Advertisement

ಬಿಡುಗಡೆಯಾಯಿತು; ಶಶಿಕಲಾ ಮುಂದಿನ ನಡೆಯೇನು?

01:13 AM Jan 28, 2021 | Team Udayavani |

ಹೊಸದಿಲ್ಲಿ: ತಮಿಳುನಾಡು ಮಾಜಿ ಸಿಎಂ ದಿ| ಜಯಲಲಿತಾ ಅವರ ಆಪೆ¤ ಶಶಿಕಲಾ ನಟರಾಜನ್‌ ಕೊನೆಗೂ ಜೈಲಿನಿಂದ ಬಿಡುಗಡೆಯಾಗಿದ್ದು, ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಗುವ ಲಕ್ಷಣ ಗೋಚರಿಸಿದೆ. ಸದ್ಯದಲ್ಲೇ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಶಶಿಕಲಾ ಮುಂದಿನ ನಡೆ ಏನು ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ.

Advertisement

ಶಶಿಕಲಾ ಜೈಲು ಸೇರಿದ ಬಳಿಕ ರಾಜಕೀಯದಲ್ಲಿ ಹಲವು ಬದಲಾವಣೆಗಳಾಗಿವೆ. ಜೈಲಿಗೆ ಹೋಗುವ ಮುನ್ನ ಸ್ವತಃ ಶಶಿಕಲಾ ಅವರೇ ಪನ್ನೀರ್‌ಸೆಲ್ವಂರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದರು. ಆದರೆ ಈಗ ಅವರೇ ಎಐಎಡಿಎಂಕೆ ಸೇರಿ ಡಿಸಿಎಂ ಕೂಡ ಆಗಿದ್ದಾರೆ. ಶಶಿಕಲಾ ಅವರೇ ಆಯ್ಕೆ ಮಾಡಿದ್ದ ಪಳನಿಸ್ವಾಮಿ ಅವರು ಪನ್ನೀರ್‌ಸೆಲ್ವಂರೊಂದಿಗೆ ಕೈಜೋಡಿಸಿದ್ದಾರೆ. ಹೀಗಿರುವಾಗ ಶಶಿಕಲಾ ನಡೆ ಕುತೂಹಲ ಮೂಡಿಸಿದೆ. ತೇವಾರ್‌ ಸಮುದಾಯದಲ್ಲಿ ಶಶಿಕಲಾರ ಪ್ರಭಾವ ಇನ್ನೂ ಕಡಿಮೆಯಾಗಿಲ್ಲ. ಹೀಗಾಗಿ ಅವರು ಮತ್ತೆ ಪಕ್ಷ ಸೇರುತ್ತಾರೋ ಅಥವಾ ತಮಗೆ ದ್ರೋಹ ಎಸಗಿದವರ ಮೇಲೆ ಪ್ರತೀಕಾರ ತೀರಿಸಲು ಹೊಸ ಕಾರ್ಯತಂತ್ರ ರೂಪಿಸುತ್ತಾರೋ ಕಾದು ನೋಡಬೇಕು.

ಎಐಎಡಿಎಂಕೆಗೆ ಮರು ಸೇರ್ಪಡೆ :

ಪಳನಿಸ್ವಾಮಿ ಮತ್ತು ಪನ್ನೀರ್‌ಸೆಲ್ವಂ ಜತೆ ಹೊಂದಾಣಿಕೆ ಮಾಡಿಕೊಂಡು ಎಐಎಡಿಎಂಕೆಗೆ ಮತ್ತೆ ಸೇರ್ಪಡೆಯಾಗುವುದು. ಈಗಿರುವಂತೆ ಸರಕಾರವನ್ನು ಅವರಿಬ್ಬರೂ ನಡೆಸಿ ಕೊಂಡು ಹೋಗುವಾಗ, ತಾವು ಪಕ್ಷದ ನಾಯಕತ್ವ ವಹಿಸಿಕೊಳ್ಳುವುದು. ಆದರೆ, ಇದಕ್ಕೆ ಪಳನಿಸ್ವಾಮಿ ಒಪ್ಪುವ ಸಾಧ್ಯತೆ ಕಡಿಮೆ.

ಎಐಎಡಿಎಂಕೆ- ಎಎಂಎಂಕೆ ಮೈತ್ರಿ :

Advertisement

ಶಶಿಕಲಾ ಸಂಬಂಧಿ ಟಿಟಿವಿ ದಿನಕರನ್‌ ಸ್ಥಾಪಿಸಿರುವ ಪಕ್ಷ ಎಎಂಎಂಕೆ ಹಾಗೂ ಆಡಳಿತಾರೂಢ ಎಐಎಡಿಎಂಕೆ ಮೈತ್ರಿ ಮಾಡಿಕೊಳ್ಳುವುದು. ಎಐಎಡಿಎಂಕೆಯ ಅನೇಕ ಹಿರಿಯ ನಾಯಕರು ಈ ಆಯ್ಕೆ ಬಗ್ಗೆ ಸಮ್ಮತ ಹೊಂದಿದ್ದಾರೆ. ಅಲ್ಲದೆ ಇದು ಪಕ್ಷಕ್ಕೂ ಚುನಾವಣೆಯಲ್ಲಿ ನೆರವಾಗಲಿದೆ ಎನ್ನುವುದು ಹಲವರ ಅಭಿಪ್ರಾಯ.

ಎಎಂಎಂಕೆಯಿಂದ ತೃತೀಯ ರಂಗ : ಎಐಎ ಡಿಎಂಕೆಯನ್ನು ಸೋಲಿಸಲೆಂದೇ ಎಎಂಎಂಕೆ ತೃತೀಯ ರಂಗ ರಚನೆ. 2019ರ ಲೋಕಸಭೆ ಚುನಾವಣೆಯಲ್ಲಿ ದಿನಕರನ್‌ ಅವರ ಪಕ್ಷವು ಶೇ.4ರಷ್ಟು ಮತಗಳನ್ನು ಪಡೆದಿತ್ತು (ಎಐಎಡಿಎಂಕೆಯ ಶೇ.15 ಮತಗಳು). ಸರಕಾರದ ಪರವಾದ ಮತಗಳನ್ನು ವಿಭಜನೆ ಮಾಡಿ ಶಶಿಕಲಾ ಪ್ರತೀಕಾರ ತೀರಿಸಿಕೊಳ್ಳಬಹುದು.

ರಾಜಕೀಯದಿಂದ ನಿರ್ಗಮನ :

ರಜನಿಕಾಂತ್‌ ಮಾದರಿಯಲ್ಲೇ ಅನಾರೋಗ್ಯದ ನೆಪ ಹೇಳಿ ರಾಜಕೀಯದಿಂದ ದೂರ ಉಳಿ ಯುವುದು. ಆದರೆ ಶಶಿಕಲಾ ಅಷ್ಟು ಬೇಗ ಸೋಲೊಪ್ಪಿಕೊಳ್ಳುವುದಿಲ್ಲ ಎನ್ನುತ್ತಾರೆ ಅವರ ಆಪ್ತರು. ಜೈಲಿಗೆ ಹೋಗುವ ಮುನ್ನ ಜಯಲಲಿತಾ ಅವರ ಸ್ಮಾರಕದ ಮುಂದೆ ನೆಲಕ್ಕೆ ಮೂರು ಬಾರಿ ಕೈಬಡಿಯುವ ಮೂಲಕ ಶಪಥ ಮಾಡಿದ್ದನ್ನು ಸ್ಮರಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next