Advertisement

ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸಿದಾಗ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ : ಸತೀಶ್‌ ಜಾರಕಿಹೊಳಿ

05:38 PM Nov 14, 2020 | sudhir |

ಉಡುಪಿ : ಕಾರ್ಯಕರ್ತರು ಪಕ್ಷದ ಮುಂದಿರುವ ಸಮಸ್ಯೆಗಳನ್ನು ಎದುರಿಸಿಕೊಂಡು ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದಾಗ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ತಿಳಿಸಿದರು.

Advertisement

ಬ್ರಹ್ಮಗಿರಿ ಕಾಂಗ್ರೆಸ್‌ ಭವನದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆ ಮತ್ತು ನೆಹರು ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕರ್ತರು ಮುಂಬರುವ ಗ್ರಾಪಂ, ಜಿಪಂ, ತಾಪಂ ಹಾಗೂ 2023ರ ವಿಧಾನಸಭಾ ಚುನಾವಣೆಯ ತಯಾರಿ ಈಗಲೇ ಪ್ರಾರಂಭಿಸಬೇಕು. ಪಕ್ಷ ಅಧಿಕಾರದ ಅವಧಿಯಲ್ಲಿ ಜಾರಿಗೆ ತಂದ ಜನಪರ ಯೋಜನೆಗಳ ಮಾಹಿತಿ ಜನರಿಗೆ ತಲುಪಿಸಬೇಕು ಎಂದರು.

ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಮಾತನಾಡಿ, ಕಾಂಗ್ರೆಸ್‌ ಸರಕಾರ ಸ್ಥಾಪಿಸಿದ ಮಂಗಳೂರು ವಿಮಾನ ನಿಲ್ದಾಣವನ್ನು ಗುಜರಾತ್‌ ಮಾದರಿ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದವರು ಅದಾನಿಯವರಿಗೆ ಒಪ್ಪಿಸಿದ್ದಾರೆ. ವಿಜಯ ಬ್ಯಾಂಕ್‌ ವಿಲೀನ ಮಾಡುವ ಮೂಲಕ ಅದರ ಹೆಸರನ್ನೇ ಕೊನೆಗೊಳಿಸುವ ಕೆಲಸ ಮಾಡಿದ್ದಾರೆ ಎಂದು ಟೀಕಿಸಿದರು.

ಇದನ್ನೂ ಓದಿ:ಇರಾನ್ ನಲ್ಲಿ ಇಸ್ರೇಲ್ ಗೂಢಚರರಿಂದ ಅಲ್ ಖೈದಾ ಮುಖ್ಯ ಕಮಾಂಡರ್ ಹತ್ಯೆ: ವರದಿ

ಗ್ರಾಪಂ ಚುನಾವಣೆ ಬಹಳಷ್ಟು ಮಹತ್ತರವಾಗಿರುವ ಚುನಾವಣೆ. ಇದು ಕಾರ್ಯಕರ್ತರ ಚುನಾವಣೆಯಾಗಿದೆ. ಕೊರೊನಾ ನಿರ್ವಹಣೆಯಲ್ಲಿ ಸರಕಾರದ ವೈಫ‌ಲ್ಯತೆಯನ್ನು ಜನರಿಗೆ ಅರ್ಥೈಸುವ ಕೆಲಸ ಮಾಡಬೇಕು. ಈಗಾಗಲೇ ಚುನಾವಣೆಗೆ ನಾವು ಸನ್ನದ್ಧರಾಗುವುದರೊಂದಿಗೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನವನ್ನು ಗೆಲ್ಲಬಹುದಾಗಿದೆ ಎಂದರು.

