Advertisement

Sasyashyamala Programme: ಸಸ್ಯಶ್ಯಾಮಲ ಅನುಷ್ಠಾನಕ್ಕೆ ಜಲಕ್ಷಾಮದ ಅಡ್ಡಿ

01:27 PM Sep 14, 2023 | Team Udayavani |

ಚಿಕ್ಕಬಳ್ಳಾಪುರ: ರಾಜ್ಯ ಶಾಲಾ ಶಿಕ್ಷಣ ಹಾಗೂ ಅರಣ್ಯ ಇಲಾಖೆ ಸಹ ಭಾಗಿತ್ವದಲ್ಲಿ ಸ್ಥಳಾವಕಾಶವುಳ್ಳ ಶಾಲೆಗಳ ಸುತ್ತಮುತ್ತ ಒಂದು ವರ್ಷದ ಅವಧಿಯಲ್ಲಿ ರಾಜ್ಯಾ ದ್ಯಂತ 50 ಲಕ್ಷ ಸಸಿಗಳನ್ನು ನೆಡುವ ಸಸ್ಯ ಶ್ಯಾಮಲ ಅನುಷ್ಠಾನಕ್ಕೆ ಆರಂಭದಲ್ಲಿ ಮಳೆ ಯ ಕಣ್ಣಾಮುಚ್ಚಾಲೆ ಅಡ್ಡಿಯಾಗಿದೆ.

Advertisement

ಹೌದು, ಶಾಲೆಯಂಗಳದಲ್ಲಿ ಸ್ಥಳಾವಕಾಶ ಇದ್ದರೆ ಸಸಿಗಳನ್ನು ನೆಡಲು ಅರಣ್ಯ ಇಲಾಖೆ ಯಿಂದಲೇ ಸಸ್ಯ ಶ್ಯಾಮಲ ಕಾರ್ಯಕ್ರಮದಡಿ ಶಾಲೆಗಳಿಗೆ ಉಚಿತವಾಗಿ ವಿತರಿ ಸುವ ಯೋಜನೆ ಇದಾಗಿದ್ದರೂ, ಸಸಿ ನೆಡಲು ಈಗ ಜಲಕ್ಷಾಮದ ಭೀತಿ ಎದುರಾಗಿದ್ದು, ಬಹುತೇಕ ಕಡೆಗಳಲ್ಲಿ ಸಸಿ ನಾಟಿಗೆ ಗುಂಡಿ ತಗೆಯುವುದು ಸವಾಲಿನ ಕೆಲಸವಾಗಿದೆ.

ಜಿಲ್ಲಾದ್ಯಂತ ಸತತ ಮೂರು ತಿಂಗಳಿಂದ ಮಳೆಯ ಕಣ್ಣಾಮಚ್ಚಾಲೆ ಮುಂದುವರೆದಿ ರುವ ಪರಿಣಾಮ ಈಗಾಗಲೇ ಜಿಲ್ಲೆಯಲ್ಲಿ ಬರ ದರ್ಶನ ತೀವ್ರವಾಗಿದ್ದು, ಜಿಲ್ಲೆಯ ಆರು ತಾಲೂಕುಗಳನ್ನು ಸರ್ಕಾರ ಬರದ ಪಟ್ಟಿಗೆ ಸೇರಿಸಿದ್ದು ಘೋಷಣೆಯಷ್ಟೇ ಬಾಕಿದೆ. ಆದರೆ ಸರ್ಕಾರ ಸಾರ್ವಜನಿಕ ಶಿಕ್ಷಣ ಇಲಾಖೆ ಮೂಲಕ ಶಾಲೆಗಳಲ್ಲಿ ಅನುಷ್ಠಾನಗೊಳಿಸುತ್ತಿರುವ ಸಸಿಗಳ ನಾಟಿ ಮಾಡುವ ಸಸ್ಯ ಶ್ಯಾಮಲ ಕಾರ್ಯಕ್ರಮಕ್ಕೆ ವರುಣನ ಅವಕೃಪೆ ಆರಂಭದಲ್ಲಿ ಕಾಣಿಸಿಕೊಳ್ಳುವ ಮೂಲಕ ಯೋಜನೆ ಅನುಷ್ಠಾನಕ್ಕೆ ತೀವ್ರ ಅಡ್ಡಿಯಾಗಿ ಪರಿಣಮಿಸಿದೆ.

