Advertisement
ಸುಬಲ ಎಂಬ ದುಷ್ಟನು ಕಾಶೀರಾಜ್ಯಕ್ಕೆ ದಂಡೆತ್ತಿ ಬಂದು ಅಲ್ಲಿಯ ಅರಸ ಇಂದ್ರದ್ಯುಮ್ನನನ್ನು ಸೋಲಿಸಿ ಸೆರೆಯಲ್ಲಿಡುತ್ತಾನೆ . ಆತನ ಮಗಳಾದ ಚಂದ್ರಮತಿಯನ್ನು ಅಟ್ಟಿಸಿಕೊಂಡು ಹೋದಾಗ , ಬೇಟೆಗೆ ಬಂದ ಹರಿಶ್ಚಂದ್ರನ ಪರಿಚಯವಾಗಿ, ಹರಿಶ್ಚಂದ್ರನು ಮದುವೆಯ ಪ್ರಸ್ತಾಪ ಇಡುತ್ತಾನೆ. ಚಂದ್ರಮತಿಯು ತಂದೆಯನ್ನು ಸೆರೆಯಿಂದ ಬಿಡಿಸಿ , ತಂದೆ ಒಪ್ಪಿದರೆ ವಿವಾಹವಾಗುತ್ತೇನೆ ಎನ್ನುತ್ತಾಳೆ . ಸುಬಲನನ್ನು ಕೊಂದು ಹರಿಶ್ಚಂದ್ರನು ಚಂದ್ರಮತಿಯನ್ನು ವರಿಸುತ್ತಾನೆ . ದಿಗ್ವಿಜಯಕ್ಕೆ ಹೋದ ಹರಿಶ್ಚಂದ್ರನುಸಪ್ತ ದ್ವೀಪ ಸಹಿತ ಸಮಸ್ತ ಭೂಮಂಡಲಕ್ಕೆ ಚಕ್ರವರ್ತಿಯಾಗುತ್ತಾನೆ. ಪುತ್ರ ಸಂತಾನಕ್ಕಾಗಿ ಯಜ್ಞ ಮಾಡಿದ ಹರಿಶ್ಚಂದ್ರನು ತನಗೆ ಪುತ್ರ ಸಂತಾನವಾದರೆ ಹುಟ್ಟುವ ಮಗನನ್ನೇ ವರುಣನಿಗೆ ಬಲಿ ಕೊಡುತ್ತೇನೆ ಎಂದು ಹರಕೆ ಹೇಳಿ ಪುತ್ರ ಸಂತಾನ ಪಡೆಯುತ್ತಾನೆ .ಏಕ ಮಾತ್ರ ಪುತ್ರನನ್ನು ಬಲಿ ಕೊಡಲು ಮನಸ್ಸಿಲ್ಲದ ಹರಿಶ್ಚಂದ್ರನು , ವರುಣನು ನೆನಪಿಸಿದಾಗಲೂ ಏನೇನೋ ನೆಪ ಹೇಳಿ ಮುಂದೂಡಿದಾಗ ವರುಣ ದೇವನ ಕೋಪದಿಂದ ಭೀಕರ ಜಲೋದರ ರೋಗದಿಂದ ಬಳಲುತ್ತಾನೆ .