Advertisement

ಕೆಪಿಸಿಸಿ ಪ್ರ. ಕಾರ್ಯದರ್ಶಿ ಮೆಹರೋಸಾನ್‌, ಕಾರ್ಯದರ್ಶಿ ಸುನೀಲ್, ಜಿಲ್ಲಾಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಪಕ್ಷದ ಮುಖಂಡರಾದ ಗೋಪಾಲ ಪೂಜಾರಿ, ಪಿ.ವಿ. ಮೋಹನ್‌, ವಿಜಯ ಹೆಗ್ಡೆ, ಸೌರಭ್‌ ಬಲ್ಲಾಳ್‌, ರೋಶನಿ ಒಲಿವರ್‌, ಸತೀಶ್‌ ಪೂಜಾರಿ, ಚಂದ್ರಶೇಖರ್‌ ಶೆಟ್ಟಿ, ಉದ್ಯಾವರ ನಾಗೇಶ್‌ ಕುಮಾರ್‌, ನೀರೆ ಕೃಷ್ಣ ಶೆಟ್ಟಿ, ದಿನೇಶ್‌ ಪುತ್ರನ್‌, ಸುಧಾಕರ್‌ ಕೋಟ್ಯಾನ್‌, ರಮೇಶ್‌ ಶೆಟ್ಟಿ ಹಾವಂಜೆ, ಪ್ರಖ್ಯಾತ್‌ ಶೆಟ್ಟಿ, ಶಬ್ಬೀರ್‌ ಅಹ್ಮದ್‌, ಕಿಶನ್‌ ಹೆಗ್ಡೆ ಕೊಳ್ಕೆಬೈಲು, ಸುಧಾಕರ್‌ ಶೆಟ್ಟಿ ಮೈರ್ಮಾಡಿ, ನವೀನ್‌ಚಂದ್ರ ಶೆಟ್ಟಿ, ಕುಶಾಲ್‌ ಶೆಟ್ಟಿ, ಹರೀಶ್‌ ಕಿಣಿ, ನಿತ್ಯಾನಂದ ಶೆಟ್ಟಿ, ಕೀರ್ತಿ ಶೆಟ್ಟಿ, ಹಬೀಬ್‌ ಅಲಿ, ಪ್ರಶಾಂತ್‌ ಜತ್ತನ್‌°, ಬಾಲಕೃಷ್ಣ ಪೂಜಾರಿ, ಮಂಜುನಾಥ ಪೂಜಾರಿ, ಸದಾಶಿವ ದೇವಾಡಿಗ, ಶಂಕರ್‌ ಕುಂದರ್‌, ನವೀನ್‌ಚಂದ್ರ ಸುವರ್ಣ, ಸತೀಶ್‌ ಅಮೀನ್‌ ಪಡುಕೆರೆ, ದಿನಕರ್‌ ಹೇರೂರು, ಅಬ್ದುಲ್‌ ಅಜೀಜ್‌, ಗೀತಾ ವಾಗೆ, ಡಾ| ಸುನೀತಾ, ಯತೀಶ್‌ ಕರ್ಕೇರಾ, ವಿಜಯ ಪೂಜಾರಿ, ಶಶಿಧರ್‌ ಶೆಟ್ಟಿ, ಹರೀಶ್‌ ಶೆಟ್ಟಿ ಪಾಂಗಾಳ, ಹರೀಶ್ಚಂದ್ರ ಕೊಡವೂರು, ವೈ. ಗಂಗಾಧರ್‌ ಸುವರ್ಣ, ವಿಜಯ, ಉಪೇಂದ್ರ ಮೆಂಡನ್‌, ಉಪೇಂದ್ರ ಗಾಣಿಗ, ಲೂಯಿಸ್‌ ಲೋಬೋ, ಜಯಶೆಟ್ಟಿ, ಪ್ರಭಾಕರ್‌ ಆಚಾರ್ಯ, ಹಮದ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಜಿಲ್ಲಾ ಉಪಾಧ್ಯಕ್ಷ ರಾಜು ಪೂಜಾರಿ ಸ್ವಾಗತಿಸಿದರು. ಕೆ.ಅಣ್ಣಯ್ಯ ಶೇರಿಗಾರ್‌ ಕಾರ್ಯಕ್ರಮ ನಿರ್ವಹಿಸಿದರು. ಜ್ಯೋತಿ ಹೆಬ್ಟಾರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next