Advertisement

ಸರ್ವಜ್ಞನ ವಚನಗಳಿಂದ ಸಮಾಜ ಬದಲಾವಣೆ

04:26 PM Mar 01, 2021 | Team Udayavani |

ಗಜೇಂದ್ರಗಡ: ಸಮಾಜದ ಅಂಕು- ಡೊಂಕುಗಳನ್ನುನೇರ ವಿಮರ್ಶೆ ಮೂಲಕ ಜನಸಾಮಾನ್ಯರಿಗೆ ಸರಳವಾಗಿ ತಿಳಿಯಲು ತ್ರಿಪದಿ ರಚಿಸಿದ್ದಾರೆ. ಈ ನಿಟ್ಟಿನಲ್ಲಿ ಸರ್ವಜ್ಞನ ವಚನಗಳ ಪಾತ್ರ ಹಿರಿದಾಗಿದೆ ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.

Advertisement

ಪಟ್ಟಣದ ಕುಂಬಾರ ಓಣಿಯ ಸಮುದಾಯ ಭವನದಲ್ಲಿ ಕುಂಬಾರ ಸಮಾಜ ಹಾಗೂ ತಾಲೂಕಾಡಳಿತವತಿಯಿಂದ ನಡೆದ 501ನೇ ಸರ್ವಜ್ಞ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. ಸರ್ವಜ್ಞನ ವಚನಗಳು ಇಡೀ ಜನಮಾನಸವನ್ನೇ ಆವರಿಸಿದೆ. ಇಂದಿನ ವೈಭವೀಕರಣ ಮತ್ತು ಆಡಂಬರ ಬದುಕಿನ ವ್ಯವಸ್ಥೆಯಲ್ಲಿ ಮಕ್ಕಳು ಮತ್ತು ಯುವ ಜನತೆ ಪ್ರಜ್ಞಾಪೂರ್ವಕವಾಗಿ ಹಾಗೂ ಎಲ್ಲರೊಂದಿಗೆ ಅನ್ಯೋನ್ಯವಾಗಿ ಸಹಬಾಳ್ವೆ ನಡೆಸಲು ಜತೆಗೆ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ವಚನಗಳು ಸಹಕಾರಿ ಎಂದರು.

ಉಪನ್ಯಾಸಕ ಡಾ| ಮಲ್ಲಿಕಾರ್ಜುನ ಕುಂಬಾರಮಾತನಾಡಿ, ಸಮಾಜದಲ್ಲಿ ಅಸಮಾನತೆ, ತಾರತಮ್ಯ,ಮೂಢನಂಬಿಕೆ ತೊಡೆದು ಹಾಕಲು ವಿಶೇಷ ಆದ್ಯತೆನೀಡಿದ ಸರ್ವಜ್ಞ ಸಮಾನ ಸಮಾಜ ಕಟ್ಟುವ ಕನಸುಕಂಡಿದ್ದರು. ಆದರೆ ಈಗಲೂ ಜಾತೀಯತೆ ಎಂಬಪೆಡಂಭೂತ ಸಮಾಜದಿಂದ ನಿರ್ಮೂಲನೆಗೊಂಡಿಲ್ಲ ಎಂದು ವಿಷಾದಿಸಿದರು.

ಯಲಬುರ್ಗಾ ಶ್ರೀಧರ ಮುರಡಿ ಮಠದ ಬಸವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಸಮಾಜದ ಅಧ್ಯಕ್ಷ ಬಸವರಾಜ ಕುಂಬಾರ ಅಧ್ಯಕ್ಷತೆ ವಹಿಸಿದ್ದರು.

ಈ ವೇಳೆ ಬಿ.ಎಂ. ಸಜ್ಜನರ, ಲೀಲಾವತಿ ಸವಣೂರ, ಸಂಗಪ್ಪ ಕುಂಬಾರ, ನಾಗಪ್ಪ ಕುಂಬಾರ, ಕಳಕಪ್ಪ ಕುಂಬಾರ, ಬಾಲು ಕುಂಬಾರ, ವಿ.ಜಿ. ಕುಂಬಾರ,ಚನ್ನಬಸಪ್ಪ ಕುಂಬಾರ, ರೇಣುಕರಾಜ ಕುಂಬಾರ ಇತರರಿದ್ದರು.

Advertisement

ಮೆರಗು ತಂದ ಮೆರವಣಿಗೆ :

ಕುಂಬಾರ ಓಣಿಯಿಂದಆರಂಭವಾದ ಸರ್ವಜ್ಞಭಾವಚಿತ್ರ ಮೆರವಣಿಗೆಯಲ್ಲಿಸಮುದಾಯದವರು, ಸಕಲಮಂಗಲ ವಾದ್ಯಗಳೊಂದಿಗೆಪಟ್ಟಣದ ಬಸವೇಶ್ವರ ವೃತ್ತ, ದುರ್ಗಾ ವೃತ್ತ, ಜೋಡುರಸ್ತೆ, ಶ್ರೀ ಕಾಲಕಾಲೇಶ್ವರವೃತ್ತದ ಮೂಲಕ ಪ್ರಮುಖಬೀದಿಗಳಲ್ಲಿ ಸಂಚರಿಸಿಬಳಿಕ ಕುಂಬಾರ ಓಣಿಯಲ್ಲಿಸಮುದಾಯ ಭವನತಲುಪಿತು. ಮೆರವಣಿಗೆಯಲ್ಲಿ ಮಹಿಳೆಯರು ಕುಂಭದೊಂದಿಗೆ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next