Advertisement
ಭಾರತೀಯ ಸಂಸ್ಕೃತಿಯಲ್ಲಿ ಸರ್ಪಗಳಿಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಸರ್ಪ, ನಾಶದ ಸಂಕೇತವೂ ಹೌದು. ಫಲವಂತಿಕೆಯ ಸಂಕೇತವೂ ಹೌದು. ನಮ್ಮ ಪುರಾಣದ ಪರಿಕಲ್ಪನೆಯಲ್ಲಿ ಸೃಷ್ಟಿಯ ನಂತರದ ಸ್ಥಿತಿ ಹಾಗೂ ಲಯಗಳಿಗೆ ಅಧಿಪತಿಯಾದ ವಿಷ್ಣು ಮತ್ತು ಪರಮೇಶ್ವರರು ಕ್ರಮವಾಗಿ ಸರ್ಪವನ್ನು ಹಾಸಿಗೆಯನ್ನಾಗಿಯೂ ಸರ್ಪವನ್ನು ಕೊರಳಿಗೆ ಅಲಂಕಾರವನ್ನಾಗಿಯೂ ಉಪಯೋಗಿಸಿಕೊಂಡಿದ್ದಾರೆ. ಹಾಲ್ಗಡಲಲ್ಲಿ ತಣ್ಣನೆಯ ಮೈಯ ಆದಿಶೇಷನೆಂಬ ಹಾವಿನ ಮೇಲೆ ಮಲಗಿದ ವಿಷ್ಣುಗೆ ಸದಾ ಲಕ್ಷಿ$¾ ಕಾಲು ಒತ್ತುತ್ತಿರಬೇಕು. ತಣ್ಣನೆಯ ಮೈಯ ತಣ್ಣನೆಯ ಆದಿಶೇಷನ ತಟಸ್ಥ ಸ್ಥಿತಿ ವಿಷ್ಣುವಿಗೆ ಬಾಧಿಸಬಾರದೆಂದಾರೆ ಕಾಲೊತ್ತುವ ಲಕ್ಷಿ$¾à ಕಾಲಿನ ಜೀವಂತಿಕೆಯ ಘಟಕಗಳನ್ನು ವಿಷ್ಣುವಿನಲ್ಲಿ ಅಬಾಧಿತಳಾಗಿಸುತ್ತಾಳೆ. ಹಾಗೆಯೇ ನಂಜುಂಡ ನಂಜನ್ನು ಕುಡಿದಾಗ ಪಾರ್ವತಿ ಶಿವನ ಕಂಠ ಸವರುತ್ತ ವಿಷವು ದೇಹದೊಳಗೆ ಪ್ರವೇಶಿಸದಂತೆ ತಡೆಯುತ್ತಾಳೆ. ಇದರಿಂದ ಶಿವನಿಗೆ ವಿಷದಿಂದ ಉಂಟಾಗುವ ಕಂಟಕ ತಪ್ಪುತ್ತದೆ. ಒಟ್ಟಿನಲ್ಲಿ ವಿಷಮಯವಾದ ಸರ್ಪ ಸೃಷ್ಟಿ ಹಾಗೂ ಲಯಗಳ ನಡುವೆ ಒಂದು ಸಮತೋಲನವನ್ನು ನೆರವೇರಿಸಿದೆ.