Related Articles
ವಿಲೋಮನಾಗಿ ಸದಾಶಿವ ಕುಲಾಲರದ್ದು ಉತ್ತಮ ನಿರ್ವಹಣೆ . ವಿಶ್ವಾಮಿತ್ರನ ಸೃಷ್ಟಿ ಅನಾಮಿಕೆಯಾಗಿ
ರಕ್ಷಿತ್ ಪಡ್ರೆಯವರ ನಿರ್ವಹಣೆ ಶ್ರೇಷ್ಠ ಮಟ್ಟದಲ್ಲಿತ್ತು . ಹರಿಶ್ಚಂದ್ರನಲ್ಲಿ ನಾಟ್ಯ ಮಾಡುವ ಸನ್ನಿವೇಶದಲ್ಲಿ ಉತ್ತಮ ನಾಟ್ಯ ಪ್ರದರ್ಶಿಸಿದರು . ಕೊನೆಯ ಭಾಗದ ಹರಿಶ್ಚಂದ್ರನಾಗಿ ವಾಸುದೇವ ರಂಗಾ ಭಟ್ಟರ ಪ್ರಸ್ತುತಿ ಮೆಚ್ಚುಗೆಯಾಯಿತು. ಸತ್ಯಕ್ಕೇ ಬದ್ಧನಾಗಿ ಸರ್ವವನ್ನೂ ಕಳೆದುಕೊಂಡರೂ , ತಾನು ತೃಪ್ತಿ ಎಂಬುದನ್ನು ನಿರೂಪಿಸಿದರು. ಉತ್ತರಾರ್ಧದ ಚಂದ್ರಮತಿಯಾಗಿ ಹಿರಿಯ ಕಲಾವಿದ ಎಂ.ಕೆ.ರಮೇಶಾಚಾರ್ಯರು ಚೆನ್ನಾಗಿ ನಿರ್ವಹಿಸಿದರು . ರೋಹಿತಾಶ್ವನಾಗಿ ಅಕ್ಷಯ ಭಟ್ ರವರ ಪಾತ್ರವೂ ಇದಕ್ಕೆ ಪೂರಕವಾಯಿತು . ನಕ್ಷತ್ರಿಕನಾಗಿ ಸೀತಾರಾಮ ಕುಮಾರ್ ರವರು ನಕ್ಷತ್ರಿಕನ ಪೀಡೆ ಎಂದರೆ ಏನು ಎಂಬುದನ್ನು ಮನದಟ್ಟು ಮಾಡುವಲ್ಲಿ ಸಫಲರಾದರು . ಹರಿಶ್ಚಂದ್ರನು ಋಣಮುಕ್ತನಾಗುವ ಸಂದರ್ಭದಲ್ಲಿ ಸೀತಾರಾಮರು ಭಾವನಾತ್ಮಕವಾದ ಸಂಭಾಷಣೆಯ ಮೂಲಕ ಮನ ಗೆದ್ದರು . ವೀರಬಾಹುವಾಗಿ ಶಬರೀಶ ಮಾನ್ಯರು ಸಭೆಯಿಂದಲೇ ಪ್ರವೇಶ ಕೊಟ್ಟು ಮಿಂಚಿದರು. ದೇವೇಂದ್ರನಾಗಿ ಜಯಕೀರ್ತಿಗೆ ಅವಕಾಶ ಕಡಿಮೆಯಾದರೂ ಚೊಕ್ಕವಾಗಿ ನಿರ್ವಹಿಸಿದರು . ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆಯವರು ಸುಶ್ರಾವ್ಯವಾಗಿ ಹಾಡಿದ್ದಾರೆ . ಕೆಲವು ಕರುಣಾರಸಗಳ ಪದ್ಯಗಳಂತೂ, ಪ್ರೇಕ್ಷಕರನ್ನು ಪ್ರಸಂಗದಲ್ಲೇ ಕೊಂಡೊಯ್ಯಲು ಸಹಕಾರಿ ಆಯಿತು.
Advertisement
ಎರಡನೇ ಭಾಗವತರಾಗಿ ಹೊಸ ಸೇರ್ಪಡೆಯಾದ ಚಿನ್ಮಯ ಕಲ್ಲಡ್ಕರ ಪ್ರಸ್ತುತಿ ಉತ್ತಮವಾಗಿತ್ತು . ಚೆಂಡೆ – ಮದ್ದಲೆ ವಾದನದಲ್ಲಿ ಪದ್ಯಾಣ ಶಂಕರನಾರಾಯಣ ಭಟ್ , ಪದ್ಯಾಣ ಜಯರಾಮ ಭಟ್ , ದೇಲಂತಮಜಲು ಸುಬ್ರಹ್ಮಣ್ಯ ಭಟ್ , ಚೈತನ್ಯಕೃಷ್ಣ ಪದ್ಯಾಣ ಹಾಗೂ ಶ್ರೀಧರ ವಿಟ್ಲ ,ಚಕ್ರತಾಳದಲ್ಲಿ ವಸಂತ ವಾಮದಪದವುರವರು ಹಿಮ್ಮೇಳ ವೈಭವಕ್ಕೆ ಕಾರಣರಾದರು .
ಎಂ.ಶಾಂತರಾಮ ಕುಡ್ವ