿದ್ದಾರೆ. 25 ವರ್ಷದ ಸತ್ನಾಮ್‌, ಅಟ್ಲಾಂಟದಲ್ಲಿರುವ ನೈಟ್‌ಮೇರ್‌ ಫ್ಯಾಕ್ಟರಿ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ಅವರಿನ್ನು ಆಲ್‌ ಎಲೀಟ್‌ ರೆಸ್ಲಿಂಗ್‌ ಕೂಟದಲ್ಲಿ ಪಾಲ್ಗೊಳ್ಳಲು ಅಭ್ಯಾಸ ನಡೆಸಲಿದ್ದಾರೆ. 7.3 ಅಡಿ ಎತ್ತರವಾಗಿರುವ ಸತ್ನಾಮ್‌ 2015ರಲ್ಲಿ ಡಲ್ಲಾಸ್‌ ಮ್ಯಾವೆರಿಕ್ಸ್‌ ತಂಡದ ಪರ ಆಡಲು ಸಹಿ ಹಾಕಿದ್ದರು. ಇದು ಎನ್‌ಬಿಎದಲ್ಲಿ ಪಾಲ್ಗೊಳ್ಳುವ ಪ್ರಮುಖ ಬಾಸ್ಕೆಟ್‌ಬಾಲ್‌ ತಂಡಗಳಲ್ಲೊಂದು. ಈಗ ಹೊಸ ದಾರಿಯಲ್ಲಿ ಸತ್ನಾಮ್‌ ಅದೃಷ್ಟದ ಹುಡುಕಾಟ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next