Advertisement

ಸಾಸ್ತಾನ ಟೋಲ್‌ ಸಂಗ್ರಹಿಸದಂತೆ ಸಾರ್ವಜನಿಕರಿಂದ ಎಚ್ಚರಿಕೆ

12:06 PM Feb 26, 2017 | Team Udayavani |

ಕೋಟ: ಸಾಸ್ತಾನ, ಗುಂಡ್ಮಿಯ ಟೋಲ್‌ ಕೇಂದ್ರದಲ್ಲಿ ಫೆ. 26ರಿಂದ ಸ್ಥಳೀಯರಿಂದ ಶುಲ್ಕ ಸಂಗ್ರಹಿಸಲು ಸಿದ್ಧತೆ ನಡೆಯುತ್ತಿದೆ ಎಂದು ಆರೋಪಿಸಿ ಸಾರ್ವಜನಿಕರು ಶನಿವಾರ ಸಂಜೆ ಟೋಲ್‌ ಕೇಂದ್ರದ ಬಳಿ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು ಹಾಗೂ ಶುಲ್ಕ ಸಂಗ್ರಹಿಸದಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

Advertisement

ಫೆ. 13ರಂದು ನಡೆದ ಜಿಲ್ಲಾ ಬಂದ್‌ ಸಂದರ್ಭ ಫೆ. 25ರ ತನಕ ಕೆ.ಎ. 20 ನೋಂದಣಿಯ ಸ್ಥಳೀಯ ವಾಣಿಜ್ಯ, ವಾಣಿಜ್ಯೇತರ ವಾಹನಗಳಿಗೆ ಉಚಿತ ಪ್ರವೇಶ ಹಾಗೂ ಫೆ. 25ರೊಳಗೆ ಜಿಲ್ಲಾಧಿಕಾರಿ, ಹೆದ್ದಾರಿ ಇಲಾಖೆಗೆ ಸಂಬಂಧಿಸಿದ ಕಮಿಷನರ್‌ ಜತೆ ಸಭೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಲಾಗಿತ್ತು.

ಕರಪತ್ರ ಹಂಚಿಕೆ 
ಉಡುಪಿ ಜಿಲ್ಲಾ ಬಂದ್‌ ಸಂದರ್ಭ ಜಿಲ್ಲಾಧಿಕಾರಿ ಫೆ. 25ರ ವರೆಗೆ ಟೋಲ್‌ ಸಂಗ್ರಹಿಸಬಾರದು ಎಂದು ನೀಡಿದ ಪತ್ರಿಕಾ ಹೇಳಿಕೆಯ ಪ್ರತಿಯನ್ನು ಟೋಲ್‌ನಲ್ಲಿ ವಾಹನ ಸವಾರರಿಗೆ ಹಂಚುತ್ತಿದ್ದು, ಜಿಲ್ಲಾಧಿಕಾರಿ ಫೆ. 25ರ ತನಕ ಮಾತ್ರ ಸ್ಥಳೀಯರಿಗೆ ಉಚಿತ ಪ್ರವೇಶ ನೀಡುವಂತೆ ತಿಳಿಸಿದ್ದಾರೆ. ಆದ್ದರಿಂದ ನಾಳೆಯಿಂದ ಶುಲ್ಕ ನೀಡಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.

ಟೋಲ್‌ ಸಂಗ್ರಹಿಸಿದರೆ ಉಗ್ರ ಪ್ರತಿಭಟನೆ 
ಹೆದ್ದಾರಿ ಇಲಾಖೆಗೆ ಸಂಬಂಧಿಸಿ ಕಮಿಷನರ್‌ ಸಭೆ ನಡೆಸಿ ಸ್ಪಷ್ಟ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದು, ಸಂಸದರು ಕೂಡ ಅಲ್ಲಿ ವರೆಗೆ ಟೋಲ್‌ ಸಂಗ್ರಹಿಸದಂತೆ ಸೂಚನೆ ನೀಡಿದ್ದಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಸ್ಥಳೀಯರಿಂದ ಶುಲ್ಕ ಸಂಗ್ರಹಿಸಬಾರದು. ಒಂದು ವೇಳೆ ಟೋಲ್‌ ಸಂಗ್ರಹಕ್ಕೆ ಮುಂದಾದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಹೋರಾಟಗಾರರು ಈ ಸಂದರ್ಭ ಎಚ್ಚರಿಕೆ ನೀಡಿದರು.

ಸ್ಥಳೀಯರಿಂದ ಸ್ವೀಕರಿಸದಿರುವ ಭರವಸೆ 
ಸ್ಥಳೀಯರಿಗೆ ಈ ಹಿಂದಿನಂತೆ ಶುಲ್ಕ ವಿನಾಯಿತಿ ನೀಡಲಾಗುವುದು ಎಂದು ಟೋಲ್‌ನ ಅಧಿಕಾರಿಗಳು ಹೋರಾಟಗಾರರಿಗೆ ಭರವಸೆ ನೀಡಿದರು. ರಾಷ್ಟ್ರೀಯ ಹೆದ್ದಾರಿ ಹಿತರಕ್ಷಣಾ ಸಮಿತಿಯ ಪ್ರತಾಪ್‌ ಶೆಟ್ಟಿ, ಅಲ್ವಿನ್‌ ಅಂದ್ರಾದೆ, ಗೋವಿಂದ ಪೂಜಾರಿ, ಮೋಸೆಸ್‌ ರೋಡಿಗ್ರಸ್‌, ಸಹದೇವ ಸಾಸ್ತಾನ, ನವೀನ್‌ ಬಾಂಜ್‌, ನಾಗರಾಜ್‌ ಗಾಣಿಗ, ಅಚ್ಯುತ್‌ ಪೂಜಾರಿ, ಪ್ರಶಾಂತ್‌ ಶೆಟ್ಟಿ, ವಿಟuಲ ಪೂಜಾರಿ, ರಾಘ ಬಾಳುRದ್ರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next