ಬಾಗಲಕೋಟೆ: ಎಂ.ಆರ್.ಎನ್ ಫೌಂಡೇಶನ್ ಬಡ ರೋಗಿಗಳ ಸೇವೆಯನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿರುವುದು ತಮಗೆ ತೃಪ್ತಿ ತಂದಿದೆ ಎಂದು ಎಂಎನ್‌ಆರ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ, ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಹೇಳಿದರು. ಕಳೆದ ನಾಲ್ಕು ವರ್ಷಗಳ ಅವ ಧಿಯಲ್ಲಿ ಫೌಂಡೇಶನ್ 1ಲಕ್ಷಕ್ಕೂ ಹೆಚ್ಚು ಜನರಿಗೆ ಉಚಿತ ಆರೋಗ್ಯ ಸೇವೆ ನೀಡಿರುವುದು ಹೆಮ್ಮೆಯ ಸಂಗತಿ. ಹೆಚ್ಚಿನ ಆರೈಕೆಗೆ ಇನ್ಸೂರೆನ್ಸ್ ಯೋಜನೆ ಅಳವಡಿಸಿರುವುದು ರೈತರಿಗೆ ವರದಾನವಾಗಿದೆ.
ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ತಪಾಸಣೆಗೊಳಗೊಂಡು, ಶಸ್ತ್ರ ಚಿಕಿತ್ಸೆ ಮಾಡಲೇಬೇಕಾದ ಎಲ್ಲ ರೋಗಿಗಳನ್ನು ಭೇಟಿ ಮಾಡಿ ಅವರ ಯೋಗಕ್ಷೇಮ ವಿಚಾರಿಸಿದರು. ಫೌಂಡೇಶನ್‌ದ ಸಿಬ್ಬಂದಿ ವರ್ಗದವರು ರೋಗಿಗಳ ಬಗ್ಗೆ ಸದಾ ಕಾಳಜಿ ವಹಿಸಬೇಕೆಂದು ಸಲಹೆ ಮಾಡಿದರು. ಫೌಂಡೇಶನ್ ನಿರ್ದೇಶಕ ಸಂಗಮೇಶ ನಿರಾಣಿ, ಎನ್.ವಿ. ಪಡಿಯಾರ, ಡಾ|ಶಿವಕುಮಾರ ವಿರಕ್ತಮಠ, ಐ.ಜಿ ನ್ಯಾಮಗೌಡ, ಬಸವರಾಜ್ ಮಹಾಲಿಂಗೇಶ್ವರಮಠ, ಮಲ್ಲಪ್ಪ ಇಂಗಳಗಿ, ಮಹಾಂತೇಶ ಭಾಗಿ, ವೆಂಕಟೇಶ ಜಂಬಗಿ ಮುಂತಾದವರಿದ್ದರು.
ಸಚಿವ ನಿರಾಣಿಗೆ ಸಕ್ಕರೆ ಉದ್ಯೋಗ ಗೌರವ ಪ್ರಶಸ್ತಿ
ಜಿಲ್ಲೆಯ ಹಿರಿಯ ಕೈಗಾರಿಕೋದ್ಯಮಿ ಹಾಗೂ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಅವರಿಗೆ ಈ ವರ್ಷದ ಪ್ರತಿಷ್ಠಿತ ದಕ್ಷಿಣ ಭಾರತ ಸಕ್ಕರೆ ಕೈಗಾರಿಕೆ ಮಹಾ ಸಂಸ್ಥೆಯ ಸಕ್ಕರೆಯ ಉದ್ಯೋಗ ಗೌರವ ಪುರಸ್ಕಾರ ಲಭಿಸಿದೆ.
ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಸಕ್ಕರೆ ಕಾರ್ಖಾನೆಗಳ ಅಭಿವೃದ್ಧಿ, ಪುನರಾರಂಭ ಮತ್ತು ಹೊಸ ಸಂಶೋಧನೆಗಳಿಗೆ ವಿಶೇಷ ಕೊಡುಗೆ ನೀಡಿದ ಹಿನ್ನೆಲೆಯಲ್ಲಿ ನಿರಾಣಿ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗಿದೆ. ಸಕ್ಕರೆ ಉದ್ಯಮ ಅಭಿವೃದ್ಧಿಗೆ ನಿರಾಣಿ ಅವರ ಕೊಡುಗೆ ಒಂದು ದಾಖಲೆ. ಅನೇಕ ಕಾರಣಗಳಿಂದ ರೋಗಗ್ರಸ್ಥವಾಗಿದ್ದ ಅನೇಕ ಸಕ್ಕರೆ ಕಾರ್ಖಾನೆಗಳನ್ನು ಅವರು ಪುನರಾರಂಭ ಮಾಡಿದ್ದು ಒಂದು ಮಹತ್ಸಾಧನೆಯಾಗಿದೆ. ಮಹಾರಾಷ್ಟ್ರ ಸರಕಾರ ಅವರ ಸೇವೆ ಪಡೆಯಲು ನಿರ್ಧರಿಸಿದೆ ಎಂದು ಮಹಾರಾಷ್ಟ್ರದ ಉದ್ಯಮಿ ಎಸ್.ಬಿ ಉದ್ಯಮಿ ಬಢ ಹೇಳಿದ್ದಾರೆ.