Advertisement

ಸಸಿಹಿತ್ಲು: ನದಿ ಪಾಲಾದ ಅಂಗಡಿ

01:46 AM Apr 12, 2019 | Team Udayavani |

ಸಸಿಹಿತ್ಲು: ಕೆಲವು ತಿಂಗಳಿ ನಿಂದ ಇಲ್ಲಿನ ಸಸಿಹಿತ್ಲು ಮುಂಡ ಪ್ರದೇಶದ ಬೀಚ್‌ನಲ್ಲಿ ಅಳಿವೆ ಪ್ರದೇಶ ದಲ್ಲಿ ತೀವ್ರ ನದಿ ಕೊರೆತ ಕಂಡು ಬಂದಿದ್ದು, ಈಗ ಪಂಚಾಯತ್‌ ನಿರ್ಮಿ ಸಿರುವ ಅಂಗಡಿ ಕೋಣೆಯೊಂದು ಸಂಪೂರ್ಣವಾಗಿ ನೆಲಸಮಗೊಂಡು ನದಿ ಪಾಲಾಗುವ ಹಂತಕ್ಕೆ ಬಂದಿದೆ.

Advertisement

ಹಳೆಯಂಗಡಿ ಗ್ರಾ.ಪಂ.ನ ಮುಂಡ ಬೀಚ್‌ ಅಂತಾರಾಷ್ಟ್ರೀಯವಾಗಿ ಸರ್ಫಿಂಗ್‌ ಮೂಲಕ ಬೆಳಕಿಗೆ ಬಂದ ಅನಂತರ ಪಂಚಾಯತ್‌ ಬೀಚ್‌ ಅಭಿವೃದ್ಧಿ ಸಮಿತಿ ಮೂಲಕ ಹಲವಾರು ಮೂಲ ಸೌಕರ್ಯ ಯೋಜನೆಗಳನ್ನು ಬೀಚ್‌ನಲ್ಲಿ ಅಳವಡಿಸಿತ್ತು. ಮೂರು ಅಂಗಡಿ ಕೋಣೆಗಳು ಇದರಲ್ಲಿ ಸೇರಿವೆ. ಇದರಿಂದ ಪ್ರವಾಸಿಗರಿಗೆ ಸಾಕಷ್ಟು ಅನುಕೂಲವೂ ಸಹ ಆಗಿದೆ.

ಶಾಂಭವಿ ಮತ್ತು ನಂದಿನಿ ಸಂಗಮದ ಪ್ರದೇಶವಾದ ಅಳಿವೆ ಪ್ರದೇಶದಲ್ಲಿ ಕಳೆದ ಕೆಲವು ತಿಂಗಳಿನಿಂದ ನದಿ ಕೊರೆತ ಪ್ರಾರಂಭವಾಗಿ ಬೃಹತ್‌ ಗಾಳಿ ಮರಗಳು, ಪಂಚಾಯತ್‌ ಅಳವಡಿಸಿದ್ದ ಬೆಂಚುಗಳು, ಪ್ರವಾಸಿಗರ ತಂಗುದಾಣ, ವಿದ್ಯುತ್‌ ಕಂಬಗಳು ನದಿಪಾಲಾಗಿವೆ. ಈಗ ಅಂಗಡಿ ಕೋಣೆಯೂ ನದಿ ಒಡಲು ಸೇರಿದೆ. ನಷ್ಟ 5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಇದೇ ರೀತಿ ಮುಂದುವರಿದಲ್ಲಿ ಇನ್ನುಳಿದ ಎರಡು ಅಂಗಡಿ ಕೋಣೆಗಳು, ಸಾರ್ವಜನಿಕ ಶೌಚಾಲಯ, ಬೀಚ್‌ನ ವಿಹಾರ ತಾಣ ಸಹಿತ ಸಂಪೂರ್ಣವಾಗಿ ನದಿ ಪಾಲಾಗುವುದು ನಿಶ್ಚಿತ ಎಂದು ಪಂಚಾಯತ್‌ ಆತಂಕ ವ್ಯಕ್ತಪಡಿಸಿದೆ.

ಡ್ರೆಜ್ಜಿಂಗ್‌ನಿಂದ ಸಮಸ್ಯೆ
ಬೀಚ್‌ನ ಪಕ್ಕದಲ್ಲಿ ನಿರ್ಮಾಣ ವಾಗಿರುವ ಜೆಟ್ಟಿಯ ಪಕ್ಕದಲ್ಲಿ ಬೃಹತ್‌ ಮಟ್ಟದಲ್ಲಿ ನಂದಿನಿ ನದಿಯಲ್ಲಿ ಡ್ರೆಜ್ಜಿಂಗ್‌ ನಡೆಸಿದ್ದು ಮತ್ತು ರಾಷ್ಟ್ರೀಯ ಹೆದ್ದಾರಿ ಪಾವಂಜೆಯಲ್ಲಿ ನಿರ್ಮಿಸಿದ ಸೇತುವೆ ಬಳಿ ಹೂಳೆತ್ತದೆ ಇರುವುದರಿಂದ ಶಾಂಭವಿ ನದಿಯ ನೀರು ವೇಗ ಪಡೆದರೆ, ನಂದಿನಿ ನದಿಯ ನೀರು ಹರಿವಿಗೆ ತಡೆ ಉಂಟಾಗಿರುವುದೇ ನದಿ ಕೊರೆತಕ್ಕೆ ಮೂಲ ಕಾರಣ ಎಂದು ಸ್ಥಳೀಯ ಮೀನುಗಾರರ ಅಭಿಪ್ರಾಯವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next