Advertisement

ಸಾಸ್ತಾನ: ಫೆ. 4ರ ವರೆಗೆ ಟೋಲ್‌ ಸಂಗ್ರಹವಿಲ್ಲ

03:45 AM Feb 03, 2017 | Team Udayavani |

ಕೋಟ: ಸಾಸ್ತಾನದ ಹೆದ್ದಾರಿ ಹಿತರಕ್ಷಣಾ ಸಮಿತಿ ಸದಸ್ಯರು ಹಾಗೂ ಹೋರಾಟಗಾರರು ಗುರುವಾರ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಭೇಟಿಯಾಗಿ ಟೋಲ್‌ ವಿರುದ್ಧದ ಹೋರಾಟಕ್ಕೆ ಸಹಕಾರ ನೀಡುವಂತೆ ಮನವಿ ಸಲ್ಲಿಸಿದರು.

Advertisement

ಹೋರಾಟಗಾರರ ಮನವಿ ಸ್ವೀಕರಿಸಿದ ಶಾಸಕರು, ಉಡುಪಿ ಜಿಲ್ಲಾಧಿಕಾರಿ ಜತೆ ಚರ್ಚೆ ನಡೆಸಿದರು ಹಾಗೂ ಸಾರ್ವಜನಿಕರ ಒಮ್ಮತವಿಲ್ಲದೆ ಶುಲ್ಕ ಸಂಗ್ರಹಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.

ಫೆ. 4ರಂದು ಹೋರಾಟಗಾರರು ಹಾಗೂ ಟೋಲ್‌ ಸಂಗ್ರಹಿಸುವ ಕಂಪೆನಿ ಜತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ಈ ಸಂದರ್ಭ ಜಿಲ್ಲಾಧಿಕಾರಿ ತಿಳಿಸಿದರು ಹಾಗೂ ಅಲ್ಲಿಯ ತನಕ ಶುಲ್ಕ ಸಂಗ್ರಹಕ್ಕೆ ಅವಕಾಶ ನೀಡುವುದಿಲ್ಲ ಎನ್ನುವ ಭರವಸೆ ನೀಡಿದರು ಎಂದು ಶಾಸಕರ ಬಳಿ ತೆರಳಿದ ನಿಯೋಗದಲ್ಲಿದ್ದ ಜಿ.ಪಂ. ಸದಸ್ಯ ರಾಘವೇಂದ್ರ ಕಾಂಚನ್‌ ಪತ್ರಿಕೆಗೆ ತಿಳಿಸಿದ್ದಾರೆ.

ಪಡುಬಿದ್ರಿ ಹಾಗೂ ತಲಪಾಡಿ ಟೋಲ್‌ಗೇಟ್‌ಗಳಲ್ಲಿ ಅನಿರ್ದಿಷ್ಟಾವಧಿಗೆ ಶುಲ್ಕ ಸಂಗ್ರಹ ತಡೆ ಹಿಡಿಯಲಾಗಿದೆ. ಪಡುಬಿದ್ರಿಯಲ್ಲಿ ಶುಕ್ರವಾರ ಸಮಾಲೋಚನೆ ಸಭೆ ನಡೆಯಲಿದೆ. ತಲಪಾಡಿ ಟೋಲ್‌ಗೇಟ್‌ನಲ್ಲಿ ಶುಲ್ಕ ಸಂಗ್ರಹ ಕುರಿತು ಇದುವರೆಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next