Advertisement
ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿಯಲ್ಲಿ ಮಾತನಾಡಿದ ಅವರು, ಈ ಇಬ್ಬರು ಮಹಾತ್ಮರ ವಿಚಾರಗಳನ್ನು ಎಲ್ಲರಿಗೂ ತಲುಪಿಸುವ ಕೆಲಸವಾಗಲಿ ಎಂದರು. ಮುಖ್ಯ ಭಾಷಣ ಮಾಡಿದ ಶಿಕ್ಷಕ ನಾಗರಾಜ ಶರ್ಮನ್, ಬಾಲ್ಯದಲ್ಲಿ ಗಾಂಧಿ ಸಾಧಾರಣ ಬುದ್ಧಿ ಮತ್ತೆಯ ಬಾಲನಾಗಿದ್ದರು. ಆಭರಣ ಕದಿಯುವ ಸನ್ನಿವೇಶವೂ ಅವರ ಜೀವನದಲ್ಲಿ ನಡೆದು ಹೋಗಿತ್ತು.
Related Articles
Advertisement
ಸರ್ವಕಾಲಕ್ಕೂ ಅವರು ಭಾರತದ ನಿಜ ಪ್ರತಿನಿಧಿ, ಬ್ರಾಂಡ್ ಅಂಬಾಸಿಡರ್ ಎಂದು ಬಣ್ಣಿಸಿದರು. ಈ ವೇಳೆ ಜಿ.ಪಿ.ರವಿಕುಮಾರ್, ಇರ್ಫಾನ್, ಮಾರ್ಟಿನಾಡೀನಾ ಇವರು ಭಗವದ್ಗೀತೆ, ಕುರಾನ್ ಮತ್ತು ಬೈಬಲ್ ವಾಚಿಸಿದರು. ಪುರಸಭಾ ಉಪಾಧ್ಯಕ್ಷೆ ದೀಪಿಕ ಅಶ್ವಿನ್, ತಹಶೀಲ್ದಾರ್ ಸಿ.ಜಿ.ರವಿಶಂಕರ್, ಇಒ ಜಿ.ಶ್ರೀಕಂಠರಾಜೇಅರಸ್, ಮುಖ್ಯಾಧಿಕಾರಿ ಹೇಮಂತ್ ರಾಜ್, ಪುರಸಭೆ ಸದಸ್ಯರಾದ ಜಿ.ಎಸ್.ಮಧು ಸೂದನ್, ಸಾಜೀದ ಬೇಗಂ, ನಿರ್ಮಲ, ನಾಗೇಶ್, ಶ್ರೀನಿವಾಸನಾಯಕ(ಕಣ್ಣಪ್ಪ), ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎನ್.ಮಲ್ಲೇಶ್, ಬಿಇಒ ಶಿವಮೂರ್ತಿ, ಸಿಪಿಐ ಲಕ್ಷ್ಮೀಕಾಂತ್, ಪಿಐ ಎಸ್.ಮಹದೇವಸ್ವಾಮಿ ಇತರರಿದ್ದರು.
ವಾರಕ್ಕೊಮ್ಮೆ ಉಪವಾಸಕ್ಕೆ ಶಾಸ್ತ್ರೀ ಕರೆ..
ಅಮೆರಿಕದಿಂದ ಬರುವ ಗೋಧಿಗೆ ಕಾಯಬೇಕಾದ ಪರಿಸ್ಥಿತಿಯಲ್ಲಿದ್ದ ಕಾರಣಕ್ಕೆ ಸ್ವತಃ ಉಪವಾಸ ವ್ರತ ಆಚರಿಸುವ ಮೂಲಕ ವಾರಕ್ಕೊಂದು ದಿನ ಉಪವಾಸಕ್ಕೆ ಕರೆಕೊಟ್ಟವರು ಲಾಲ್ ಬಹದ್ದೂರ್ ಶಾಸ್ತ್ರೀ, ದೇಶಕ್ಕೆ ಯೋಧ ಮತ್ತು ರೈತ ಏಕೆ ಅಗತ್ಯ ಎಂಬುದನ್ನು ತಿಳಿದಿದ್ದ ಅವರು ಜೈ ಜವಾನ್-ಜೈ ಕಿಸಾನ್ ಎಂಬ ಸಂದೇಶ ಸಾರಿದವರು.
ರೈಲು ಅಪಘಾತವಾದ ಕಾರಣಕ್ಕೆ ಸಚಿವರಾಗಿದ್ದ ಅವರು ನೈತಿಕತೆ ಹೊತ್ತು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದವರಲ್ಲಿ ಇವರೇ ಮೊದಲಿಗರು. ಹಳ್ಳಿಗಳ ಉದ್ಧಾರದ ಕನಸು ಕಂಡಿದ್ದ ಅವರು ಕ್ಷೀರ ಕ್ರಾಂತಿಗೆ ನಾಂದಿಯಾಡಿದ ಪ್ರಧಾನಿ ಎಂಬ ಹೆಗ್ಗಳಿಕೆ ಪಡೆದವರು ಎಂದು ಶಿಕ್ಷಕ ನಾಗರಾಜ ಶರ್ಮನ್ ಸ್ಮರಿಸಿದರು.