Advertisement

ಅಯೋಧ್ಯೆಯಲ್ಲಿ CM ಯೋಗಿ ಅದಿತ್ಯನಾಥ್‌ ಬೃಹತ್‌ ದೀಪೋತ್ಸವ

06:50 PM Oct 18, 2017 | udayavani editorial |

ಅಯೋಧ್ಯೆ : ಬೆಳಕಿನ ಹಬ್ಬ ದೀಪಾವಳಿಯ ಅತೀ ದೊಡ್ಡ ಅಚರಣೆಯ ರೂಪದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಅಯೋಧ್ಯೆಯ ಸರಯೂ ನದೀ ತಟದಲ್ಲಿ  ಬೃಹತ್‌ ದೀಪೋತ್ಸವವನ್ನು ಆಚರಿಸಿದರು.

Advertisement

ದೀಪಾವಳಿಯ ಮುನ್ನಾ ದಿನ ಎರಡು ಸಾವಿರಕ್ಕೂ ಅಧಿಕ ಶಾಲೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಎರಡು ಲಕ್ಷ ದೀಪಗಳನ್ನು ಉರಿಸಿರುವುದನ್ನು ಗಿನ್ನೆಸ್‌ ವಿಶ್ವ ದಾಖಲೆಯಲ್ಲಿ ಸೇರ್ಪಡೆಗೊಳಿಸಲು ಅಯೋಧ್ಯಾ ನಗರಿ ಈಗ ಕಾತರದಿಂದ ಕಾಯುತ್ತಿದೆ. 

ಇಂದು ಬೃಹತ್‌ ದೀಪೋತ್ಸವಕ್ಕೆ ಚಾಲನೆ ನೀಡಲು ಯೋಗಿ ಆದಿತ್ಯನಾಥ್‌ ಅವರು ನಿಗದಿತ ವೇಳೆಗೆ ಒಂದು ತಾಸು ಮುನ್ನವೇ ಅಯೋಧ್ಯಾ ನಗರಿಗೆ ಆಗಮಿಸಿದರು. ವಿಶ್ವ ದಾಖಲೆಯಾಗಿ ದೀಪೋತ್ಸವವನ್ನು ಅಚರಿಸುವ ಸಂಭ್ರಮೋಲ್ಲಾಸ ವಿದ್ಯಾರ್ಥಿ ವಿದ್ಯಾರ್ಥಿನಿಯರಲ್ಲಿ ಆಗಸವನ್ನು ಮುಟ್ಟುವಂತಿತ್ತು. 

ಆಯೋಧ್ಯೆಯು ಮಾನವತೆಯ ಪುಣ್ಯಭೂಮಿಯಾಗಿದೆ. ರಾಮ ರಾಜ್ಯ ಪೌರಾಣಿಕ ಪರಿಕಲ್ಪನೆಯ ಮೂಲಕ ಮಾನವತೆ ಎಂದರೇನು ಎಂಬುದನ್ನು  ನಾವು ಇಡಿಯ ಜಗತ್ತಿಗೆ ಕಲಿಸಿದವರಾಗಿದ್ದೇವೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದರು. 

ಭಗವಾನ್‌ ಶ್ರೀರಾಮನನ್ನು ವಿರೋಧಿಸುವವರು ಅಯೋಧ್ಯೆಯನ್ನು ಅಭಿವೃದ್ಧಿಪಡಿಸುವ ನಮ್ಮ ಯತ್ನಗಳನ್ನು ತಡೆಯಲಾರರು ಎಂದು ಯೋಗಿ ಹೇಳಿದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next