Advertisement

ಡ್ರೋನ್‌ ನಿಯಂತ್ರಣಕ್ಕೆ ಜಿಸ್ಯಾಟ್‌ 7ಎ

06:00 AM Sep 23, 2018 | |

ನವದೆಹಲಿ: ಡ್ರೋನ್‌ಗಳನ್ನು ನಿಯಂತ್ರಿಸುವ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯನ್ನು ನಿರೀಕ್ಷಿಸಲಾಗಿದ್ದು, ನವೆಂಬರ‌ಲ್ಲಿ ಇಸ್ರೋ ಉಡಾವಣೆ ಮಾಡಲಿರುವ ಜಿಸ್ಯಾಟ್‌ 7ಎ ಈ ನಿಟ್ಟಿನಲ್ಲಿ ಮಹತ್ವದ ಅಂಶವಾಗಿರಲಿದೆ. ಸದ್ಯ ಡ್ರೋನ್‌ಗಳನ್ನು ಆ್ಯಂಟೆನಾಗಳ ಮೂಲಕ ನಿಯಂತ್ರಿಸಲಾಗುತ್ತಿದ್ದು, ಜಿಸ್ಯಾಟ್‌ 7ಎ ನಭಕ್ಕೇರಿದ ನಂತರ ಡ್ರೋನ್‌ಗಳನ್ನು ಸ್ಯಾಟಲೈಟ್‌ನಿಂದಲೇ ನಿಯಂತ್ರಿಸಬಹುದಾಗಿದೆ. ಇದು ಭಾರತೀಯ ಸೇನೆಗೆ ಅತ್ಯಂತ ಅನುಕೂಲಕರವಾಗಿರಲಿದೆ. 700-800 ಕೋಟಿ ರೂ. ವೆಚ್ಚದಲ್ಲಿ ಈ ಸ್ಯಾಟಲೈಟ್‌ ಅಭಿವೃದ್ಧಿಪಡಿಸಲಾಗಿದೆ.

Advertisement

ಭಾರತವು ಅಮೆರಿಕದ ಪ್ರಿಡೇಟರ್‌ ಡ್ರೋನ್‌ಗಳನ್ನು ಖರೀದಿಸುವ ಮಾತುಕತೆಯಲ್ಲಿ ತೊಡಗಿದ್ದು, ಈ ಡ್ರೋನ್‌ಗಳು ಭಾರತಕ್ಕೆ ಲಭ್ಯವಾದ ನಂತರದಲ್ಲಿ ಇವುಗಳ ನಿಯಂತ್ರಣಕ್ಕೆ ಈ ವ್ಯವಸ್ಥೆ ನೆರವಾಗಲಿದೆ. ಪ್ರಿಡೇಟರ್‌ ಡ್ರೋನ್‌ಗಳನ್ನು ಅಫ್ಘಾನಿಸ್ತಾನ, ಪಾಕ್‌ ಗಡಿಯಲ್ಲಿ ತಾಲಿಬಾನ್‌ ಉಗ್ರರನ್ನು ಹೊಡೆದು ರುಳಿಸಲು ಅಮೆರಿಕ ಬಳಸಿತ್ತು. ಸದ್ಯ ಭಾರತವು ಹೆರಾನ್‌ ಮತ್ತು ಸರ್ಚರ್‌ ಡ್ರೋನ್‌ಗಳನ್ನು ಬಳಸುತ್ತಿದ್ದು, ಗ್ರೌಂಡ್‌ ಹಾಗೂ ಹಡಗು ಆಧರಿತ ಸ್ಟೇಷನ್‌ಗಳಿಂದ ನಿಯಂತ್ರಿಸಲಾಗುತ್ತಿದೆ. ಇದರಿಂದ ಡ್ರೋನ್‌ಗಳ ಹಾರಾಟ ಮಿತಿಯಲ್ಲಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next