Advertisement

Bhatkal: ಸಾರ್ವಕರ್‌ ನಾಮಫಲಕ, ಭಗವಾಧ್ವಜ ತೆರವು

11:43 PM Mar 07, 2024 | Team Udayavani |

ಭಟ್ಕಳ: ತಾಲೂಕಿನ ತೆಂಗಿನಗುಂಡಿ ಬಂದರಿನಲ್ಲಿ ಸೋಮವಾರ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ನೇತೃತ್ವದಲ್ಲಿ  ಹಾಕಿದ್ದ ವೀರ ಸಾರ್ವಕರ್‌ ನಾಮಫಲಕ ಹಾಗೂ ಭಗವಾಧ್ವಜವನ್ನು ಬುಧವಾರ ಮಧ್ಯರಾತ್ರಿ ಹೆಬಳೆ ಗ್ರಾಪಂ ಅಧಿಕಾರಿಗಳು  ತೆರವುಗೊಳಿಸಿದ್ದಾರೆ.

Advertisement

ಈ ಹಿಂದೆ ಹಾಕಲಾಗಿದ್ದ ನಾಮ ಫಲಕವನ್ನು ಗ್ರಾಪಂ ಅಧಿಕಾರಿಗಳು ಜ.28ರಂದು ತೆರವುಗೊಳಿಸಿ ಜೆಸಿಬಿ ಮೂಲಕ ಕಟ್ಟೆಯನ್ನು ತೆಗೆದಿದ್ದರು. ನಾಮಫಲಕ ಮರುಸ್ಥಾಪನೆ  ಆಗ್ರಹಿಸಿ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರು, ಬಿಜೆಪಿಗರು ಜ.30ರಂದು ಹೆಬಳೆ ಗ್ರಾಪಂ ಎದುರು ಪ್ರತಿಭಟನೆ ನಡೆಸಿ, ನಾಮಫಲಕ ಹಾಕಲು ಕಟ್ಟೆಯನ್ನು ಪುನಃ ನಿರ್ಮಿಸಿದ್ದರು. ಸೋಮವಾರ ಕಾರ್ಯಕರ್ತರ ಭೇಟಿಗೆ ಭಟ್ಕಳಕ್ಕೆ ಆಗಮಿಸಿದ್ದ  ಅನಂತಕುಮಾರ ಹೆಗಡೆ ನೇತೃತ್ವದಲ್ಲಿ  ಸಾರ್ವಕರ್‌ ನಾಮಫಲಕ ಅಳವ ಡಿಸಿ, ಭಗವಾಧ್ವಜ ಹಾರಿಸಲಾಗಿತ್ತು.  ಘಟನೆಗೆ ಸಂಬಂಧಿಸಿ  ಅನಂತ ಕುಮಾರ  ಸಹಿತ 21 ಜನರ ಮೇಲೆ  ಪ್ರಕರಣ ಕೂಡ ದಾಖಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next