Advertisement

ಸನ್ಮಾನ್‌ದಲ್ಲಿ ಸಂತೃಪ್ತಿ ಭೋಜನ 

06:00 AM Aug 06, 2018 | Team Udayavani |

ಮಲೆನಾಡಿನ ಮಳೆ ಸುರೀತಾ ಇದೆ. ಮಧ್ಯಾಹ್ನದ ಹೊತ್ತು…ಹೋಯ್‌ ಊಟ ಆಯ್ತಾ ಮಾರ್ರೆà…ಇಲ್ವಾ ? ಬನ್ನಿ ಗೋಪಾಲಣ್ಣನ ಸನ್ಮಾನ್‌ ಮೆಸ್‌ಗೆ ಹೋಗಿ ಬಿಸಿಬಿಸಿ ಊಟ ಮಾಡಿ ಬರೋಣ…ಮೊದೆÉà ಹಸಿವು ಬೇರೆ…

Advertisement

ನೀವು ಶಿವಮೊಗ್ಗದ ತೀರ್ಥಹಳ್ಳಿಗೆ ಬಂದರೆ ಅಲ್ಲಿ ಸಿಗುವ ಪರಿಚಯದ ಜನ ನಿಮ್ಮನ್ನು ಹೀಗೆ ಕರೆದಾರು. ಹೌದು, ಪಟ್ಟಣದ ಹೃದಯ ಭಾಗದಲ್ಲಿರುವ ಸನ್ಮಾನ್‌ ಮೆಸ್‌, ಮಧ್ಯಾಹ್ನದ ಊಟಕ್ಕೆ ತನ್ನದೇ ಆದ ಹೆಸರು ಪಡೆದುಕೊಂಡಿದೆ. ಕಳೆದ 20 ವರ್ಷಗಳಿಂದ ಮಲೆನಾಡಿನಲ್ಲಿ  ಮನೆಮಾತಾದ ಭೋಜನದ ಮನೆ ಇದು. 

ಹೊಟ್ಟೆಯಲ್ಲಿ ಹಸಿವು ಎದ್ದರೆ, ಮನಸ್ಸು ಗೋಪಾಲಣ್ಣನ ಮೆಸ್‌ ಕಡೆ ತಿರುಗುತ್ತದೆ. ಪಟ್ಟಣದ ಗಾಂಧೀಚೌಕ, ಮಾರ್ಕೆಟ್‌ ರಸ್ತೆ ಸಮೀಪದ (ಶ್ರೀ ಮಾರಿಕಾಂಬಾ ದೇವಾಲಯದ ಹತ್ತಿರ) ಟಿಎಪಿಸಿಎಂಎಸ್‌ ರಸ್ತೆಯ ಆರಂಭದಲ್ಲಿ ಬಲಗಡೆ ಈ ಮೆಸ್‌ ಇದೆ.  ಪಕ್ಕಾ ಮಲೆನಾಡಿಗರ ಶೈಲಿಯ ಊಟ.  ಮಧ್ಯಾಹ್ನ 12.30 ರಿಂದ 3.00ರ ತನಕ ಸಂತೃಪ್ತ ಭೋಜನ ಸಿಗುತ್ತದೆ. 

ಇದೇನೂ ಅದ್ದೂರಿ ಹೋಟೆಲ್‌ ಅಲ್ಲ. ಮಧ್ಯಮವರ್ಗಕ್ಕೆ ಹೇಳಿ ಮಾಡಿಸಿದ ಮೆಸ್‌. ಮೂರು ಕೋಣೆಗಳುಳ್ಳ ಈ ಪುಟ್ಟ ಹೋಟೆಲ್‌ನಲ್ಲಿ ಏಕಕಾಲಕ್ಕೆ 20 ಜನ ಊಟ ಮಾಡಬಹುದು. ಸೋಮವಾರ ಸ್ವಲ್ಪ ಹೆಚ್ಚಿಗೆ ದಟ್ಟಣೆ ಇರುತ್ತದೆ. ಕಾರಣ, ಆವತ್ತು ಸಂತೆ. ಸಂತೆಗೆ ಬಂದವರು ಸಂತೃಪ್ತಿ ಭೋಜನಕ್ಕೆ ಇಲ್ಲಿಗೇ ಬರುತ್ತಾರೆ. 