Related Articles
Advertisement
ಸಂತಾನ ಭಾಗ್ಯಕ್ಕೆ ತೊಂದರೆ, ವಿಳಂಬಕ್ಕೆ ಸರ್ಪಶಾಪ
ಮುಖ್ಯವಾಗಿ ಸಂತಾನ ಸ್ಥಾನಕ್ಕೆ ಸರ್ಪಶಾಪ ಅಂಟಿದಾಗ ಮಕ್ಕಳು ಹುಟ್ಟಿ ಬಾಧೆ ಹೊಂದುವುದು, ಮಕ್ಕಳೂ ಸಾಯುವುದು ಇತ್ಯಾದಿ ಅಲ್ಲದೆ ಮಕ್ಕಳೇ ಆಗದಿರುವ ತಾಪತ್ರಯ ಎದುರಾಗಬಹುದು. ಮಕ್ಕಳಾಗುವಾಗ ಬಹಳಷ್ಟು ವಿಳಂಬ ನೆರವೇರುವ, ಸಮಾಜದಲ್ಲಿ ಕಿರಿಕಿರಿ ಅನುಭವಿಸುವ ಯಾತನೆ ಎದುರಾಗಬಹಗುದು. ಸಂತಾನ ಸ್ಥಾನಕ್ಕೆ ದೋಷವಿದ್ದಾಗ ಎಂದೇ ಅಲ್ಲ ಭಾಗ್ಯ ಹಾಗೂ ಸುಖ ಸ್ಥಾನಗಳ ಸಂಬಂಧ ತಾನು ಪಡೆದ ತಾನು ಪಡೆದ ದೋಷಗಳಿಂದಾಗಿ ಏನೇ ರೀತಿಯಲ್ಲಿ ಸಂತಾನ ಸ್ಥಾನದೊಂದಿಗೆ ಏನಾದರೂ ಬಹುಮುಖ್ಯವಾದ ಕಿಂಚತ್ ಸಂಬಂಧ ಹೊಂದಿದ್ದರೆ ಸಂತಾನ ಹೀನತೆ ಉಂಟಾಗಬಹುದು. ಹುಟ್ಟಿದ ಮಕ್ಕಳಿಂದ ಬಹುವಿಧವಾದ ಕಿರುಕುಳಗಳನ್ನು ಎದುರಿಸಬಹುದು. ಈ ನಿಟ್ಟಿನಲ್ಲಿ ಶನೈಶ್ಚರನೂ, ಚಂದ್ರನೂ ತಂತಮ್ಮ ಒಟ್ಟಾಗಿರುವ ಸ್ಥಿತಿ ಅಥವಾ ಪರಸ್ಪರ ದೃಷ್ಟಿ ಹೊಂದಿದ್ದಾಗಲೂ ಸಂತಾನದ ವಿಷಯದಲ್ಲಿ ಕಿರುಕುಳಗಳು ಕಟ್ಟಿಟ್ಟ ಬುತ್ತಿ. ಯಾವಾಗಲೂ ಶನೈಶ್ಚರನ ಜೊತೆಗಿನ ಚಂದ್ರ ಯುತಿ ಅನೇಕ ಕಿರಿಕಿರಿಗಳನ್ನು ಎದುರಿಗಿಡುತ್ತದೆ. ಶನಿಕಾಟದ ಸಂದರ್ಭದಲ್ಲಿ ವಿಪರೀತವಾಗಿ ಸಂತಾನದ ವಿಷಯದಲ್ಲಿ ಜಗಳಗಳು ಎದುರಾದೀತು. ಅನೇಕ ಉದಾಹರಣೆಗಳೊಂದಿಗೆ ಈ ವಿಚಾರಗಳನ್ನು ಶ್ರುತಪಡಿಸ ಬಹುದಾಗಿದೆ. ಸ್ಪಷ್ಟವಾಗಿ ಇಂಥ ಬವಣೆ ಕಿರಿಕಿರಿ ಹೊಂದಿದವರ ವಿಷಯದಲ್ಲಿ ಇವರ ಜಾತಕದಲ್ಲಿ ಸರ್ಪದೋಷ ಅಥವಾ ಶಾಪ ಅಚ್ಛಾದಿತವಾಗಿರುತ್ತದೆ. ಹೀಗಾಗಿಯೇ ಭಾರತೀಯ ಸಂಸ್ಕೃತಿಯಲ್ಲಿ ಸರ್ಪಶಾಪ ಅಥವಾ ಸರ್ಪದೋಷಗಳನ್ನು ಬಹು ಪ್ರಮುಖವಾಗಿ ಪರಿಗಣಿಸುತ್ತಾರೆ.