ಮಹತ್ವಕಾಂಕ್ಷಿ ಯೋಜನೆ: ಶಾಲಾ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವುದರ ಜತೆಗೆ ಶಾಲಾ ಆವರಣದಲ್ಲಿ ಬಹುಪಯೋಗಿ ಸಸಿಗಳನ್ನು ಬೆಳೆಸುವ ನಿಟ್ಟಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜ್‌ಗಳಲ್ಲಿ ಈ ಯೋಜನೆ ಅನುಷ್ಠಾನ ಮಾರ್ಗಸೂಚಿ ಪ್ರಕಟಿಸಿ ಈಗಾಗಲೇ ಚಾಲನೆ ಕೊಟ್ಟಿದೆ. ಆದರೆ ಮಳೆ ಕೊರತೆಯಿಂದಾಗಿ ಯೋಜನೆ ಅನುಷ್ಠಾನಕ್ಕೆ ಅಡ್ಡಗಾಲಾಗಿ ಪರಿಣಮಿಸಿದೆ. ಯೋಜನೆ ಅನುಷ್ಠಾನಕ್ಕೆ ಸರ್ಕಾರ ಕೋಟ್ಯಾಂತರ ರೂ. ವೆಚ್ಚ ಮಾಡುತ್ತಿದೆ. ಸಸಿಗಳನ್ನು ನಾಟಿ ಮಾಡಲು ಗುಂಡಿ ಅಗೆಯಲು ಗ್ರಾಪಂ ಮಟ್ಟದ ಅರಣ್ಯ ಪಡೆ ಸಮಿತಿ ಸದಸ್ಯರನ್ನು ಬಳಸಿಕೊಳ್ಳುವಂತೆ ಸೂಚಿಸಿದೆ. ಸಸಿಗಳಿಗಾಗಿ ಸರ್ಕಾರ ಅರಣ್ಯ ಇಲಾಖೆಗೆ ಲಕ್ಷಾಂತರ ರೂ. ಹಣ ಪಾವತಿಸುತ್ತಿದೆ. ಆದರೆ ಇಷ್ಟೇಲ್ಲಾ ವೆಚ್ಚ ಮಾಡಿ ಶಾಲೆಗಳಲ್ಲಿ ಈಗ ನಾಟಿ ಮಾಡುವ ಸಸಿಗಳಿಗೆ ಬೇಕಾದ ಅಗತ್ಯ ನೀರಿನ ಕೊರತೆ ಎದುರಾಗಿದೆ. ಈಗಾ ಗಲೇ ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಶೌಚಾಲಯ ಬಳಕೆಗೆ ಸಮ ರ್ಪಕವಾಗಿ ನೀರು ಸಿಗುತ್ತಿಲ್ಲ. ಬಹುತೇಕ ಶಾಲೆಗಳ ಮಕ್ಕಳು ಇಂದಿಗೂ ಬಯಲು ಬಹಿ ರ್ದೆಸೆ ಹೋಗುತ್ತಿದ್ದಾರೆ.

ಇತಂಹ ಸಂದ ರ್ಭದಲ್ಲಿ ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿರುವುದರ ಜತೆಗೆ ಮಳೆಯ ಕೊರತೆ ಯಿಂದ ಜಿಲ್ಲೆಯಲ್ಲಿ ಸಸ್ಯ ಶ್ಯಾಮಲ ಯೋಜನೆ ಅನುಷ್ಠಾನ ಜಿಲ್ಲೆಯ ಶಿಕ್ಷಣ ಹಾಗೂ ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಲಿದೆ.

