ಬೀದರ: ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಶನಿವಾರ ಅಣ್ಣಾಭಾವು ಸಾಠೆ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಲೋಕಮಂಚ್ ಟ್ರಸ್ಟ್ ವತಿಯಿಂದ ಅಣ್ಣಾಭಾವು ಸಾಠೆ ಜಯಂತಿ ಉತ್ಸವ ಆಚರಿಸಲಾಯಿತು.
ಸಾಹಿತಿ ಪ್ರೊ| ಮಯೂರ ಬಸವರಾಜ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದಲಿತ ಮತ್ತು ಕಡು ಬಡ ಕುಟುಂಬದಲ್ಲಿ ಜನಿಸಿದ್ದ ಸಾಠೆ ಅವರು ಹಲವಾರು ಕಾದಂಬರಿ, ಕಥೆಗಳು, ನಾಟಕಗಳು ಬರೆದಿದ್ದಾರೆ ಎಂದರು.
ಸಾಹಿತಿ ಸೂರ್ಯಕಾಂತ ಸಸಾನೆ ಮಾತನಾಡಿ, ಸಾಠೆ ಅವರ ಜೀವನ ಚರಿತ್ರೆ ಮೇಲೆ ಬೆಳಕು ಚೆಲ್ಲಿದರು. ಟ್ರಸ್ಟ್ ಅಧ್ಯಕ್ಷ ಎಂ.ಎಸ್. ಮನೋಹರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕ.ಕ. ಕಲಾವಿದರ ಒಕ್ಕೂಟ ಅಧ್ಯಕ್ಷ ವಿಜಯಕುಮಾರ ಸೊನಾರೆ, ಮಾದಿಕ ದಂಡೋರ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ಫರ್ನಾಂಡಿಸ್ ಹಿಪ್ಪಳಗಾಂವಕರ್, ದಸಂಸ ರಾಜ್ಯ ಸಂಘಟನಾ ಕಾರ್ಯದರ್ಶಿ ಮಾರುತಿ ಬೌದ್ದೆ ಮತ್ತು ಸಾಹಿತಿ ರಮೇಶ ಬಿರಾದಾರ ವೇದಿಕೆಯಲ್ಲಿದ್ದರು. ಟ್ರಸ್ಟ್ ಉಪಾಧ್ಯಕ್ಷ ಸುಮಂತ ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಹೇಶ ಗೋರನಾಳಕರ್ ಸ್ವಾಗತಿಸಿದರು. ಪ್ರವೀಣಚಂದ್ರ ಮೀರಾಗಂಜ್ ನಿರೂಪಿಸಿದರು. ಡಾ| ಮನೋಹರ ಮೇತ್ರೆ ವಂದಿಸಿದರು. ಸುಭಾಷ ರತ್ನ, ಮನೋಹರ, ರಾಘವೇಂಧ್ರ ಮುತ್ತಂಗಿ, ದಯಾನಂದ ಬಂಬುಳಗಿ, ದೇವಿದಾಸ ಜ್ಯೋತಿ, ಅರುಣ ಪಟೇಲ, ಸುಬ್ಬಣ್ಣ ಕರಕನಳ್ಳಿ, ವಿಲಾಸ ಲಾಧಾ, ಎಂ.ಪಿ. ಮುದಾಳೆ, ಜಗನ್ನಾಥ ಹೊಸಮನಿ, ಅನಿಲಕುಮರ ಹಲಗೆ, ಪ್ರೊ| ಶ್ರೀನಿವಾಸರೆಡ್ಡಿ, ಸಮೃತ್ ಸೂರ್ಯವಂಶಿ ಇನ್ನಿತರರಿದ್ದರು.