ಸರ್ಪಪ್ರತಿಷ್ಠೆ ಅಥವಾ ಸರ್ಪ ಸಂಸ್ಕಾರ ಇತ್ಯಾದಿ ರಾಹು ಜಪ ಸಂತಾನ ಗೋಪಾಲ ಜಪ ಇತ್ಯಾದಿ ಪರಿಹಾರ ಸ್ವರೂಪವಾಗಿ ನೆರವೇರಿಸುತ್ತಾರೆ. ಈ ಸರ್ಪಶಾಪ ಜನ್ಮ ಜನ್ಮಾಂತರದಿಂದ ಅಂಟಿಕೊಂಡು ಬಂದ ಸೂಚನೆಗಳು ಜಾತಕದಲ್ಲಿ ದೊರಕುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಹಾವು ಹಡೆಯುವುದನ್ನಾಗಲೀ, ಹೊಡೆಯುವುದನ್ನು ನೋಡುವುದಾಗಲೀ ಪಾಪ ಎಂದು ಪರಿಗಣಿಸಲ್ಪಟ್ಟಿದೆ. ಆದರೆ ಇಂಥದೊಂದು ಮೂಢನಂಬಿಕೆಯಲ್ಲಿ ನಖಶಿಖಾಂತವಾಗಿ ಮುಳುಗಿರುವುದು ಬೇಡ. ಅನಿವಾರ್ಯವಾದ ಸಂದರ್ಭದಲ್ಲಿ ಆತ್ಮ ರಕ್ಷಣೆಗಾಗಿ ಸರ್ಪವನ್ನು ವಿಷಪ್ರಾಣಿಯಾದುದರಿಂದ ಅನಿವಾರ್ಯವಾಗಿ ಹೊಡೆಯಲೇ ಬೇಕಾಗುತ್ತದೆ. ಹೀಗೆ ಹೊಡೆದದ್ದರಿಂದಾಗಿ ಸರ್ರನೆ ಒಬ್ಬನ ಜಾತಕದಲ್ಲಿ ಆ ಕೂಡಲೇ ಸರ್ಪ ಶಾಪ ಬಂದು ಬೇರು ಬಿಟ್ಟು ಬಿಡುವುದಿಲ್ಲ. ಸರ್ಪಶಾಪದ ಕಲ್ಪನೆಯೇ ಬೇರೆ. ಆ ಕಲ್ಪನೆಯ ಪ್ರಕಾರ ಸರ್ಪವನ್ನು ಸಂಕೇತಿಸುವ ರಾಹು ರಾಹುವನ್ನು ಒಳಗೊಳ್ಳುವ ಗ್ರಹಗಳು ಒಟ್ಟಾರೆಯಾದ ಅದರ ದುರ್ಬಲ ಸ್ಥಿತಿಯ ಸಂದರ್ಭದಲ್ಲಿ ಒಂದಿಷ್ಟು ತಡೆಯಲು ತೊಡಕಾಗುವ ಅಗಾಧ ಚಡಪಡಿಕೆ ಅಸಹಾಯಕತೆಗಳಿಗೆ ಕಾರಣವಾಗುತ್ತದೆ. ಇದು ಸತ್ಯ.
ಯಾರು ಮಕ್ಕಳಿಂದ ತೊಂದರೆ ಗೀಡಾಗಿದ್ದಾರೆ?
