ಪುಂಜಾಲಕಟ್ಟೆ : ಉಳಿ ಗ್ರಾಮದ ಕಕ್ಯಪದವಿನ ಮೈರ ಬರ್ಕೆ ಜಾಲುನಲ್ಲಿ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ನಡೆಯುವ 5ನೇ ವರ್ಷದ ಹೊನಲು ಬೆಳಕಿನ ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳಕ್ಕೆ ಶನಿವಾರ ಚಾಲನೆ ದೊರಕಿತು.
ರಾ.ಸ್ವ.ಸೇ. ಸಂಘದ ಪ್ರಮುಖ ಡಾ| ಪ್ರಭಾಕರ ಭಟ್ ಕಲ್ಲಡ್ಕ ಅವರು ಕಂಬಳವನ್ನು ಉದ್ಘಾಟಿಸಿ, ತುಳುವರ ನಂಬಿಕೆಯ ಕಂಬಳ ಕ್ರೀಡೆ ನಮ್ಮ ಮಣ್ಣಿನ ಸಂಸ್ಕೃತಿಯಾಗಿದ್ದು, ಕೃಷಿಕರ ಜೀವನದ ಭಾಗವಾಗಿದೆ. ಕಂಬಳ ಈ ಮಣ್ಣಿನ ಶಕ್ತಿಯ, ಮಣ್ಣಿನ ಗುಣದ ಆರಾಧನಾ ಪದ್ಧತಿಯಾಗಿದೆ ಎಂದು ಹೇಳಿದರು.
ಪ್ರೀತಿಯಿಂದ ಆರೈಕೆ ಮಾಡಿ ಕೋಣಗಳ ಬೆನ್ನು ತಟ್ಟುವುದು ಹಿಂಸೆಯಾಗುವುದಿಲ್ಲ. ಕಂಬಳ ನಿಲ್ಲಿಸುವ ಬುದ್ಧಿಜೀವಿಗಳ ಹುನ್ನಾರದ ಸೋಲು ಈ ಮಣ್ಣಿಗೆ ಸಂದ ಜಯವಾಗಿದೆ. ಕಾನೂನಿನ ಚೌಕಟ್ಟಿನಲ್ಲಿ ಕಂಬಳವು ವಿಜೃಂಭಿಸಲಿ ಎಂದರು. ಸಭಾ ಕಾರ್ಯಕ್ರಮವನ್ನು ಉದ್ಯಮಿ ವಿಜಯ ರೈ ಆಲದಪದವು ಮತ್ತು ಪ್ರಗತಿಪರ ಕೃಷಿಕ ಸುರೇಶ್ ಶೆಟ್ಟಿ ಮಿಯಾರುಗುತ್ತು ಅವರು ಉದ್ಘಾಟಿಸಿದರು.
ಕಂಬಳ ಸಮಿತಿ ಅಧ್ಯಕ್ಷ, ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ ಅಧ್ಯಕ್ಷತೆ ವಹಿಸಿ ಮಾತನಾಡಿ, ತುಳು ಜಾನಪದ ಕ್ರೀಡೆ ಕಂಬಳದ ಉಳಿವಿಗೆ ಗ್ರಾಮೀಣ ಪ್ರದೇಶದಲ್ಲಿ ಕಂಬಳವನ್ನು ಸಂಘಟಿಸಿದ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ಯುವಕರು ಅಭಿನಂದಾರ್ಹರು ಎಂದರು.
