Advertisement

ಲೋಕದ ಅಂಕುಡೊಂಕು ತಿದ್ದಿದ ಮಹಾಕವಿ ಸರ್ವಜ್ಞ

12:06 PM Feb 22, 2019 | |

ಶಿವಮೊಗ್ಗ: ಸಾಮಾನ್ಯ ಜನರೊಂದಿಗೆ ಸಾಮಾನ್ಯರಂತೆ ಬೆರೆತು ಲೋಕದ ಅಂಕುಡೊಂಕುಗಳನ್ನು ತಿದ್ದಿದ ಮಹಾಕವಿ ಸರ್ವಜ್ಞ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ್‌ ಹೇಳಿದರು.

Advertisement

 ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕುಂಬಾರರ ಸಂಘ ಹಾಗೂ ಮಹಾನಗರ ಪಾಲಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಸಾಹಿತ್ಯವನ್ನು ಓದಿ ಅರ್ಥೈಸಿಕೊಳ್ಳಬಹುದು ಆದರೆ ನೆನಪಿನಲ್ಲಿಡುವುದು ಕಷ್ಟ. ಆದರೆ ಸರ್ವಜ್ಞನ ವಚನಗಳು ಸಾಮಾನ್ಯ ಜನರು ಸಹ ಅರ್ಥೈಸಿಕೊಂಡು ನೆನಪಿನಲ್ಲಿ ಉಳಿಸಿಕೊಂಡಿದ್ದಾರೆ. ಸರ್ವಜ್ಞನ ವಚನಗಳಲ್ಲಿ ಮೂಡದ ಯಾವ ವಿಚಾರಧಾರೆಗಳು ಸಿಗುವುದಿಲ್ಲ ಆತ ಸಂಪೂರ್ಣ ಜ್ಞಾನಿಯಾಗಿದ್ದ ಎಂದರು. ಸರ್ವಜ್ಞ ಹೇಗೆ ಜ್ಞಾನದ ಮಹತ್ತರ ಘಟ್ಟ ಏರಿದ ಎಂಬುದು ಸ್ಪಷ್ಟವಾಗಿ ನಿಲುಕುವುದಿಲ್ಲ. ಆದರೆ ಆತನೇ ವಚನವೊಂದರಲ್ಲಿ ತಿಳಿಸಿರುವಂತೆ ಸರ್ವರಿಂದ ಒಂದೊಂದು ನುಡಿ ಕಲಿತು ಸರ್ವಜ್ಞನಾದವನು ಎಂದು ಹೇಳಿರುವುದನ್ನು ಈ ಸಂದರ್ಭದಲ್ಲಿ ನೆನಪಿಸಿದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಕತ್ತಿಗೆ ಗಂಗಾಧರಪ್ಪ, ಸಮಾಜದ ಉನ್ನತಿಗೆ ಶ್ರಮಿಸಿದ ಮಹಾನ್‌ ವ್ಯಕ್ತಿಗಳಲ್ಲಿ ಸರ್ವಜ್ಞ ಪ್ರಮುಖನಾದವನು. ಆತನ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗುವ ಅಗತ್ಯ ಇದೆ ಎಂದರು.

ಉಪನ್ಯಾಸ ನೀಡಿದ ಇನ್ನೋರ್ವ ಉಪನ್ಯಾಸಕ ಬಸವರಾಜ ಎಂ., ಬಸವಣ್ಣ, ಸರ್ವಜ್ಞ ಮುಂತಾದ ಸಾಮಾಜಿಕ ಚಳುವಳಿಗಾರರನ್ನು ಮೇಲ್ವರ್ಗದಿಂದ ಬಂದವರು ಎಂದು ಕತೆ ಕಟ್ಟಲಾಗಿದೆ. ಆದರೆ ಅವರ್ಯಾರು ಮೇಲ್ಜಾತಿಯವರಲ್ಲ ಎಂದರು. 

Advertisement

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಎಸ್‌.ಪಿ ಶೇಷಾದ್ರಿ ವಹಿಸಿದ್ದರು. ಜಿಲ್ಲಾ ಕುಂಬಾರರ ಸಂಘದ ಅಧ್ಯಕ್ಷ ಚಂದ್ರಶೇಖರಪ್ಪ, ತಾಲೂಕು ಕುಂಬಾರರ ಸಂಘದ ಅಧ್ಯಕ್ಷ ಎಸ್‌. ಮಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ನಾಯಕ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next