Advertisement

ಪುರುಷೋತ್ತಮ ಪೂಂಜರಿಗೆ ಸರ್ಪಂಗಳ ಪ್ರಶಸ್ತಿ

06:00 AM Jul 27, 2018 | |

ಕರುಣರಸ, ವಿಷಾದ ಭಾವಗಳನ್ನು ಪ್ರಧಾನವಾಗಿರಿಸಿಕೊಂಡು ಪ್ರಸಂಗ ಬರೆದು “ಸ್ಟಾರ್‌ವ್ಯಾಲ್ಯೂ’ ಪಡೆಯುವುದು ಕಷ್ಟ. ಆದರೆ, ಮಾನಿಷಾದ  ಪ್ರಸಂಗ, ಪುರುಷೋತ್ತಮ ಪೂಂಜರಿಗೆ “ಸ್ಟಾರ್‌ ವ್ಯಾಲ್ಯೂ’ ತಂದುಕೊಟ್ಟಿತು. ಅದರಲ್ಲಿ ವೀರ, ಹಾಸ್ಯ, ಶೃಂಗಾರ ಇಲ್ಲವೆಂದಲ್ಲ ; ಸಹೃದಯ ಪ್ರೇಕ್ಷಕನ ಮನಸ್ಸಿನಲ್ಲಿ ಸ್ಥಾಯಿಯಾಗಿ ಉಳಿಯುವುದು “ಕರುಣ’ ಮಾತ್ರ. ಅದೇ ಪ್ರಸಂಗದ ಘನತೆ. ಕವಿ ಪುರುಷೋತ್ತಮ ಪೂಂಜರದ್ದೂ ಘನತೆಯ ವ್ಯಕ್ತಿತ್ವವೇ.

Advertisement

ನಾಲ್ಕು ದಶಕಗಳ ಕಾಲ ವಿವಿಧ ಮೇಳಗಳಲ್ಲಿ ಭಾಗವತಿಕೆ ಮಾಡಿದ್ದ ಪುರುಷೋತ್ತಮ ಪೂಂಜರು, ಮತೊ¤àರ್ವ ಹಿರಿಯ ಭಾಗವತರಾದ ಕುರಿಯ ಗಣಪತಿ ಶಾಸ್ತ್ರಿಗಳಿಂದ, “ಪರಿಪೂರ್ಣ ಭಾಗವತ’ ಎಂದು ಹೊಗಳಿಸಿಕೊಂಡವರು. ಅವರು ಮದ್ದಲೆಯ ವಾದನ ಕುಶಲಿ, ಚೆಂಡೆ ನುಡಿತದಲ್ಲಿÉಯೂ ಪರಿಣತ. ಪೂರ್ಣಪ್ರಮಾಣದ “ಚೆಂಡೆ ಪೀಠಿಕೆ’ ಪ್ರಸ್ತುತಪಡಿಸಬಲ್ಲ ಅನುಭವಿ. ನಾಟ್ಯಾಭಿನಯ, ಹೆಜ್ಜೆಗಾರಿಕೆಗಳನ್ನು ಬಲ್ಲ ಪರಿಪೂರ್ಣ ವೇಷಧಾರಿ. ಬಣ್ಣಗಾರಿಕೆಯ ಪರಿಶ್ರಮಿ. ತಾಳಮದ್ದಲೆಯಲ್ಲಿ ಯಾವುದೇ ಪಾತ್ರವನ್ನು ಅನಾವರಣಗೊಳಿಸಬಲ್ಲ ಸಮರ್ಥ ಅರ್ಥಧಾರಿ. ಉಳಿದ ಪಾತ್ರಧಾರಿಗಳಿಗೆ “ಅರ್ಥ’ವನ್ನು, ಪ್ರಸಂಗದ ನಡೆಯನ್ನು ಹೇಳಿಕೊಡಬಲ್ಲ ನಿರ್ದೇಶಕ. ಪ್ರಸಂಗ ರಚನೆಯಲ್ಲಂತೂ ಅವರದ್ದು ಮೇಲ್ಪಂಕ್ತಿಯ ಹೆಸರು. ಪೌರಾಣಿಕ-ಕಾಲ್ಪನಿಕ ಎರಡೂ ವಿಭಾಗಗಳಲ್ಲಿ, ತುಳು-ಕನ್ನಡ ಎರಡೂ ಭಾಷೆಗಳಲ್ಲಿ ಸುಮಾರು 35ಕ್ಕಿಂತಲೂ ಅಧಿಕ ಪ್ರಸಂಗಗಳ ರಚಯಿತ. ಷೇಕ್ಸ್‌ಪಿಯರ್‌ನಂಥ ಪಾಶ್ಚಾತ್ಯ ನಾಟಕಕಾರನ ಕತೆಗಳನ್ನು ಯಕ್ಷಗಾನದ ಪ್ರಸಂಗವಾಗಿ ಅಳವಡಿಸಿದ ಪ್ರಯೋಗಶೀಲ.

1953ರಲ್ಲಿ ಮಂಗಳೂರು ತಾಲೂಕಿನ ಮಂಜನಾಡಿಯ ಬೊಟ್ಟಿಕೆರೆಯಲ್ಲಿ ಜನಿಸಿದ ಪುರುಷೋತ್ತಮ ಪೂಂಜರು ಮಂಗಳೂರು ಸರಕಾರಿ ಕಾಲೇಜಿನ ಬಿ.ಎಸ್ಸಿ. ಪದವೀಧರರು. ಕಾಲೇಜಿಗೆ ಹೋಗುತ್ತಿರುವಾಗಲೇ ಯಕ್ಷಗಾನದ ಉತ್ಕಟ ಸೆಳೆತ ಇತ್ತು. ಪಿಯುಸಿಯಲ್ಲಿ ವೈಶಾಲಿನಿ  ಪರಿಣಯ ಪ್ರಸಂಗ ಬರೆದು ಕವಿ ಎನಿಸಿಕೊಂಡವರು. ಪುರುಷೋತ್ತಮರಿಗೆ ಯಕ್ಷಗಾನದ ವಿವಿಧ ವಿಭಾಗಗಳನ್ನು ಕಲಿಸಿ ಗುರುವಾಗಿ ಒದಗಿದವರು ಅನೆಗುಂಡಿ ಗಣಪತಿ ಭಟ್ಟರು. 

ಜುಲೈ 28ರಂದು ಉಡುಪಿಯ ಪೂರ್ಣಪ್ರಜ್ಞ ಸಭಾಗೃಹದಲ್ಲಿ ಜರಗುವ ಸರ್ಪಂಗಳ ಸುಬ್ರಹ್ಮಣ್ಯ ಭಟ್‌ ಸ್ಮಾರಕ “ಏಳನೆಯ ವರ್ಷದ ಯಕ್ಷೋತ್ಸವ’ದಲ್ಲಿ ಪುರುಷೋತ್ತಮ ಪೂಂಜರನ್ನು ಪ್ರಶಸ್ತಿಯೊಂದಿಗೆ ಗೌರವಿಸಲಾಗುತ್ತಿದೆ.

ಶ್ರೀಕುಮಾರ್‌ ಕೆ. ಎನ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next