ಪ್ರಗತಿಪರ ಕೃಷಿಕ ಶಿವರಾಮ ಶೆಟ್ಟಿ ನಡುಮೊಗರುಗುತ್ತು, ಕಂಬಳದ ಪ್ರಧಾನ ತೀರ್ಪುಗಾರ ಎಂ. ರಾಜೀವ ಶೆಟ್ಟಿ ಎಡ್ತೂರು, ರಾಘವೇಂದ್ರ ಭಟ್ ಕೊಡಂಬೆಟ್ಟು, ಉಳಿ ದಾಮೋದರ ನಾಯಕ್, ಬಾಬು ಗೌಡ ಪೆಂರ್ಗಾಲು, ಸ್ಥಳದಾನಿ ತುಕ್ರಪ್ಪ ಗೌಡ, ವಿಟ್ಠಲ ಭಂಡಾರಿ ಪುಣ್ಕೆದಡಿ, ಸುದೇಶ್ ಕುಮಾರ್ ಜೈನ್ ಬಂಗಾಡಿ, ಧರ್ಣಪ್ಪ ಪೂಜಾರಿ ಮೈರ, ಕೇಶವ ಪೂಜಾರಿ ಕುಕ್ಕಾಜೆ, ಉಳಿ ಗ್ರಾ.ಪಂ. ಸದಸ್ಯ ಚಿದಾನಂದ ರೈ, ಜಾನಪದ ಕಲಾವಿದ ವೆಂಕಪ್ಪ ಕುಂಟಾಲಪಲ್ಕೆ, ಸುಧಾಕರ ಶೆಟ್ಟಿ ಶಂಕರಬೆಟ್ಟು, ವಲೇರಿಯನ್ ಡೇಸಾ ಅಲ್ಲಿಪಾದೆ, ಪ್ರವೀಣ್ ಶೆಟ್ಟಿ ಕಿಂಜಾಲು, ಕುಸುಮಾಧರ ಉರ್ಕಿ, ಧರ್ಣಪ್ಪ ಪೂಜಾರಿ ಮೈರ, ಪ್ರಧಾನ ತೀರ್ಪುಗಾರ ನಿರಂಜನ ರೈ ಕೊಡಿಂಬಾಡಿ, ಕಾರ್ಯಾಧ್ಯಕ್ಷ ಲತೀಶ್ ಕುಕ್ಕಾಜೆ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ, ಕೋಶಾಧಿಕಾರಿ ಸುರೇಶ್ ಮೈರ, ಜಯ ಪೂಜಾರಿ ಕುಕ್ಕಾಜೆ, ಮಹಮ್ಮದ್ ಒಂಜಿಪಲ್ಲ, ಪ್ರದೀಪ್‌ಕುಮಾರ್ ಕಕ್ಯಪದವು, ಶಿವರಾಂ ಪೂಜಾರಿ, ಯೋಗೀಶ್ ಪೂಜಾರಿ ಕೋಡಿಯಡ್ಕ, ಚೇತನ್ ಊರ್ದೊಟ್ಟು, ಶಾಜು ಪಲ್ಲ, ಮೋನಪ್ಪ ಸಾಲ್ಯಾನ್ ಕಕ್ಯಪದವು, ಶ್ರೀ ರಾಮಾಂಜನೇಯ ಗೆಳೆಯರ ಬಳಗದ ಅಧ್ಯಕ್ಷ ಕೇಶವ ಫಿಟ್ಟರ್, ನ್ಯಾಯವಾದಿ ರಂಜಿತ್ ಮೈರ, ಉಮೇಶ್ ನೇರಳ್‌ಪಲ್ಕೆ, ಆನಂದ ಶೆಟ್ಟಿ ಮಿಯಾರು, ಪುರಂದರ ಕುಕ್ಕಾಜೆ ವೇದಿಕೆಯಲ್ಲಿದ್ದರು. ಶಿವಾನಂದ ಮೈರ ಸ್ವಾಗತಿಸಿ, ಪ್ರಕಾಶ್ ಕಜೆಕಾರು, ಪ್ರಶಾಂತ ಮೈರ ನಿರೂಪಿಸಿದರು.
ಮೆರವಣಿಗೆ
ಬೆಳಗ್ಗೆ ಶ್ರೀ ರಾಮಾಂಜನೇಯ ಭಜನ ಮಂದಿರದಿಂದ ಕಂಬಳದ ಕರೆಯವರೆಗೆ ಬ್ಯಾಂಡ್ ವಾದ್ಯ, ಕೊಂಬು ವಾಲಗ ಸಹಿತ ದ್ವಿಚಕ್ರ ವಾಹನಗಳ ಮೆರವಣಿಗೆಯಲ್ಲಿ ಓಟದ ಕೋಣಗಳನ್ನು ಕರೆತರಲಾಯಿತು.