ಮಂಗಳೂರು : ನಿಷೇಧಿತ ಸ್ಯಾಟಲೈಟ್ ಫೋನ್ ಬಳಸಿ ಮತ್ತೆ ಮಾತುಕತೆ ನಡೆಸಿರುವ ಬಗ್ಗೆ ಗುಪ್ತಚರ ಇಲಾಖೆ ಕರ್ನಾಟಕ ಸರಕಾರಕ್ಕೆ ಎಚ್ಚರಿಕೆ ನೀಡಿದೆ.
ದಕ್ಷಿಣ ಕನ್ನಡ, ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ದಟ್ಟಾರಣ್ಯ ಪ್ರದೇಶಗಳಲ್ಲಿ ಸ್ಯಾಟಲೈಟ್ ಫೋನ್ ಬಳಕೆ ಮಾಡಿರುವ ಲೊಕೇಶನ್ ಪತ್ತೆಯಾಗಿದ್ದು, ಕಾಶ್ಮೀರದಲ್ಲಿ ಉಗ್ರರು ಸರಣಿ ಹತ್ಯಾಕಾಂಡಗಳನ್ನು ನಡೆಸಿದ ಬಳಿಕ ಹೆಚ್ಚು ಬಾರಿ ಬಳಸಲಾಗಿದೆ ಎಂಬ ಮಾಹಿತಿ ಗುಪ್ತಚರ ತನಿಖಾ ತಂಡ “ರಾ’ಗೆ ಲಭ್ಯವಾಗಿದೆ ಎಂದು ತಿಳಿದು ಬಂದಿದೆ.
ಸ್ಯಾಟಲೈಟ್ ಫೋನ್ ಬಳಕೆಯಾದ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಕರ್ನಾಟಕದ ಪೊಲೀಸರು ಜಾಗ್ರತವಾಗಿರುವಂತೆ ಸೂಚಿಸಲಾಗಿದೆ. ಭಯೋತ್ಪಾದಕ ಚಟುವಟಿಕೆ ಸಂಬಂಧಿಸಿ ಈ ರೀತಿ ಸ್ಯಾಟಲೈಟ್ ಫೋನ್‌ಗಳನ್ನು ಬಳಸುವ ಸಾಧ್ಯತೆ ಗಳಿರುತ್ತವೆ ಎಂದು ಹೇಳಲಾಗುತ್ತಿದ್ದು, ಗುಪ್ತಚರ ಇಲಾಖೆಗಳು ಈ ಬಗ್ಗೆ ವಿಶೇಷ ನಿಗಾ ವಹಿಸಿ ತನಿಖೆ ಆರಂಭಿಸಿವೆ ಎಂದು ಮೂಲಗಳು ತಿಳಿಸಿವೆ.
2020 ರ ಬಳಿಕ ಕರ್ನಾಟಕದಿಂದ ವಿದೇಶಕ್ಕೆ 476 ಸ್ಯಾಟಲೈಟ್ ಕರೆಗಳನ್ನು ಮಾಡಲಾಗಿದೆ ಎಂದು ಗ್ರಹ ಸಚಿವ ಆರಗ ಜ್ಞಾನೇಂದ್ರ ಅವರು ವಿಧಾನ ಸಭೆಯಲ್ಲಿ ಮಾಹಿತಿ ನೀಡಿದ್ದರು.
2008 ರ ಮುಂಬೈ ಉಗ್ರ ದಾಳಿಯ ಬಳಿಕ ಸ್ಯಾಟಲೈಟ್ ಫೋನ್ ಬಳಕೆಯನ್ನು ನಿಷೇಧಿಸಲಾಗಿತ್ತು.