ಮೆಸ್‌ ನೆಡೆಸಿಕೊಂಡು ಬರುತ್ತಿರುವ ಗೋಪಾಲ ಭಟ್ಟರು ಎಂದಿಗೂ ಗಲ್ಲಾಪೆಟ್ಟಿಗೆಯಲ್ಲಿ ಕುಳಿತು ಮಾಲೀಕರ ದರ್ಪ ತೋರಿದ್ದಿಲ್ಲ. ‘ಅವರಿಗೆ ಊಟ ಕೊಡಿ…ಇವರಿಗೆ ಸಾಂಬಾರು ಹಾಕಿ’ ಎಂದು ಕೂಗು ಹಾಕುವುದಿಲ್ಲ. ಇವರು ಮಾಲೀಕರೂ ಹೌದು, ಜೊತೆಗೆ ಕ್ಲೀನರ್‌ ಕೂಡ ಹೌದು. 

Advertisement

ಗೋಪಾಲ ಭಟ್ಟರ ನಾಗರತ್ನ ದಂಪತಿ ತಾವೇ ಅಡುಗೆ ಮನೆಯಲ್ಲಿ ಊಟ ತಯಾರಿಸಿ, ಎಲ್ಲಾ ಗ್ರಾಹಕರಿಗೂ ಊಟ ಬಡಿಸುತ್ತಾರೆ. ಗೋಪಾಲ ಭಟ್ಟರು ಹೇಳುವಂತೆ, ‘ತಮ್ಮ ಬದುಕನ್ನು ಕಳೆದ 20 ವರ್ಷಗಳಿಂದ ಈ ಭೋಜನಾಲಯದ ಆದಾಯದಲ್ಲಿಯೇ ಕಟ್ಟಿಕೊಂಡಿದ್ದೇವೆ. ಗುಣಮಟ್ಟದ ಊಟ ಹಾಗೂ ಗ್ರಾಹಕರಿಗೆ ತೃಪ್ತಿ ಕೊಟ್ಟ ನಮಗಿದೆ. ಹೆಮ್ಮೆ ಗ್ರಾಹಕರು ನೀಡಿದ ಬೆಂಬಲವೇ ನಮ್ಮ ನೆಮ್ಮದಿಯ ಜೀವನಕ್ಕೆ ಕಾರಣ’ ಎನ್ನುತ್ತಾರೆ.

‘ಕಳೆದ 17 ವರ್ಷಗಳಿಂದ ಈ ಮೆಸ್‌ನಲ್ಲಿ ಊಟ ಮಾಡುತ್ತಿದ್ದೇನೆ. ಶುದ್ಧತೆ ಮತ್ತು ಗುಣಮಟ್ಟದ ವಿಚಾರದಲ್ಲಿ ನಮ್ಮೂರಿನ ಸನ್ಮಾನ್‌ ಮೆಸ್‌ ಮನೆಮಾತಾಗಿರುವುದು ಹೆಮ್ಮೆಯ ವಿಚಾರ’ ಎಂದು  ಈ ಹೋಟೆಲ್‌ನ ಖಾಯಂ ಗ್ರಾಹಕ ಆಡಿಟರ್‌ ಚಕ್ಕೋಡಬೈಲು ನಾಗರಾಜ್‌ ಹೇಳುತ್ತಾರೆ. ಒಟ್ಟಾರೆ, ಮಲೆನಾಡಿನ ಭೋಜನ ಪ್ರಿಯರ ಪಾಲಿಗೆ ಸನ್ಮಾನ್‌ ಮೆಸ್‌ ಸಂತೃಪ್ತಿಯ ಊಟದೊಂದಿಗೆ ನೆಮ್ಮದಿ ತಂದಿದೆ. ಸನ್ಮಾನ್‌ ಮೆನು ಹೀಗಿದೆ- * ಪ್ಲೇಟ್‌ ಅನ್ನ, ಸಾಂಬಾರು, ತಿಳಿ ಸಾರು, ಒಂದು ಪಲ್ಯ, ಚಟ್ನಿ, ಸಂಡಿಗೆ ಮೆಣಸು, ಮೊಸರು, ಮಜ್ಜಿಗೆ, ಉಪ್ಪಿನಕಾು (ಹೆಚ್ಚುವರಿ ರೈಸ್‌ ಸೌಲಭ್ಯ).
ಊಟದ ಬೆಲೆ 50ರೂ. 

– ರಾಮಚಂದ್ರ ಕೊಪ್ಪಲು 

Advertisement

Udayavani is now on Telegram. Click here to join our channel and stay updated with the latest news.

Next