Advertisement

ದೋಕ್ಲಾಂನಲ್ಲಿ ಮತ್ತೆ ಚೀನ ರಸ್ತೆ ತಂಟೆ

01:02 AM Nov 23, 2020 | mahesh |

ಹೊಸದಿಲ್ಲಿ: ಲಡಾಖ್‌ನಲ್ಲಿ ಸದ್ದಡಗಿ ಕುಳಿತ ಚೀನ ಈಗ ದೋಕ್ಲಾಂನಲ್ಲಿ ತಂಟೆ ಆರಂಭಿಸಿದೆ. ಭೂತಾನ್‌ ಭೂಪ್ರದೇಶಕ್ಕೆ ಹೊಂದಿಕೊಂಡಂತೆ ದೋಕ್ಲಾಂ ಸಮೀಪ ಪಿಎಲ್‌ಎ ರಸ್ತೆ ಕಾಮಗಾರಿ ನಡೆಸುತ್ತಿರುವ ಹೈರೆಸಲ್ಯೂ­ಶನ್‌ ಚಿತ್ರಗಳನ್ನು ಉಪಗ್ರಹಗಳು ಬಿಡುಗಡೆ ಮಾಡಿವೆ. ಈ ರಸ್ತೆ ಝೋಂಪೆಲ್ರಿ ರಿಡ್ಜ್ಗೆ ನೇರ ಸಂಪರ್ಕ ಕಲ್ಪಿಸುತ್ತವೆ. 2017ರಲ್ಲಿ ಝೋಂಪೆಲ್ರಿ ರಿಡ್ಜ್ ಪಾಯಿಂಟ್‌ನತ್ತ ಮುನ್ನುಗ್ಗುತ್ತಿದ್ದ ಚೀನ ಸೇನೆಯನ್ನು ಭಾರತೀಯ ಯೋಧರು ತಡೆದು ನಿಲ್ಲಿಸಿದ್ದರು. ಈಗ ಅದೇ ರಿಡ್ಜ್ ಪಾಯಿಂಟ್‌ಗೆ ಬದಲಿ ಮಾರ್ಗ ನಿರ್ಮಿಸುತ್ತಿರುವ ನೋಟಗಳು ಚಿತ್ರಗಳಲ್ಲಿ ಸ್ಪಷ್ಟವಾಗಿವೆ.

Advertisement

ಭಾರತ ಪಾಠ!: ಪೂರ್ವ ಲಡಾಖ್‌ನಲ್ಲಿ ಭಾರತ, ಚೀನದ ಯುದ್ಧತಂತ್ರಗಳನ್ನೇ ಬಳಸಿ ಪೀಪಲ್ಸ್‌ ಲಿಬರೇಶನ್‌ ಆರ್ಮಿಗೆ ಬುದ್ಧಿ ಕಲಿಸಿತ್ತು! ಹೌದು, “ಸುರಂಗ ರಕ್ಷಣ ತಂತ್ರ’ ಚೀನ ಸೈನ್ಯದ ಪ್ರಮುಖ ಯುದ್ಧ ರಣತಂತ್ರ. 2ನೇ ಸಿನೋ- ಜಪಾನ್‌ ಯುದ್ಧ, 1960 ಕೊರಿಯನ್‌ ಯುದ್ಧಗಳಲ್ಲಿ ಪಿಎಲ್‌ಎ ಇದನ್ನು ಯಶಸ್ವಿಯಾಗಿ ಪ್ರಯೋಗಿಸಿತ್ತು. ಶತ್ರುಗಡಿಯ ಸಮೀಪದಲ್ಲೇ ಸುರಂಗ ಅಗೆದು, ಅಲ್ಲಿ ಸೇನೆ ಮತ್ತು ಕ್ಷಿಪಣಿ­ಗಳನ್ನು ನುಗ್ಗಿಸುವುದು ಈ ರಣತಂತ್ರದ ಪ್ರಮುಖ ವಿಧಾನ.

ಪ್ಯಾಂಗಾಂಗ್‌ನ ದಕ್ಷಿಣ ದಂಡೆಯಲ್ಲಿ ಚೀನ ಅತಿಕ್ರಮಣಕ್ಕೆ ಮುಂದಾಗಿದ್ದಾಗ, ಭಾರತ ತನ್ನ ಹೆಚ್ಚುವರಿ ಸುರಕ್ಷತೆಗಾಗಿ ಇದೇ ತಂತ್ರವನ್ನೇ ಬಳಸಿತ್ತು. “ಬೃಹತ್‌ ಗಾತ್ರದ ಹ್ಯೂಮ್‌ ಬಲವರ್ಧಿತ ಕಾಂಕ್ರೀಟ್‌ ಪೈಪುಗಳನ್ನು ಭಾರತೀಯ ಸೇನೆ ಅಳವಡಿಸಿತ್ತು. 6ರಿಂದ 8 ಅಡಿ ಗಾತ್ರದ ಪೈಪುಗಳ ಮೂಲಕ ತುಕಡಿಗಳನ್ನು ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ಸುಲಭವಾಗಿ ಸಾಗಿಸಬಹು­ದಿತ್ತು. ಪರಿಸ್ಥಿತಿ ಹದಗೆಟ್ಟರೆ, ಈ ಕಣಿವೆ ಬಳಸಿಕೊಳ್ಳಲು ಸೇನೆ ಸಜ್ಜಾಗಿತ್ತು’ ಎಂದು ಹಿರಿಯ ಕಮಾಂಡರ್‌ ಒಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next