ಇಲ್ಲಿ ಇವರೆಲ್ಲ ಯಾರು ಎಂಬ ಎಂಬ ಹೆಸರುಗಳು ಬೇಡ. ಸೂಕ್ಷ್ಮವಾಗಿ ಅವರನ್ನು ಪ್ರಸ್ಥಾಪಿಸುತ್ತೇನೆ. ಜಾತಕ ಶಾಸ್ತ್ರದಲ್ಲಿ ಸರ್ಪದೋಷ ಶಾಪ ಹಾಗೂ ಇದನ್ನು ಸುತ್ತವರಿದು ಕಾಡುವ ಗ್ರಹಗಳು ಹೇಗೆ ಸಂತಾನದ ವಿಷಯದಲ್ಲಿ ವಿಳಂಬ, ಸಂತಾನಹೀನತೆ ಮಕ್ಕಳ ಕಾಟ, ತಮ್ಮೆದುರೇ ನಕ್ಕಳು ಪರದಾಡುವ ವಿಚಾರ ಗಮನಿಸುತ್ತಾರೆ. ಪರದಾಡುತ್ತಾರೆಂಬುದನ್ನು ಉದಾಹರಿಸಲು ಸರ್ಪಶಾಪ ಎಂಬುದು ಒಂದು ಸುಮ್ಮನೆ ಒಂದು ಕಟ್ಟು ಕತೆಯ ಎಂದು ಪ್ರತಿಪಾದಿಸಲು.
ಬಹಳ ಪ್ರಮುಖವಾದ ಹೆಸರುಗಳಿಸಿದ ನಮ್ಮ ದೇಶದ ದೊಡ್ಡ ರಾಜ್ಯದ ಮುಖ್ಯಮಂತ್ರಿಯೊಬ್ಬರಿಗೆ ಸಂತಾನ ಭಾಗ್ಯರಲಿಲ್ಲ. ಚಾಣಕ್ಯ ಮುಖ್ಯಮಂತ್ರಿ ಎಂದು ಹೆಸರು ಗಳಿಸಿದ ಜನಾಕರ್ಷಣೆಯಿಂದ ಮಿಂಚಿದ ಮುಖ್ಯಮಂತ್ರಿ ಒಬ್ಬರು ಮಗನಿಂದ ಅಂತ್ಯಕಾಲದಲ್ಲಿ ಯಾತನೆ ಪಟ್ಟರು. ಬಹು ಪ್ರಖ್ಯಾತ ಮಹಿಳೆಯೊಬ್ಬರು ಮಗನಿಂದ ಇನ್ನಿಲ್ಲದ ತೊಂದರೆಗಳನ್ನು ಎದುರುಹಾಕಿಕೊಂಡರು. ಜನಪ್ರಿಯ ನಟ 50,60,70ರ ದಶಕದಲ್ಲಿ ಹೆಸರು ಮಾಡಿದ ಹೆಸರಾಂತ ಚಲನಚಿತ್ರ ನಟರೊಬ್ಬರಿಗೆ ಸಂತಾನ ಭಾಗ್ಯ ಕೂಡಿ ಬರಲೇ ಇಲ್ಲ. ಇನ್ನೊಬ್ಬ ಇದೇ ರೀತಿಯ ಜನಪ್ರಿಯ ಪ್ರಖ್ಯಾತ ನಟ ತನ್ನ ಸಾವಿನ ದಿನಗಳವರೆಗೂ ಮಗನಿಂದಾಗಿ ಎದುರಿಸಿದ ಸಂಕಟ ಅಂತಿಂಥದ್ದಲ್ಲ. ಸಾಹಿತಿಗಳು ಮಾಜಿ ಮುಖ್ಯಮಂತ್ರಿಗಳು ಸಾಂಸ್ಕೃತಿಕ ವಕ್ತಾರರು ಎಂಬೆಲ್ಲ ದೊಡ್ಡ ಯಾದಿಯೇ ಇದೆ. ಸರ್ಪದೋಷ ಸರ್ಪಶಾಪ ಇವರನ್ನೆಲ್ಲಾ ಕಾಡಿ ಹಣ್ಣುಗಾಯಿ ನೀರುಗಾಯಿ ಯಾಗಿಸಿದೆ.
ಅನಂತಶಾಸ್ತ್ರೀ