Advertisement

ಉಪ ನಿರ್ದೇಶಕರು ಹೇಳಿದ್ದೇನು?: ಸಸ್ಯಶ್ಯಾಮಲ ಕಾರ್ಯಕ್ರಮದಡಿ ಶಿಕ್ಷಣ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಪ್ರತಿ ಶಾಲೆಯಲ್ಲಿ ಗರಿಷ್ಠ 50 ಸಸಿಗಳನ್ನು ನಾಟಿ ಮಾಡಿ ಪೋಷಣೆ ಮಾಡಬೇಕೆಂದು ಸರ್ಕಾರ ಸೂಚಿಸಿದೆ. ಈಗಾಗಲೇ ಜಿಲ್ಲೆಯ ಶಾಲೆಗಳಿಗೆ ಅಗತ್ಯವಾದ ಸಸಿಗಳ ಬಗ್ಗೆ ಅರಣ್ಯ ಇಲಾಖೆಗೆ ವರದಿ ಸಲ್ಲಿಸಲಾಗಿದೆ. ಆದರೆ ನಮಗೆ ಸದ್ಯ ಮಳೆ ಕೊರತೆಯಿಂದ ಸಸಿಗಳಿಗೆ ಗುಂಡಿ ತಗೆಯಲು ಕಷ್ಟವಾಗುತ್ತಿದೆ. ಮಳೆ ಕಣ್ಣಾಮುಚ್ಚಾಲೆ ಇದೇ ಪರಿಸ್ಥಿತಿ ಮುಂದುವರೆದರೆ ನಾಟಿ ಮಾಡುವ ಸಸಿಗಳನ್ನು ನಾವು ಉಳಿಸಿಕೊಳ್ಳುವುದು ತುಂಬ ಕಷ್ಟವಾಗುತ್ತದೆ. ಆಗ ಅನಿರ್ವಾಯವಾಗಿ ಸಸಿಗಳಿಗೆ ಟ್ಯಾಂಕರ್‌ ಮೂಲಕ ನೀರುಣಿಸಬೇಕಾಗುತ್ತದೆಂದು ಜಿಲ್ಲಾ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪ ನಿರ್ದೇಶಕರಾದ ಬೈಲಾ ಅಂಜನಪ್ಪ ಉದಯವಾಣಿಗೆ ತಿಳಿಸಿದರು.

ಕಾಟಾಚಾರಕ್ಕೆ ಸಸಿ ನೆಟ್ಟರೆ ಏನು ಲಾಭ: ಸರ್ಕಾರ ಸಸ್ಯ ಶ್ಯಾಮಲ ಕಾರ್ಯಕ್ರಮ ಘೋಷಣೆ ಮಾಡಿರುವುದು ಒಳ್ಳೆಯದೆ. ಆದರೆ ಮೊದಲು ಸಸಿ ಬೆಳೆಸುವುದು ಮುಖ್ಯವಲ್ಲ. ಅದನ್ನು ಕಾಪಾಡಿಕೊಂಡು ಹೋಗುವುದು ಬಹಳ ಮುಖ್ಯ. ಇಡೀ ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ತೀವ್ರ ಬರಗಾಲ ಆವರಿಸಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಮೊದಲು ನೀರಿನ ಸೌಲಭ್ಯ ಕಲ್ಪಿಸಿ ಆ ಮೇಲೆ ಸಸಿ ನಾಟಿ ಮಾಡುವಂತೆ ಹೇಳಿದರೆ ಉತ್ತಮ. ಬರೀ ಕಾಟಾಚಾರಕ್ಕೆ ಸಸಿ ನೆಟ್ಟರೆ ಏನು ಲಾಭ ಎನ್ನುತ್ತಾರೆ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರಾದ ಪರಿಸರವಾದಿ ಗುಡಿಬಂಡೆಯ ಗುಂಪುಮರದ ಆನಂದ್‌.

– ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next